ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವರ್ ಸಮಸ್ಯೆ, ಎರಡು ದಿನದಿಂದ HDFC ಆಪ್ ಡೌನ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ಸತತವಾಗಿ ಎರಡು ದಿನದಿಂದ ಬ್ಯಾಂಕಿನ ಮೊಬೈಲ್ ಅಪ್ಲಿಕೇಷನ್ ಬಳಸಲು ಆಗದೆ ಪರದಾಡಿದ್ದಾರೆ. ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಣಿಸಿಕೊಂಡ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

ಬ್ಯಾಂಕಿನ ಸಿಬ್ಬಂದಿ ಈ ಬಗ್ಗೆ ಸರಿಯಾದ ಮಾಹಿತಿ, ಪ್ರತಿಕ್ರಿಯೆ ನೀಡದಿರುವುದು ಗ್ರಾಹಕರು ಆಕ್ರೋಶಗೊಳ್ಳುವಂತೆ ಮಾಡಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.

Technical Glitch Hits HDFC Website, Mobile App; Services Down For 2nd Straight Day

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್ ಡಿ ಎಫ್ ಸಿ ವಕ್ತಾರರು, ''ಸರ್ವರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಗ್ರಾಹಕರಿಗೆ ಲಾಗಿನ್ ಆಗಲು ಸಾಧ್ಯವಾಗಿಲ್ಲ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಆಪ್ ವರ್ಕ್ ಆಗಿಲ್ಲ. ಈ ಬಗ್ಗೆ ತಜ್ಞರು ರಿಪೇರಿ ಕಾರ್ಯದಲ್ಲಿ ತೊಡಗಿದ್ದು, ಸೇವೆಯನ್ನು ಶೀಘ್ರದಲ್ಲೇ ಪುನರ್ ಸ್ಥಾಪಿಸಲಾಗುವುದು. ಗ್ರಾಹಕರಿಗೆ ಈಗ ಆಗಿರುವ ತೊಂದರೆಗೆ ವಿಷಾದಿಸುತ್ತೇವೆ"ಎಂದಿದ್ದಾರೆ.

2019ನೇ ಸಾಲಿನ ಏಷ್ಯಾಮನಿಯ ಶ್ರೇಷ್ಠ ಬ್ಯಾಂಕ್ ಪ್ರಶಸ್ತಿ, ಶ್ರೇಷ್ಠ ಡಿಜಿಟಲ್ ಬ್ಯಾಂಕ್ ಪ್ರಶಸ್ತಿಯನ್ನು ಗಳಿಸಿರುವ ಎಚ್ ಡಿ ಎಫ್ ಸಿ ಸೇವೆ ಬಗ್ಗೆ ಗ್ರಾಹಕರು ಕಿಡಿಕಾರಿದ್ದಾರೆ.

ಎಚ್ ಡಿ ಎಫ್ ಸಿ ಗ್ರಾಹಕರಿಗೆ ಶುಭ ಸುದ್ದಿ, ಬಡ್ಡಿ ದರ ಇಳಿಕೆಎಚ್ ಡಿ ಎಫ್ ಸಿ ಗ್ರಾಹಕರಿಗೆ ಶುಭ ಸುದ್ದಿ, ಬಡ್ಡಿ ದರ ಇಳಿಕೆ

ಸುಮಾರು 4.5 ಕೋಟಿ ಗ್ರಾಹಕರನ್ನು ಹೊಂದಿದೆ. ಸೋಮವಾರದಂದು ಅನೇಕ ಮಂದಿಗೆ ಸಂಬಳದಿನವಾಗಿದ್ದರಿಂದ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಕೆ ಅಧಿಕವಾಗಿತ್ತು.

ಶ್ರೇಷ್ಠ ಡಿಜಿಟಲ್ ಬ್ಯಾಂಕ್ ಪ್ರಶಸ್ತಿ

2019ನೇ ಸಾಲಿನ ಏಷ್ಯಾಮನಿಯ ಶ್ರೇಷ್ಠ ಬ್ಯಾಂಕ್ ಪ್ರಶಸ್ತಿ, ಶ್ರೇಷ್ಠ ಡಿಜಿಟಲ್ ಬ್ಯಾಂಕ್ ಪ್ರಶಸ್ತಿಯನ್ನು ಗಳಿಸಿರುವ ಎಚ್ ಡಿ ಎಫ್ ಸಿ ಸೇವೆ ಬಗ್ಗೆ ಗ್ರಾಹಕರು ಕಿಡಿಕಾರಿದ್ದಾರೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಈ ರೀತಿಯಾಗಿದೆ. ಎಲ್ಲವೂ ಸರಿ ಹೋಗಲಿದೆ ಎಂದು ಪ್ರತಿಕ್ರಿಯಿಸಿದೆ

ಸಮಸ್ಯೆ ಹೇಳಿಕೊಂಡವರಿಗೆ ಒಂದೇ ಉತ್ತರ

ಸುಮಾರು 4.5 ಕೋಟಿ ಗ್ರಾಹಕರನ್ನು ಹೊಂದಿದೆ. ಸೋಮವಾರದಂದು ಅನೇಕ ಮಂದಿಗೆ ಸಂಬಳದಿನವಾಗಿದ್ದರಿಂದ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಕೆ ಅಧಿಕವಾಗಿತ್ತು.

ಸಮಸ್ಯೆ ಹೇಳಿಕೊಂಡವರಿಗೆಲ್ಲ ಒಂದೇ ರೀತಿಯ ಉತ್ತರ ನೀಡಿದ ಎಚ್ ಡಿ ಎಫ್ ಸಿ ಬಗ್ಗೆ ಗ್ರಾಹಕರು ಗರಂ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ.

ಎಚ್ ಡಿ ಎಫ್ ಸಿಗೆ ದಂಡ ವಿಧಿಸಬಾರದೇ?

ಎಚ್ ಡಿ ಎಫ್ ಸಿಗೆ ದಂಡ ವಿಧಿಸಬಾರದೇ? ಪ್ರತಿಯೊಂದಕ್ಕೂ ಶುಲ್ಕ ವಿಧಿಸುವ ಬ್ಯಾಂಕ್ ಈ ರೀತಿ ಗ್ರಾಹಕರಿಗೆ ತೊಂದರೆ ನೀಡುವುದು ಎಷ್ಟು ಸರಿ? ಈ ಬಗ್ಗೆ ಆರ್ ಬಿಐ ಏಕೆ ಕ್ರಮ ಜರುಗಿಸುವುದಿಲ್ಲ ಎಂದು ಅಮೋಲ್ ಎಂಬುವರು ಪ್ರಶ್ನಿಸಿದ್ದಾರೆ.

ಗ್ರಾಹಕರಿಗೆ ಮಾಹಿತಿ ನೀಡಬಾರದೇಕೆ?

ತಾಂತ್ರಿಕ ಸಮಸ್ಯೆ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬಾರದೇಕೆ? ಗ್ರಾಹಕರಿಗೆ ಸರಿಯಾದ ಸೇವೆ ನೀಡುವುದನ್ನು ಬ್ಯಾಂಕ್ ಮರೆತ್ತಿದ್ದೆಯೇ? ಎಂದು ಪ್ರಶ್ನಿಸಿದ್ದಾರೆ. ಆದರೆ, ಎಚ್ ಡಿ ಎಫ್ ಸಿ ಕಡೆಯಿಂದ ಎಲ್ಲಕ್ಕೂ ಒಂದೇ ಬಗೆಯ ಉತ್ತರ ಬಂದಿದೆ.

English summary
HDFC Bank Ltd customers were unable to use the bank’s mobile app and the net banking facility for the second day in a row. The services have remained out of bounds for most since at least 10 AM Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X