ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀಮೇಲ್ : ನೀವು ಕಳಿಸಿದ ಪತ್ರ ತಕ್ಷಣಕ್ಕೆ ರವಾನಿಸಿಲ್ಲ

By Mahesh
|
Google Oneindia Kannada News

ನ್ಯೂಯಾರ್ಕ್, ಜೂ.24: ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ನ ತಂತ್ರಜ್ಞರು ವರ್ಷಾನುಗಟ್ಟಲೇ ಸಂಶೋಧನೆ ನಡೆಸಿ ಇಮೇಲಿಂಗ್ ವ್ಯವಸ್ಥೆಗೆ ಹೊಸ ಸೌಲಭ್ಯವನ್ನು ಒದಗಿಸಿದ್ದಾರೆ. ಇದರಂತೆ ಜೀಮೇಲ್ ಮೂಲಕ ಕಳಿಸುವ ಇ ಮೇಲ್ ಗಳು ತಕ್ಷಣಕ್ಕೆ ರವಾನೆಯಾಗುವುದಿಲ್ಲ. ಮೇಲ್ ರೀ ಸೆಂಡ್ ಮಾಡುವ ಅವಕಾಶ ಸಿಗಲಿದೆ.

ಜೀಮೇಲ್ ನಲ್ಲಿ ಈಗ "Undo Send" ಬಟನ್ ಹೊಸದಾಗಿ ಲಭ್ಯವಿದೆ. ಆತುರಕ್ಕೆ ಕಳಿಸಿದ ಇಮೇಲ್ ನಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ತಿದ್ದು ಮತ್ತೊಮ್ಮೆ ಕಳಿಸಬಹುದು. ಈ ಆಯ್ಕೆ ಬಳಸಿಕೊಳ್ಳಲು ಸುಮಾರು 6 ರಿಂದ 30 ಸೆಕೆಂಡುಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ನೀವು ಕಳಿಸಿದ ಮೇಲ್ ತಕ್ಷಣಕ್ಕೆ ರವಾನೆಯಾಗುವುದಿಲ್ಲ.

Google

ಜೀಮೇಲ್ ಲ್ಯಾಬ್ ನ ತಂತ್ರಜ್ಞರು ಹೊಸ ಇನ್ ಬಾಕ್ಸ್ ಒದಗಿಸಿದ ಬೆನ್ನಲ್ಲೇ ಈ Undo ಸೌಲಭ್ಯ ಒದಗಿಸಿದೆ. ಅದರೆ, ಈ ಸೌಲಭ್ಯ ಸಾಮಾನ್ಯವಾಗಿ ಚಾಲ್ತಿಯಲ್ಲಿರುವುದಿಲ್ಲ, ಜೀಮೇಲ್ ನಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ Undo Send ಪಕ್ಕದಲ್ಲಿರುವ ಬಾಕ್ಸ್ ಚೆಕ್ ಮಾಡಬೇಕು. ಜೊತೆಗೆ ಇಮೇಲ್ ಕ್ಯಾನ್ಸಲ್ ಮಾಡಲು ಬೇಕಾದ ಸೆಕೆಂಡು ಗಳ ಆಯ್ಕೆಯನ್ನು (5ರಿಂದ 30)ಮಾಡಿಕೊಳ್ಳಬಹುದು. (ಪಿಟಿಐ)

English summary
Technology giant Google will now help its users avoid misdirected or inappropriate emails with the 'Undo' option that allows them to cancel delivery of an email within 30 seconds of hitting the send button.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X