ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಂಡೋಸ್ 10 ಉಚಿತ ಅಪ್ಗ್ರೇಡ್, ಏನಿದರ ವಿಶೇಷ?

By Mahesh
|
Google Oneindia Kannada News

ಬೆಂಗಳೂರು,ಜುಲೈ. 30: ಮೈಕ್ರೊಸಾಫ್ಟ್ ತನ್ನ ಗ್ರಾಹಕರಿಗೆ ವಿಂಡೋಸ್ 10 ಲಭ್ಯತೆಯನ್ನು ಘೋಷಿಸಿದೆ. ಉಚಿತ ಅಪ್ಗ್ರೇಡ್ (ನಿಯಮಿತ ಅವಧಿಗೆ ಜೆನೈನ್ ವಿಂಡೋಸ್ 7, 8/8.1 ಬಳಕೆದಾರರಿಗೆ) ಅಥವಾ ಹೊಸ ಪಿಸಿ ಮತ್ತು ಟ್ಯಾಬ್ಲೆಟ್ ಗಳೊಂದಿಗೆ ವಿಂಡೋಸ್ 10 ಲಭ್ಯವಿದೆ.

ವಿಂಡೋಸ್ 10 ಎಕ್ಸ್ ಬಾಕ್ಸ್, ಕೊರ್ಟನ ಮತ್ತು ಮೈಕ್ರೊಸಾಫ್ಟ್ ಎಡ್ಜ್ ಗಳನ್ನು ಹೊಂದಿದ್ದು, ಇವು ವೈಯಕ್ತಿಕ ಬಳಕೆ ಅನುಭವ ಮತ್ತು ಕಾರ್ಯದಕ್ಷತೆಯನ್ನು ಇನ್ನಷ್ಟು ಉತ್ಕೃಷ್ಟವಾಗಿಸುತ್ತವೆ. ಯಾವಾಗಲೂ ಅತ್ಯಂತ ಸುರಕ್ಷಿತ ವಿಂಡೋಸ್ ಆಗಿರುವ ವಿಂಡೋಸ್ 10 ತಾನಾಗಿಯೇ ಸಂಶೋಧನೆ ಮತ್ತು ಸುರಕ್ಷತೆಗಳಿಗೆ ಅಪ್ಡೇಟ್ ಆಗುತ್ತದೆ.[ಮ್ಯಾಕ್ ಬಳಕೆದಾರರಿಗೆ ಲಭ್ಯವಿರುವ ಆಫೀಸ್ 2016 ವೈಶಿಷ್ಟ್ಯಗಳು]

ಪಿಸಿ, ಟ್ಯಾಬ್ಲೆಟ್, ಫೋನ್, ಎಕ್ಸ್ ಬಾಸ್ ಒನ್, ಹೊಲೊಲೆನ್ಸ್ ಮತ್ತಿತರ 2,000ಕ್ಕೂ ಅಧಿಕ ಸಾಧನಗಳಿಗೆ ವಿಂಡೋಸ್ 10 ಲಭ್ಯವಿದೆ. ಹೊಸ ವಿಂಡೋಸ್ ಸ್ಟೋರ್ ಮತ್ತು ವಿಂಡೋಸ್ ಸಾಫ್ಟ್‍ವೇರ್ ಅಭಿವೃದ್ಧಿ ಕಿಟ್ ಕೂಡ ಬುಧವಾರದಿಂದ ಲಭ್ಯವಿದೆ.

ವಿಶ್ವದಾದ್ಯಂತ ಜನರು 13 ದೇಶಗಳಲ್ಲಿ ವಿಂಡೋಸ್ 10 ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ. ನೂತನವಾದ ವರ್ಷಾವಧಿ ಕಾರ್ಯಕ್ರಮದೊಂದಿಗೆ ಈ ಸಂಭ್ರಮ ನಡೆಯುತ್ತಿದೆ. ಮೈಕ್ರೊಸಾಫ್ಟ್ ಜನರಿಗೆ ನಿಮ್ಮ ಜಗತ್ತನ್ನು ಹೇಗೆ ಅಪ್ಗ್ರೇಡ್ ಮಾಡಬಹುದು ಎಂಬ ಯೋಜನೆಯೊಂದಿಗೆ ಉತ್ತೇಜಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಮಾಡುವ ಮೂಲಕ, ವೋಟ್ ಮಾಡುವ ಮೂಲಕ ಜನ ಇದರಲ್ಲಿ ಸಕ್ರಿಯರಾಗಬಹುದು. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ನೋಡಬಹುದು.

ಮೈಕ್ರೊಸಾಫ್ಟ್ ಇಂಡಿಯಾ ಅಧ್ಯಕ್ಷ ಭಾಸ್ಕರ್ ಪ್ರಮನಿಕ್

ಮೈಕ್ರೊಸಾಫ್ಟ್ ಇಂಡಿಯಾ ಅಧ್ಯಕ್ಷ ಭಾಸ್ಕರ್ ಪ್ರಮನಿಕ್

* ವಿಂಡೋಸ್ 10 ಈವರೆಗಿನ ವಿಂಡೋಸ್ ಗಳಲ್ಲಿ ಅತ್ಯುತ್ತಮವಾಗಿದ್ದು. 190 ದೇಶಗಳಲ್ಲಿ ಉಚಿತ ಅಪ್ಗ್ರೇಡ್ ಲಭ್ಯ.
* ಅತ್ಯಂತ ವೈಯಕ್ತಿಕ ಮತ್ತು ಉತ್ಪಾದಕ ಉತ್ಪನ್ನ. ಹೆಚ್ಚು ಸುರಕ್ಷಿತ ಮತ್ತು ಸುಭದ್ರ. ಹಾಗೂ ಅತ್ಯಂತ ಜನಪ್ರಿಯ.
* ಭಾರತದಲ್ಲಿ 1500ಕ್ಕೂ ಅಧಿಕ ರೀಟೇಲ್ ಮಳಿಗೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
* ನಾನು ಸಂತಸಗೊಂಡಿದ್ದೇನೆ ಮತ್ತು ಭಾರತದ ಮತ್ತು ಬಹುರಾಷ್ಟ್ರೀಯ ಹಲವು ಪಾಲುದಾರರು ಈ ಸೇವೆ ನೀಡಲು ಸನ್ನದ್ಧರಾಗಿದ್ದಾರೆ.

ವಿಂಡೋಸ್ 10: ಹಿಂದೆಂದಿಗಿಂತ ಅತ್ಯುತ್ತಮ

ವಿಂಡೋಸ್ 10: ಹಿಂದೆಂದಿಗಿಂತ ಅತ್ಯುತ್ತಮ

* ವಿಂಡೋಸ್ 10 ಅತ್ಯಂತ ವೇಗಯುತ, ಸ್ಟಾರ್ಟ್ ಮೆನು, ಲೈವ್ ಟೈಲ್ಸ್, ಸ್ಟ್ರೀಮಿಂಗ್ ಅಪ್ಡೇಟ್, ಅತ್ಯಂತ ಸುರಕ್ಷಿತ
* ಡಿಫೆಂಡರ್ ಮತ್ತು ಸ್ಮಾರ್ಟ್ ಸ್ಕ್ರೀನ್ ವೈರಸ್ ವಿರುದ್ಧ ಸಹಾಯ.
* ಆಫೀಸ್ ಮತ್ತು ಸ್ಕೈಪ್, ಹಲೊ, ಪಾಸ್ ವರ್ಡ್ ಸಹಿತ ವೇಗಯುತ ಲಾಗಿನ್ . ಉಚಿತ ಅಪ್ಡೇಟ್ ಗಳಿಂದಾಗಿ ಅಪ್ಡೇಟ್ ಕೂಡ ಸುಲಭವಾಗಿದೆ.

* ವಾಯ್ಸ್, ಪೆನ್ ಮತ್ತು ಗೆಸ್ಚರ್ ಇನ್‍ಪುಟ್ ಗಳು ಹೊಸ ಅನುಭವ.

ವಿಂಡೋಸ್ 10 ವಿಶೇಷತೆಗಳು

ವಿಂಡೋಸ್ 10 ವಿಶೇಷತೆಗಳು

* ಕೊರ್ಟನ: ಸರಿಯಾದ ಮಾಹಿತಿ ಹುಡುಕಲು ಸರಿಯಾದ ಸಮಯದಲ್ಲಿ ಸಹಾಯ ಮಾಡುವ ಪರಿಕರ
* ನ್ಯೂ ಮೈಕ್ರೊಸಾಫ್ಟ್ ಎಡ್ಜ್: ಜನ ವೇಗಯುತವಾಗಿ ಬ್ರೌಸ್,ಮಾರ್ಕ್, ವೆಬ್ ಶೇರ್ ಮಾಡಬಹುದು.
* ಅಭಿವೃದ್ಧಿಗೊಂಡ ಎಕ್ಸ್ ಬಾಕ್ಸ್ ಆಪ್ಲಿಕೇಷನ್, ಫ್ರೆಂಡ್ಸ್, ಗೇಮ್
* ಕಾಂಟಿನಂ: ಸುಂದರವಾದ ಟಚ್ ಮತ್ತು ಡೆಸ್ಕಟಾಪ್ ಅನುಭವ ನೀಡುವ ಅಪ್ಲಿಕೇಷನ್.
* ಬಿಲ್ಟ್ ಇನ್ app: ಫೋಟೊ, ಮ್ಯಾಪ್, ಮೈಕ್ರೊಸಾಫ್ಟ್ ಹೊಸ ಮ್ಯೂಸಿಕ್ , ಗ್ರೂವ್, ಮೂವಿ ಆಂಡ್ ಟಿವಿ, ಒನ್ ಡ್ರೈವ್

ವಿಂಡೋಸ್ 10: ವಹಿವಾಟಿಗೆ ಅತ್ಯುತ್ತಮ ವೇದಿಕೆ

ವಿಂಡೋಸ್ 10: ವಹಿವಾಟಿಗೆ ಅತ್ಯುತ್ತಮ ವೇದಿಕೆ

ಲಕ್ಷಾಂತರ ಐಟಿ ವೃತ್ತಿಪರರ ಪ್ರತಿಕ್ರಿಯೆಯಿಂದ ರೂಪುಗೊಂಡ ವಿಂಡೋಸ್ 10, ವಿಂಡೋಸ್ ನಲ್ಲಿ ಹಿಂದೆಂದಿಗಿಂತ ಹೆಚ್ಚು ಪರೀಕ್ಷೆಗೊಂಡ ಆವೃತಿ. ಕಾರ್ಪೊರೇಟ್ ವಹಿವಾಟಿಗೆ ಸಿದ್ಧಸೂತ್ರದಂತಿರುವ ವಿಂಡೋಸ್ ಇದಾಗಿದ್ದು, ಸೈಬರ್ ಅಟ್ಯಾಕ್ ನಿಂದ ಸುರಕ್ಷತೆ ನೀಡುತ್ತದೆ. ಸಿಬ್ಬಂದಿಗೆ ಕೆಲಸಸ್ನೇಹಿ ಅನುಭವ ನೀಡುತ್ತದೆ. ಸಿಬ್ಬಂದಿ ಆಧುನಿಕ ತಂತ್ರಜ್ಞಾನದೊಂದಿಗೆ ಸದಾ ಅಪ್ಡೇಟ್ ಆಗುತ್ತಿರಬಹುದು. ಉದ್ಯಮ ಮಟ್ಟದ ಭದ್ರತೆಯೊಂದಿಗೆ ರೂಪುಗೊಂಡಿದ್ದು, ಗ್ರಾಹಕರು ಹೆಚ್ಚು ಭದ್ರತೆ ಆಯ್ಕೆಗಳೊಂದಿಗೆ ಪಾಸ್‍ವರ್ಡ್ ಬದಲಿಸಿಕೊಳ್ಳಬಹುದು.

ವಿಂಡೋಸ್ 10ನಲ್ಲಿ ಲಭ್ಯವಿರುವ ಟಾಪ್ Apps

ವಿಂಡೋಸ್ 10ನಲ್ಲಿ ಲಭ್ಯವಿರುವ ಟಾಪ್ Apps

ವಿಂಡೋಸ್ 8.1ನಲ್ಲಿನ ಪ್ರಮುಖ appಗಳಾದ ನೆಟ್ಫಿಕ್ಸ್, ಪ್ಲಿಪ್ ಬೋರ್ಡ್, ಮಿಂಟ್.ಕಾಂ, ಆಸ್ಪಾಟ್ 8, ದಿ ವೆದರ್ ಚಾನೆಲ್ ಕೂಡ ಲಭ್ಯ. ಮೈನೆಕ್ರಾಫ್ಟ್: ಬೀಟಾ, ಹುಲು, ಐಹರ್ಟ್ ರೇಡಿಯೊ, ಯುಎಸ್‍ಎ ಟುಡೆ, ಕ್ಯಾಂಡಿ ಕ್ರಶ್ ಸಾಗ ಮೊದಲಾದವು ಲಭ್ಯವಿದೆ. ವಿಚಾಟ್, ಕ್ಯುಕ್ಯು ಶೀಘ್ರದಲ್ಲಿ ಲಭ್ಯವಾಗಲಿದೆ. ಜೊಟೊಮೊ, ಬುಕ್ ಮೈಶೋ, ಜಬಾಂಗ್, ಗಾನ ಮತ್ತು ಮೊಬಿವಿಕ್ ಮೊದಲಾದ ಭಾರತದ ಅಪ್ಲಿಕೇಷನ್ ಗಳು ಕೂಡ ಶೀಘ್ರದಲ್ಲಿ ಜಾಗತಿಕವಾಗ ಲಭ್ಯವಾಗಲಿದೆ.

ಸುಲಭ ಅಪ್ಗ್ರೇಡ್ ಗೆ ಇಲ್ಲಿದೆ ಮಾರ್ಗ

ಸುಲಭ ಅಪ್ಗ್ರೇಡ್ ಗೆ ಇಲ್ಲಿದೆ ಮಾರ್ಗ

ವಿಂಡೋಸ್ 10ಗೆ ಅಪ್ಗ್ರೇಡ್ ಆಗುವುದು ಈಗ ಸುಲಭ. ಅಧಿಕೃತವಾದ ವಿಂಡೋಸ್ 7, 8,1 ಬಳಕೆದಾರರು ಪಿಸಿ ಅಥವಾ ಟ್ಯಾಬ್ಲೆಟ್ ನಲ್ಲಿ ಸುಲಭವಾಗಿ ಇದನ್ನು ಅಪ್ಗ್ರೇಡ್ ಮಾಡಿಕೊಳ್ಳಬಹುದು. ನೋಂದಾವಣಿ ಮಾಡಿಕೊಂಡವರಿಗೆ ಬುಧವಾರದಿಂದ ಸೂಚನೆ ಲಭಿಸಲಿದೆ. ಉದ್ಯಮ ಗ್ರಾಹಕರಿಗೆ ಆಗಸ್ಟ್.1ರಿಂದ ವಿಂಡೋಸ್ 10 ಲಭ್ಯವಾಗಲಿದೆ.

1 ಲಕ್ಷಕ್ಕೂ ಅಧಿಕ ತರಬೇತುಗೊಂಡ ರೀಟೇಲರ್ ಗಳು ಮತ್ತು 10 ಸಾವಿರ ಮಳಿಗೆಗಳನ್ನು ವಿಶ್ವದಾದ್ಯಂತ ವಿಂಡೋಸ್ ಹೊಂದಿದೆ. ಉಚಿತ ಅಪ್‍ಗ್ರೇಡ್ ಕಾರ್ಯಕ್ರಮ ಲಭ್ಯವಿದೆ.

ಮೈಕ್ರೊಸಾಫ್ಟ್ ಇಂಡಿಯಾ ಕುರಿತು

ಮೈಕ್ರೊಸಾಫ್ಟ್ ಇಂಡಿಯಾ ಕುರಿತು

1975ರಲ್ಲಿ ಆರಂಭಗೊಂಡ ಮೈಕ್ರೊಸಾಫ್ಟ್ ಸಾಫ್ಟ್‍ವೇರ್, ಸೇವೆ, ಉತ್ಪನ್ನ ಮತ್ತು ಪರಿಹಾರಗಳಲ್ಲಿ ಜಾಗತಿಕ ನಾಯಕ. ಭಾರತದಲ್ಲಿ 1990ರಿಂದ ವಹಿವಾಟು ನಡೆಸುತ್ತಿದೆ. ಇಂದು ಭಾರತದಲ್ಲಿ 6000 ನೌಕರರನ್ನು ಹೊಂದಿದೆ. ಭಾರತದ 9 ನಗರಗಳಾದ ಅಹಮದಾಬಾದ್, ಬೆಂಗಳೂರು,ಚೆನ್ನೈ, ದಿಲ್ಲಿ ಎನ್ ಸಿಆರ್ ,ಹೈದ್ರಾಬಾದ್,ಕೊಚ್ಚಿ,ಕೊಲ್ಕತಾ,ಮುಂಬೈ ಮತ್ತು ಪುಣೆಯಲ್ಲಿ ತನ್ನ ನಾನಾ ಕಚೇರಿಗಳನ್ನು ಹೊಂದಿದೆ. ಹೆಚ್ಚಿನ ವಿವರಗಳಿಗೆ ನೋಡಿ

English summary
Microsoft will start rolling out its new operating system Windows 10 around the world, including India, with a host of new features as the long-time leader in PC software tries to lure back consumers who gave up on Windows for mobile devices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X