ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವರಕ್ಷಕ ಸ್ಮಾರ್ಟ್ ಫೋನ್ ಆಪ್: ರಕ್ತದಾನಕ್ಕೆ ಬ್ಲಡ್ ಫಾರ್ ಶ್ಯೂರ್

By Mahesh
|
Google Oneindia Kannada News

ಬೆಂಗಳೂರು, ನ.30: 'ರಕ್ತದಾನ ಮಹಾದಾನ' ಎಂಬ ಮಾತಿದೆ. ಆದರೆ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ಸಮಯಕ್ಕೆ ರಕ್ತ ಸಿಗದೆ ಪರದಾಡುವ ಸಂದರ್ಭಗಳು ಎದುರಾಗುತ್ತದೆ. ಇಂಥ ಸಂದರ್ಭಗಳಲ್ಲಿ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಜೀವರಕ್ಷಕವಾಗಬಲ್ಲುದು. ರಕ್ತದಾನಕ್ಕೆ ನೆರವಾಗುವ ಆಂಡ್ರಾಯ್ಡ್ ಅಪ್ಲಿಕೇಷನ್ ಬ್ಲಡ್ ಫಾರ್ ಶ್ಯೂರ್ ಪರಿಚಯ ನಿಮ್ಮ ಮುಂದಿದೆ.

ರಕ್ತದಾನ ಮಾಡಲು ಪರಿಚಯಸ್ಥರು, ಗೆಳೆಯರ ನೆರವು ಪಡೆಯಬಹುದು ಅಥವಾ ಬ್ಲಡ್ ಬ್ಯಾಂಕ್ ಗಳಿಂದ ಪಡೆಯಬಹುದು. ಆದರೆ, ಎಷ್ಟೇ ಸಂಪರ್ಕವಿದ್ದರೂ ರಕ್ತ ಸಿಗುವುದೇ ದುರ್ಲಭವಾಗುತ್ತದೆ. ಜೊತೆಗೆ ಸಿಕ್ಕ ರಕ್ತ ಕೆಲ ಅವಶ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಅಸ್ವಸ್ಥರಿಗೆ ನೀಡಬೇಕಾಗುತ್ತದೆ. [60ಸೆಕೆಂಡ್ಸ್ ನೌ ಅಪ್ಲಿಕೇಷನ್ : ಇದು ಕನ್ನಡ ಸುದ್ದಿಗಳ ರಾಶಿ]

ಆಪ್ತೇಷ್ಟರಿಗೆ ಸಮಸ್ಯೆ ಬಂದಾಗ ಕಂಗಾಲಾದ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದು ತೋಚುವುದಿಲ್ಲ. ರಕ್ತ ಬೇಕು ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ ತಕ್ಷಣಕ್ಕೆ ಸಿಗುವುದಿಲ್ಲ. [ಬಿಎಂಟಿಸಿ ಆಪ್: ಬೆರಳ ತುದಿಯಲ್ಲೇ ಪ್ರಯಾಣ ಮಾಹಿತಿ]

ಬ್ಲಡ್ ಬ್ಯಾಂಕ್ ಗಳಲ್ಲೂ ಎಲ್ಲಾ ಸಮಯದಲ್ಲಿ ನೆರವು ನಿರೀಕ್ಷಿಸಲಾಗದು. ಹೀಗಾಗಿ ಎಲ್ಲರ ಕೈಗೆ ಉಪಯುಕ್ತವಾದ ಆಂಡ್ರಾಯ್ಡ್ ಅಪ್ಲಿಕೇಷನ್ ಮಾಡಿ ಬಿಡಲಾಗಿದೆ ಎಂದು ಬೆಂಗಳೂರು ಮೂಲದ ಅರೇರಾ ಟೆಕ್ನಾಲಜೀಸ್ ನ ಯುವಕರು.

ಬ್ಲಡ್ ಫಾರ್ ಶ್ಯೂರ್ ಅಪ್ಲಿಕೇಷನ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ನೀವು ಕೂಡಾ ಒಮ್ಮೆ ನಿಮ್ಮ ಮೊಬೈಲ್ ನಲ್ಲಿ ಸ್ಥಾಪಿಸಿಕೊಂಡು ಪ್ರಯತ್ನಿಸಿ..

ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ

ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ

ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಬ್ಲಡ್ ಫಾರ್ ಶ್ಯೂರ್ ಎಂದು ಟೈಪಿಸಿ ಸರ್ಚ್ ಕೊಡಿ ಇಲ್ಲದಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ. ನಿಮ್ಮ ಸುತ್ತಾ ಮುತ್ತಾ ಇರುವ ರಕ್ತದಾನಿಗಳು, ಬ್ಲಡ್ ಬ್ಯಾಂಕ್ ಮಾಹಿತಿ ಸುಲಭವಾಗಿ ಪಡೆದುಕೊಳ್ಳಿ. ದಾನಿಗಳನ್ನು ಸಂಪರ್ಕಿಸಿ ರಕ್ತವನ್ನು ಪಡೆದುಕೊಳ್ಳಿ.

ನೀವು ರಕ್ತದಾನ ಮಾಡಬಹುದು

ನೀವು ರಕ್ತದಾನ ಮಾಡಬಹುದು

ರಕ್ತದಾನಿಗಳ ಮಾಹಿತಿ, ಬ್ಲಡ್ ಬ್ಯಾಂಕ್ ಮಾಹಿತಿ ಜೊತೆಗೆ ನೀವು ಕೂಡಾ ರಿಜಿಸ್ಟರ್ ಮಾಡಿಕೊಂಡು ರಕ್ತದಾನ ಮಾಡಬಹುದು. ನಿಮಗೆ ಎಷ್ಟು ರಕ್ತ ಬೇಕು ಯಾವ ಗುಂಪಿನ ರಕ್ತ ಬೇಕು ಎಂಬುದನ್ನು ಸುಲಭ ಪ್ರಕ್ರಿಯೆ ಮೂಲಕ ಪಡೆದುಕೊಳ್ಳಬಹುದು. ರಕ್ತದಾನ ಬಗ್ಗೆ ಇರುವ ನಿಮ್ಮ ಪ್ರಶ್ನೆಗಳಿಗೆ ಉತ್ತರವೂ ಇಲ್ಲಿ ಸಿಗುತ್ತದೆ.

ಈ ಎಲ್ಲಾ ಸೌಲಭ್ಯಗಳು ಉಚಿತವಾಗಿದೆ

ಈ ಎಲ್ಲಾ ಸೌಲಭ್ಯಗಳು ಉಚಿತವಾಗಿದೆ

ರಕ್ತದಾನಿಗಳಾಗಲಿ ಈ ಕಂಪನಿಯಾಗಲಿ ಯಾವುದೇ ರೀತಿಯ ಹಣ ಪಡೆಯುವುದಿಲ್ಲ ಎಂದು ಅರೇರಾ ಟೆಕ್ನಾಲಜಿಸ್ ಸಿಇಒ ಪ್ರವೀಣ್ ಹೇಳಿದ್ದಾರೆ. ಇಲ್ಲಿ ಎಲ್ಲಾ ಪ್ರಕ್ರಿಯೆಗಳು ಸುಲಭವಾಗಿದ್ದು, ಆನ್ ಲೈನ್ ಟ್ಯಾಕ್ಸಿ ಬುಕ್ಕಿಂಗ್ ನಂತೆ ಜಿಪಿಎಸ್ ಮೂಲಕ ಎಲ್ಲವನ್ನು ಪಾರದರ್ಶಕವಾಗಿ ನಡೆಸಬಹುದಾಗಿದೆ. ಹೀಗಾಗಿ ಅವ್ಯವಹಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.

ಆಪ್ಲಿಕೇಷನ್ ಕೆಲಸ ನಿರ್ವಹಣೆ

ಆಪ್ಲಿಕೇಷನ್ ಕೆಲಸ ನಿರ್ವಹಣೆ

* ರಕ್ತದಾನಕ್ಕಾಗಿ ಇರುವ ಈ ಅಪ್ಲಿಕೇಷನ್ ತೂಕ ಸಾಧಾರಣ ಸ್ಮಾಟ್ ಫೋನ್ ಗಳಿಗೆ ಹೆಚ್ಚಾಗುತ್ತದೆ. 8 ಎಂಬಿ ತೂಗುತ್ತದೆ.
* ಆಂಡ್ರಾಯ್ಡ್ 4.1 ಓಸ್ ಇದ್ದರೆ ಹೀಗಾಗಿ ಹೆಚ್ಚಿನ ಮೊಬೈಲ್ ಗಳಲ್ಲಿ ಸ್ಥಾಪಿಸಬಹುದು.
* ಬಿಡುಗಡೆಯಾದ 20ಕ್ಕೂ ಅಧಿಕ ದಿನಗಳಲ್ಲೇ 1000-5000 ಇನ್ ಸ್ಟಾಲ್ ಗಳ ಪ್ರಮಾಣ ತಲುಪಿದ್ದು ಸಾಧನೆ.
* ಹೆಚ್ಚಿನ ಮಾಹಿತಿಗೆ [email protected] ಸಂಪರ್ಕಿಸಬಹುದು.

English summary
Blood For sure is the social app for saving life during medical emergency. The app helps people to find the active blood donors and blood banks nearby them during emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X