ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Google Map: ಕೆಲಸ ಮಾಡದ ಗೂಗಲ್ ನಕ್ಷೆ; ದಿಕ್ಕು ತೋಚದೇ ಜನ ಕಂಗಾಲು!

|
Google Oneindia Kannada News

ನವದೆಹಲಿ, ಮಾರ್ಚ್ 18: ಗೂಗಲ್ ನಕ್ಷೆಗಳು ಶುಕ್ರವಾರ ಸಂಜೆ ವೇಳೆಗೆ ಖಾಲಿ ಖಾಲಿ ಆಗಿ ಗೋಚರಿಸಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಜನರು ದಿಕ್ಕು ತಪ್ಪುವಂತೆ ಮಾಡಿತ್ತು. ತಂತ್ರಜ್ಞಾನವನ್ನೇ ನೆಚ್ಚಿಕೊಂಡಿದ್ದ ವ್ಯಾಪಾರಿಗಳು ಹಾಗೂ ಡೆಲಿವರಿ ಬಾಯ್ಸ್ ಕಂಗಾಲಾಗಿ ಕಣ್ಣು ಕಣ್ಣು ಬಿಡುವಂಥ ಸ್ಥಿತಿ ನಿರ್ಮಾಣವಾಗಿತ್ತು.

ಶುಕ್ರವಾರ ಸಂಜೆ Google Maps ಕೆಲವು ಸಮಯದವರೆಗೂ ಕಾರ್ಯ ನಿರ್ವಹಿಸುವುದನ್ನೇ ನಿಲ್ಲಿಸಿ ಬಿಟ್ಟಿತ್ತು. ಗೂಗಲ್ ನಕ್ಷೆ ಖಾಲಿಯಾಗಿ ಗೋಚರಿಸುತ್ತಿದ್ದನ್ನು ಕಂಡು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ದಿಕ್ಕೇ ತಪ್ಪಿದಂತೆ ಆಗಿತ್ತು. ಏಕೆಂದರೆ Google ನಕ್ಷೆಗಳು ವೆಬ್‌ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದರೆ, ಮೊಬೈಲ್ ನಕ್ಷೆ ಮತ್ತು ಸ್ಥಳದ ಬದಲಿಗೆ ಎಲ್ಲವೂ ಖಾಲಿ ಖಾಲಿ ಆಗಿ ಗೋಚರಿಸುತ್ತಿತ್ತು. ಜಗತ್ತಿನಾದ್ಯಂತ ಗೂಗಲ್ ನಕ್ಷೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಐಫೋನ್‌ಗಳನ್ನು ಬಳಸುವವರಿಗೂ ಕೂಡ ಮೊಬೈಲ್‌ನಲ್ಲಿ ಆದ್ಯತೆಯ ನ್ಯಾವಿಗೇಷನ್ ಸಾಧನವಾಗಿದೆ.

ಚಾಲನೆ ವೇಳೆ ಬ್ಲೂಟೂತ್ ಬಳಿಸಿದ್ರೂ ಬೀಳುತ್ತೆ ದಂಡ!ಚಾಲನೆ ವೇಳೆ ಬ್ಲೂಟೂತ್ ಬಳಿಸಿದ್ರೂ ಬೀಳುತ್ತೆ ದಂಡ!

Downdetector ವೆಬ್‌ಸೈಟ್‌ನ ಪ್ರಕಾರ, Google Maps ಭಾರತದಾದ್ಯಂತ ಲಭ್ಯವಿಲ್ಲ, ಇದರಿಂದ ಚಾಲನೆ ಮಾಡುವಾಗ ಅಥವಾ ರಸ್ತೆಯಲ್ಲಿ ಸವಾರಿ ಮಾಡುವಾಗ ಹಾಗೂ ಸಂಚರಿಸುವಾಗ ಜನರು ಕಷ್ಟಪಡುವಂತಾ ಸ್ಥಿತಿ ನಿರ್ಮಾಣವಾಗಿತ್ತು.

Tech: Google Maps Not Working On Mobile And Web, People Searching For Directions

ಹಲವು ವರ್ಷಗಳ ನಂತರ ಮೊದಲ ಬಾರಿಗೆ ಸಮಸ್ಯೆ:

ಗೂಗಲ್ ಮ್ಯಾಪ್ ಡೌನ್ ಆಗುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ. ಬಹುಶಃ ಹಲವು ವರ್ಷಗಳ ನಂತರ ಮೊದಲ ಬಾರಿಗೆ ಇಂಥದೊಂದು ಸಮಸ್ಯೆ ಎದುರಾಗಿದೆ. ಕೆಲವರ ಪ್ರಕಾರ, ಗೂಗಲ್ ಮ್ಯಾಪ್ಸ್ ಡೌನ್ ಆಗುತ್ತಿದೆ ಎಂದರೆ ಆಪಲ್ ನಕ್ಷೆಗಳು ಗಮನ ಸೆಳೆಯುವ ಅವಕಾಶವನ್ನು ಹೊಂದಿರುತ್ತದೆ ಎನ್ನುತ್ತಿದ್ದಾರೆ.

ನಕ್ಷೆಗಳನ್ನೇ ಇಟ್ಟುಕೊಂಡು ಓಡಾಡಬೇಕಾ?:

"ಅಯ್ಯೋ ದುರ್ವಿಧಿಯೇ, ಗೂಗಲ್ ಮ್ಯಾಪ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದರೆ ನಾವು ರಸ್ತೆಗಳಲ್ಲಿ ಓಡಾಡುವುದಕ್ಕೆ ಮತ್ತೆ ನಮ್ಮ ಹಳೆಯ ಪೇಪರ್ ನಕ್ಷೆಗಳನ್ನೇ ಬಳಸಬೇಕಾ," ಎಂದು ಕೆಲವರು ತಮ್ಮ ಟ್ವಿಟ್ಟರ್ ಪೋಸ್ಟ್ ಗಳಲ್ಲಿ ಲೇವಡಿ ಮಾಡಿದ್ದಾರೆ.

ಸ್ವಿಗ್ಗಿ, ಜೊಮ್ಯಾಟೋ ವಿತರಕರು ಕಂಗಾಲು:

ಗೂಗಲ್ ಮ್ಯಾಪ್ ಕಾರ್ಯ ನಿರ್ವಹಿಸದೇ ಇರುವುದರಿಂದ Swiggy, Zomato ನಂತಹ ವಿತರಣಾ ಸೇವೆಗಳಿಗೆ ಅಡ್ಡಿಯಾಗುತ್ತಿದೆ. ಈ ಕಂಪನಿಯ ಆಹಾರ ವಿತರಕರು ನಗರಗಳಾದ್ಯಂತ ಸಂಚರಿಸುವುದಕ್ಕೆ ಇದೇ ಗೂಗಲ್ ಮ್ಯಾಪ್ ಅನ್ನು ಅವಲಂಬಿಸಿದ್ದರು.

English summary
Google Maps Not Working On Mobile And Web, People Searching For Directions. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X