ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಚ್ ಇಂಜಿನ್ ಗೂಗಲ್ ಹೊಸ ಲೋಗೋ ಸುತ್ತಾ ಪ್ರದಕ್ಷಿಣೆ

By Mahesh
|
Google Oneindia Kannada News

ಬೆಂಗಳೂರು, ಸೆ. 02: ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ತನ್ನ ಸರ್ಚ್ ಇಂಜಿನ್ ಲೋಗೋ ಬದಲಾಯಿಸಿದೆ. ಹೊಚ್ಚ ಹೊಸ ಫಾಂಟ್ ನೊಂದಿಗೆ ಲೋಗೋ ವಿಶ್ವದೆಲ್ಲೆಡೆ ಬ್ರೌಸರ್ ಗಳಲ್ಲಿ ಕಾಣಿಸಿಕೊಂಡಿದೆ. ಇತ್ತೀಚೆಗಷ್ಟೇ ಆರಂಭವಾದ ಅಲ್ಫಾಬೆಟ್ ಕಂಪನಿಯ ಭಾಗವಾಗಿರುವ ಗೂಗಲ್ 2013ರ ನಂತರ ಇದೇ ಮೊದಲ ಬಾರಿಗೆ ಹೊಸ ಚಿನ್ಹೆ ಪಡೆದುಕೊಂಡಿದೆ.

ವಿಶೇಷ ದಿನಗಳಲ್ಲಿ ಗೂಗಲ್ ಡೂಡ್ಲ್ ಮೂಲಕ ಸಂಭ್ರಮಾಚರಣೆ ಮಾಡುವುದನ್ನು ಗಮನಿಸಿರಬಹುದು. ಈಗ ಹೊಸ ಲೋಗೋ ಕೂಡಾ ಡೂಡ್ಲ್ ಮಾದರಿಯಲ್ಲಿ ವಿಡಿಯೋ ಮೂಲಕ ಜನರಿಗೆ ಪರಿಚಯ ನೀಡಲಾಗುತ್ತಿದೆ. ಹೊಸ ಲೋಗೋ ಬಗ್ಗೆ ಕೆಲ ಪ್ರಮುಖ ಅಂಶಗಳು ಇಲ್ಲಿವೆ.

Google Logo

* 1998ರಿಂದ ಇಲ್ಲಿ ತನಕ ಸುಮಾರು 6 ಬಾರಿ ಗೂಗಲ್ ತನ್ನ ಲೋಗೋ ಬದಲಾಯಿಸಿದೆ. ಈಗಿನದು 7ನೇ ಲೋಗೋವಾಗಿದ್ದು, ಮೊದಲ ಬಾರಿಗೆ ಹೊಸ ಫಾಂಟ್ ಬಳಕೆ ಮಾಡಲಾಗಿದೆ.
* ಹೊಸ ಲೋಗೋ ಬಗ್ಗೆ ಮಾಹಿತಿ ನೀಡಲು ಗೂಗಲ್ ಡೂಡ್ಲ್ ಬಳಸಿದ್ದು ಇದೇ ಮೊದಲು.
* ರೇಖಾಗಣಿತದ ಆಧಾರ ಹೊಂದಿದ್ದರೂ ಶಾಲಾ ಪುಸ್ತಕದ ಅಕ್ಷರಗಳ ಮುದ್ರಣದಂತೆ ಸರಳವಾಗಿದೆ.
* e ಅಕ್ಷರವನ್ನು ಮೊದಲ ಲೋಗೋವಿನಂತೆ ಉಳಿಸಿಕೊಳ್ಳಲಾಗಿದೆ. ಸ್ವಲ್ಪ ಬಾಗಿರುವ ಈ ಅಕ್ಷರವು ಗೂಗಲ್ ಸದಾ ಕಾಲ ಬದಲಾವಣೆಗೆ ವಿಶಿಷ್ಟತೆಗೆ ಒಗ್ಗಿಕೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ.

Google Logo

* ಹೊಸ ಲೋಗೋ ಮಾದರಿ ಜೊತೆಗೆ new san-serif typedace ಫಾಂಟ್ ಬಳಸಿ ಪ್ರಾಡೆಕ್ಟ್ ಸಾನ್ಸ್ ಫಾಂಟ್ ಗಳನ್ನು ಎಲ್ಲಾ ಗೂಗಲ್ ಉತ್ಪನ್ನಗಳಿಗೂ ಬಳಸಲು ಯೋಜಿಸಲಾಗಿದೆ.
* ಗೂಗಲ್ ನ ಹಳೆ ಲೋಗೋ 14,000 ಬೈಟ್ಸ್ ಇತ್ತು. ಹೊಸ ಲೋಗೋ 305 ಬೈಟ್ಸ್ ಇದೆ.
* ಮೊಬೈಲಿನಲ್ಲಿ ಬ್ಯಾಡ್ ವಿಂಡ್ತ್ ಅನುಗುಣವಾಗಿ ಲೋಗೋ ಚಿನ್ಹೆ ಬದಲಾಗುತ್ತದೆ.

Google Logo

* ಗೂಗಲ್ ಲೋಗೋದಲ್ಲಿ ನೀಲಿ, ಹಸಿರು, ಹಳದಿ, ಕೆಂಪು ಬಣ್ಣವನ್ನು ಉಳಿಸಿಕೊಳ್ಳಲಾಗಿದೆ.
* ಹೊಸ ಲೋಗೋದ ಶಾರ್ಟ್ ವರ್ಷನ್ ನಲ್ಲೂ ದೊಡ್ಡ ಲೋಗೋವಿನ ಬಣ್ಣಗಳನ್ನು ಬಳಸಿಕೊಳ್ಳಲಾಗಿದೆ. ಈ ಹಿಂದಿನಂತೆ g ಬಳಸುತ್ತಿಲ್ಲ.

ಲೋಗೋ ಬದಲಾವಣೆ ಬಗ್ಗೆ ವಿಡಿಯೋ ನೋಡಿ:


(ಒನ್ ಇಂಡಿಯಾ ಸುದ್ದಿ)

English summary
Google has a new logo. The last time Google tweaked it was in 2013. The unveiling of the new logo comes just weeks after a surprise reorganisation of Google under a newly formed parent company called Alphabet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X