ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ಉದ್ಯೋಗಿಗಳಿಗೆ ಬಂಪರ್ ಬೋನಸ್

|
Google Oneindia Kannada News

ಮುಂಬೈ, ಏ. 17: ಟಿಸಿಎಸ್ ಉದ್ಯೋಗಿಗಳಿಗೆ ಕಂಪನಿ ಬಹುದೊಡ್ಡ ಬಂಪರ್ ನೀಡಿದೆ. ದೇಶದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತು ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ 'ಟಿಸಿಎಸ್' ತನ್ನ ಸಿಬ್ಬಂದಿಗೆ ಬರೋಬ್ಬರಿ 2,628 ಕೋಟಿ ರು. ಬೋನಸ್ ನೀಡುತ್ತೇನೆ ಎಂದು ಘೋಷಣೆ ಮಾಡಿದೆ.

2004 ಆಗಸ್ಟ್‌ನಲ್ಲಿ ಆರಂಭಿಕ ಷೇರು ಮಾರಾಟ ನಡೆಸಿದ್ದ ಕಂಪನಿ, ದಶಮಾನೋತ್ಸವ ಹಿನ್ನೆಲೆಯಲ್ಲಿ ಅಂಗವಾಗಿ ಎಲ್ಲಾ ಉದ್ಯೋಗಿಗಳಿಗೆ ವಿಶೇಷ ರೀತಿಯ ಸಂಭಾವನೆ ರೂಪದಲ್ಲಿ ಲಾಭಾಂಶ ಹಂಚಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.[ಟಿಸಿಎಸ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡ್ರೆ ಏನು ಲಾಭ?]

tcs

ಒಟ್ಟು 2,628 ಕೋಟಿ ರೂ. ಮೊತ್ತವನ್ನು ಬೋನಸ್ ಗೆಂದು ತೆಗೆದಿರಿಸಲಾಗಿದೆ. ಜಾಗತಿಕ ಮಟ್ಟದ ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ ಇದು ಅನ್ವಯವಾಗಲಿದೆ. ಆದರೆ ಕನಿಷ್ಠ 1 ವರ್ಷ ಸೇವೆ ಸಲ್ಲಿಸಿದವರು ವಿಶೇಷ ಸಂಭಾವನೆಗೆ ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಕಳೆದ ವರ್ಷದ ಡಿಸೆಂಬರ್ ಅಂತ್ಯದ ದಾಖಲೆಯಂತೆ ಟಿಸಿಎಸ್‌ನ ನೌಕರ ಬಲ 3.18 ಲಕ್ಷದಷ್ಟಿದೆ. ಕಂಪನಿಯಲ್ಲಿ ಉದ್ಯೋಗಿ ಪ್ರತಿ ವರ್ಷ ಸಲ್ಲಿಸಿದ ಸೇವೆಗೆ ಸಮನಾಗಿ ಒಂದು ವಾರದ ಸಂಬಳವನ್ನು ವಿಶೇಷ ಸಂಭಾವನೆ ರೂಪದಲ್ಲಿ ನೀಡಲಾಗುವುದು ಎಂದು ಟಿಸಿಎಸ್ ಸಿಇಒ ಮತ್ತು ಎಂಡಿ ಎನ್. ಚಂದ್ರಶೇಖರನ್ ತಿಳಿಸಿದ್ದಾರೆ.[ಟಿಸಿಎಸ್ ರಹಸ್ಯ ಉದ್ಯೋಗಿಯಿಂದ 'ಎಕ್ಸಿಟ್ ಇಂಟರ್ ವ್ಯೂ' ಲೀಕ್]

2004 ಆಗಸ್ಟ್‌ನಲ್ಲಿ ಕಂಪನಿ ಮುಂಬಯಿ ಷೇರು ವಿನಿಮಯ ಕೇಂದ್ರ ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ ವ್ಯಾಪಾರ ಆರಂಭಿಸಿದ್ದ ಸಂಸ್ಥೆ ಇದೀಗ ಜಾತಗತಿ ಮಟ್ಟದ ಹೂಡಿಕೆದಾರನಾಗಿ ಗುರುತಿಸಿಕೊಂಡಿದೆ.

ಟಿಸಿಎಸ್ ಕಂಪನಿಗೆ 5,773 ಕೋಟಿ ಲಾಭ
ಕೊನೆಗೊಂಡ ಹಣಕಾಸು ವರ್ಷದಲ್ಲಿ ಟಿಸಿಎಸ್ ಶೇ. 7.7ಲಾಭದೊಂದಿಗೆ 5,773 ಕೋಟಿ ರೂ. ಲಾಭ ಗಳಿಸಿದೆ. ಕಳೆದ ತ್ರೈ ಮಾಸಿಕದ ವಹಿಚಾಟಿನಲ್ಲಿ ಶೇ. 12.4 ಏರಿಕೆ ಸಾಧಿಸಿದೆ. ವರ್ಷದಿಂದ ವರ್ಷಕ್ಕೆ ಕಂಪನಿಯ ಷೇರು ವಹಿಚಾಟು ಏರಿಕೆಯಲ್ಲೇ ಸಾಗಿದ್ದು ಡಾಲರ್ ಲೆಕ್ಕದಲ್ಲಿ ಹೇಳುವುದಾದರೆ 3.900 ಸಾವಿರ ಡಾಲರ್ ಲಾಭ ಗಳಿಸಿದೆ ಎಂದು ಕಂಪನಿ ತಿಳಿಸಿದೆ.

English summary
The country's major IT company Tata Consultancy Services(TCS) has announced that it will give its employees a one-time bonus of Rs 2,628 crore to mark the 10th anniversary of the company's listing on India's biggest stock exchange in 2004.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X