ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ಸಾವಿರ ಕೋಟಿ ಮೌಲ್ಯದ ಷೇರು ಹಿಂತೆಗೆತಕ್ಕೆ ಟಿಸಿಎಸ್ ಗೆ ಒಪ್ಪಿಗೆ

ಭಾರತದ ಅತಿದೊಡ್ಡ ಸಾಫ್ಟ್ ವೇರ್ ಸೇವೆ ನೀಡುವ ಕಂಪೆನಿ ಟಿಸಿಎಸ್ ಗೆ 16 ಸಾವಿರ ಕೋಟಿ ಮೌಲ್ಯದ ಷೇರು ಹಿಂತೆಗೆತಕ್ಕೆ ಷೇರುದಾರರಿಂದ ಸೋಮವಾರ ಒಪ್ಪಿಗೆ ಸಿಕ್ಕಿದೆ

|
Google Oneindia Kannada News

ನವದೆಹಲಿ, ಏಪ್ರಿಲ್ 17: ಭಾರತದ ಅತಿ ದೊಡ್ಡ ಸಾಫ್ಟ್ ವೇರ್ ಕಂಪೆನಿ ಟಿಸಿಎಸ್ 16 ಸಾವಿರ ಕೋಟಿ ರುಪಾಯಿ ಮೌಲ್ಯದ ಷೇರು ಹಿಂತೆಗೆತಕ್ಕೆ ಸೋಮವಾರ ಷೇರುದಾರರಿಂದ ಒಪ್ಪಿಗೆ ಸಿಕ್ಕಿದೆ. ವಿಶೇಷ ನಿರ್ಣಯದ ಮೂಲಕ ಬೈ ಬ್ಯಾಕ್ ಗೆ ಒಪ್ಪಿಗೆ ಸಿಕ್ಕಿದ್ದು, ಶೇ 2.85 ಷೇರುಗಳನ್ನು ತಲಾ 2,850 ರುಪಾಯಿಯಂತೆ ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಫೆಬ್ರವರಿಯಲ್ಲಿ ಟಿಸಿಎಸ್ ನ ಮಂಡಳಿಯು 5.61 ಕೋಟಿ ಷೇರುಗಳನ್ನು ಹಿಂಪಡೆಯುವುದಕ್ಕೆ 16 ಸಾವಿರ ಕೋಟಿ ಬೇಕಾಗುತ್ತದೆ ಎಂಬ ಲೆಕ್ಕಾಚಾರವಿದೆ. ಷೇರು ಮಾರುಕಟ್ಟೆಯ ನಿಯಮಾನುಸಾರ ಒಂದು ಪ್ರಮಾಣವನ್ನು ನಿಗದಿಪಡಿಸಿ, ಕಂಪೆನಿಯ ಷೇರುದಾರರಿಂದ ವಾಪಸ್ ಪಡೆಯಲಾಗುತ್ತದೆ.[ಐಬಿ ರಿಯಲ್ ಎಸ್ಟೇಟ್ ಒಂದೇ ದಿನ ಶೇ 40ರಷ್ಟು ಏರಿಕೆ-ಇನ್ ಸೈಡ್ ಸ್ಟೋರಿ]

TCS

ಅಂದಹಾಗೆ, ಇನ್ಫೋಸಿಸ್ ನಿಂದಲೂ ಈ ರೀತಿಯ ಷೇರು ಹಿಂತೆಗೆತ ನಿರ್ಧಾರ ಪ್ರಸ್ತಾಪಿಸಲಾಗಿದೆ. ಯಾವುದೇ ಕಂಪೆನಿಯ ಬಳಿ ಹೆಚ್ಚಿನ ನಗದು ಇದ್ದಾಗ ಬಂಡವಾಳದ ಒಟ್ಟಾರೆ ಮೌಲ್ಯವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಈ ರೀತಿ ಬೈ ಬ್ಯಾಕ್ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರಿಂದ ಮುಂದಿನ ಆರ್ಥಿಕ ವರ್ಷದಲ್ಲಿ ಡಿವಿಡೆಂಡ್ ನೀಡುವ ಪ್ರಮಾಣ ಕಡಿಮೆಯಾಗುತ್ತದೆ.

ಆದರೆ, ಈ ಬಗ್ಗೆ ಕೆಲವರು ತಕರಾರು ಕೂಡ ಎತ್ತುತ್ತಾರೆ. ಹೆಚ್ಚಿನ ನಗದು ಇದ್ದಾಗ ಕಂಪೆನಿಯ ಷೇರುದಾರರಿಗೆ ಹಂಚಬೇಕು ಎಂದು ವಾದಿಸುವವರೂ ಇದ್ದಾರೆ.

English summary
India's largest software services firm TCS today said its shareholders have approved a Rs 16,000 crore share buyback plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X