ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ತ್ರೈಮಾಸಿಕ ವರದಿ: ನಿವ್ವಳ ಲಾಭ 7.2 ರಷ್ಟು ಏರಿಕೆ, 8,701 ಕೋಟಿ ರೂ.

|
Google Oneindia Kannada News

ನವದೆಹಲಿ, ಜನವರಿ 08: ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಶುಕ್ರವಾರ ತನ್ನ ಫಲಿತಾಂಶವನ್ನು ಪ್ರಕಟಿಸಿದೆ. ದೇಶದ ಅತಿದೊಡ್ಡ ಸಾಫ್ಟ್‌ವೇರ್ ಸೇವೆಗಳ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನ ಏಕೀಕೃತ ನಿವ್ವಳ ಲಾಭವು ಅಕ್ಟೋಬರ್-ಡಿಸೆಂಬರ್ 2020 ತ್ರೈಮಾಸಿಕದಲ್ಲಿ ಶೇಕಡಾ 7.2 ರಷ್ಟು ಏರಿಕೆ ಕಂಡು 8,701 ಕೋಟಿ ರೂ. ಆಗಿದೆ

ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ಲಾಭ 8,433 ಕೋಟಿ ರೂ. ಆದರೆ ಮೂರನೇ ತ್ರೈಮಾಸಿಕದಲ್ಲಿ ಕಂಪನಿ ಲಾಭಾಂಶ ಏರಿಕೆಯಾಗಿದೆ. ತ್ರೈಮಾಸಿಕದಲ್ಲಿ ಕಂಪನಿಯ ಲಾಭದಲ್ಲಿ ಶೇಕಡಾ 16.4 ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ 7.1 ರಷ್ಟು ಏರಿಕೆ ಕಂಡಿದೆ. ಅಂತೆಯೇ, ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ತ್ರೈಮಾಸಿಕ ಆಧಾರದ ಮೇಲೆ ಶೇಕಡಾ 4.7 ರಷ್ಟು ಏರಿಕೆಯಾದರೆ, ಕಂಪನಿಯ ಆದಾಯವು ವಾರ್ಷಿಕ ಆಧಾರದ ಮೇಲೆ ಶೇಕಡಾ 5.5 ರಷ್ಟು ಏರಿಕೆಯಾಗಿದೆ.

ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ಆದಾಯವು 42,015 ಕೋಟಿ ರೂ.ಗಳಾಗಿದ್ದು, 41,350 ಕೋಟಿ ರೂ. ನಷ್ಟಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ಆದಾಯ 40,135 ಕೋಟಿ ರೂಪಾಯಿ.

TCS Q3 Result: Net Profit Rises 7% To Rs 8,701

ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯದ ಬೆಳವಣಿಗೆ ತ್ರೈಮಾಸಿಕ ಆಧಾರದ ಮೇಲೆ ಶೇಕಡಾ 4.1ರಷ್ಟು ಆಗಿತ್ತು. ಇದು ಶೇಕಡಾ 2.8 ರಿಂದ 2.9 ಎಂದು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ, ವಾರ್ಷಿಕ ಆಧಾರದ ಮೇಲೆ, ಇದು ಶೇಕಡಾ 0.4 ರಷ್ಟು ಹೆಚ್ಚಾಗಿದೆ. ತ್ರೈಮಾಸಿಕದಲ್ಲಿ ಕಂಪನಿಯ ಹಿಂದಿನ ತ್ರೈಮಾಸಿಕದಲ್ಲಿ 10,515 ಕೋಟಿ ರೂ.ಗಳಿಂದ 11,184 ಕೋಟಿ ರೂ.ಗೆ ಏರಿದೆ.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಈ ಫಲಿತಾಂಶಗಳ ಪ್ರಕಾರ, ಹಣಕಾಸು ವರ್ಷ 2021 ರ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಬೆಳವಣಿಗೆ ಕಳೆದ 9 ವರ್ಷಗಳಲ್ಲಿ ಪ್ರಬಲವಾಗಿದೆ.

English summary
India's largest IT exporter in terms of revenues, on Friday said its profit rose 7.18 per cent YoY to Rs 8,701 crore in December quarter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X