ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q3: ನಿರೀಕ್ಷೆ ಮಟ್ಟ ಮುಟ್ಟದ ಟಿಸಿಎಸ್, 100% ಬೋನಸ್ ಘೋಷಣೆ

By Mahesh
|
Google Oneindia Kannada News

ಮುಂಬೈ, ಜ.16: ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಶುಕ್ರವಾರ ಪ್ರಕಟಿಸಿದೆ. ಮಾರುಕಟ್ಟೆ ತಜ್ಞರ ನಿರೀಕ್ಷೆಗೆ ತಕ್ಕ ಫಲಿತಾಂಶ ಹೊರಹಾಕದಿದ್ದರೂ ತಕ್ಕಮಟ್ಟಿನ ಲಾಭ, ಆದಾಯ ಗಳಿಸಿದೆ. ತ್ರೈಮಾಸಿಕ ವರದಿ ಪ್ರಕಟಣೆ ಬೆನ್ನಲ್ಲೆ ಸಿಇಒ ಎನ್ ಚಂದ್ರಶೇಖರನ್ ಅವರು ಉದ್ಯೋಗಿಗಳಿಗೆ ಶೇ 100ರಷ್ಟು ವೆರಿಯಬಲ್ ಪೇ ಬೋನಸ್ ಘೋಷಿಸಿದ್ದಾರೆ.

ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಉದ್ಯೋಗ ಕಡಿತ ಯೋಜನೆ ಬಗ್ಗೆ ಎನ್ ಚಂದ್ರಶೇಖರನ್ ಅವರು ಸ್ಪಷ್ಟನೆ ನೀಡಿದ್ದಾರೆ. ಟಿಸಿಎಸ್ ಉತ್ತಮ ಪ್ರಗತಿ ಸಾಧಿಸುತ್ತಿದ್ದು, ನೇಮಕಾತಿ ಗಣನೀಯವಾಗಿ ಹೆಚ್ಚಿದೆ, ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತಗೊಳಿಸುವ ಯಾವುದೇ ಯೋಜನೆ ಸಂಸ್ಥೆ ಕೈಗೊಂಡಿಲ್ಲ. ಹೆಚ್ಚೆಂದರೆ 1000 ಉದ್ಯೋಗಿಗಳನ್ನು ಮನೆಗೆ ಕಳಿಸಲಾಗುತ್ತದೆ ಎಂದಿದ್ದಾರೆ. [ಉದ್ಯೋಗಿಯಿಂದ 'ಎಕ್ಸಿಟ್ ಇಂಟರ್ ವ್ಯೂ' ಲೀಕ್]

TCS Q3 profit rises 2.9% to Rs 5444 cr, $ revenue up 0.5% 100% Bonus for Employee

ನೇಮಕಾತಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 55,000 ಹೊಸ ನೇಮಕಾತಿ ಯೋಜನೆ ಹಾಕಿಕೊಳ್ಳಲಾಗಿದೆ. ಈ ವರ್ಷ 52,000 ಅಭ್ಯರ್ಥಿಗಳನ್ನು ಸೇರಿಸಿಕೊಳ್ಳಲಾಗಿದೆ. ಮೂರನೇ ತ್ರೈಮಾಸಿಕದಲಿ 4,868 ಹೊಸ ನೇಮಕಾತಿ ನಡೆದಿದೆ. ಮೂರನೇ ತ್ರೈಮಾಸದ ಅಂತ್ಯಕ್ಕೆ ಟಿಸಿಎಸ್ ಉದ್ಯೋಗಿಗಳ ಸಂಖ್ಯೆ 3,18,625ನಷ್ಟಿದೆ. attrition rate ಶೇ 13.4 ಆಗಿದೆ ಎಂದು ಸಂಸ್ಥೆಯ ಜಾಗತಿಕ ಎಚ್ ಆರ್ ಅಜೊಯ್ ಮುಖರ್ಜಿ ಹೇಳಿದ್ದಾರೆ. [ಕೇವಲ ಶೇ 1 ರಷ್ಟು ಮಾತ್ರ ಉದ್ಯೋಗ ಕಡಿತ!]

ತ್ರೈಮಾಸಿಕ ವರದಿ: ಅಕ್ಟೋಬರ್-ಡಿಸೆಂಬರ್ ಅವಧಿಯ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ 2.94ರಂತೆ 5,328 ಕೋಟಿ ರು ಲಾಭ ಹಾಗೂ ತ್ರೈಮಾಸಿಕ ಆದಾಯ ಶೇ 2.87 ಏರಿಕೆ ಕಂಡು 24,501 ಕೋಟಿ ರು ಗಳಿಸಿದೆ. ಮಾರುಕಟ್ಟೆ ತಜ್ಞರ ನಿರೀಕ್ಷೆ 5,496 ಕೋಟಿ ರು ಲಾಭ ಹಾಗೂ 24,498 ಆದಾಯ ಹಾಗೂ ಡಾಲರ್ ಆದಾಯ 3.9 ಯುಎಸ್ ಡಾಲರ್ ಬರಬೇಕಿತ್ತು.

ಬೋನಸ್: ಉದ್ಯೋಗಿಗಳಿಗೆ 100% ವೇರಿಯಬಲ್ ಪೇಔಟ್ ನೀಡಲಾಗಿದೆ. ಇತ್ತೀಚೆಗೆ ಇನ್ಫೋಸಿಸ್ ಕೂಡಾ ಇದೆ ರೀತಿ ಬೋನಸ್ ನೀಡಿತ್ತು. ಎಚ್ ಸಿಎಲ್ ಸಂಸ್ಥೆ ಉದ್ಯೋಗಿಗಳಿಗೆ ಮರ್ಸಿಡೀಸ್ ಕಾರು ಹಾಗೂ ವಿದೇಶಿ ಟೂರ್ ಪ್ಯಾಕೇಜ್ ಘೋಷಿಸಿತ್ತು. [ಐಫೋನ್ ಕೊಡುಗೆ ನೀಡಿದ ಸಿಕ್ಕಾ]

ಷೇರುಪೇಟೆಯಲ್ಲಿ: ಷೇರು ಮಾರುಕಟ್ಟೆಯಲ್ಲಿ ಟಿಸಿಎಸ್ ಷೇರುಗಳು ಶೇ 2 ರಂತೆ ಇಳಿಕೆ ಕಂಡು 2595 ರು ನಂತೆ ಟ್ರೆಂಡ್ ನಲ್ಲಿದೆ.

English summary
Tata Consultancy Services' (TCS) third quarter net profit grew 2.94 percent sequentially to Rs 5,444 crore, aided by other income. The profit was slightly lower than analysts expectations. TCS chief N. Chandrasekaran announced 100 per cent variable allowance payout for employee also said there is no truth to rumours about layoffs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X