ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ 3ನೇ ತ್ರೈಮಾಸಿಕ ವರದಿ: ಸಂಸ್ಥೆಗೆ ಶೇ 24 ರಷ್ಟು ನಿವ್ವಳ ಲಾಭ

|
Google Oneindia Kannada News

ಮುಂಬೈ, ಜನವರಿ 10: ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಇಂದು(ಜ.10) ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.

ಡಿಸೆಂಬರ್ 2018ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸಂಸ್ಥೆ ಶೇ24.1ರಷ್ಟು ಪ್ರಗತಿ ಕಂಡಿದ್ದು, 8,105 ಕೋಟಿ ರು ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯು 6,531 ಕೋಟಿ ರು ಗಳಿಸಿತ್ತು.

ರು. 8 ಲಕ್ಷ ಕೋಟಿ ದಾಟಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಬಂಡವಾಳ ಮೌಲ್ಯರು. 8 ಲಕ್ಷ ಕೋಟಿ ದಾಟಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಬಂಡವಾಳ ಮೌಲ್ಯ

ಈ ತ್ರೈಮಾಸಿಕದ ಅಂತ್ಯಕ್ಕೆ ಸಂಸ್ಥೆಯ ಒಟ್ಟು ಆದಾಯ ಶೇ 20.8ರಷ್ಟು ಏರಿಕೆಯಾಗಿದ್ದು, 37,338 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 30,904 ಕೋಟಿ ರು ಗಳಿಸಿತ್ತು.

TCS Q3 net grows 24.1 pc to Rs 8,105 cr

ಟಿಸಿಎಸ್ ವಿರುದ್ಧ ಅಮೆರಿಕದಲ್ಲಿ ಜನಾಂಗೀಯ ತಾರತಮ್ಯದ ದೂರು ಟಿಸಿಎಸ್ ವಿರುದ್ಧ ಅಮೆರಿಕದಲ್ಲಿ ಜನಾಂಗೀಯ ತಾರತಮ್ಯದ ದೂರು

ಅಕ್ಟೋಬರ್ -ಡಿಸೆಂಬರ್ 2018 ತ್ರೈಮಾಸಿಕದಲ್ಲಿ ಟಿಸಿಎಸ್ 6,827 ಹೊಸ ನೇಮಕಾತಿ ಮಾಡಿಕೊಂಡಿದೆ. ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 4,17,929ಕ್ಕೇರಿದೆ. ಕಳೆದ 12 ತಿಂಗಳಿನಲ್ಲಿ ಸಂಸ್ಥೆಯ ಆಟ್ರಿಷನ್ ದರ ಶೇ 11.2ರಷ್ಟಿತ್ತು. ಪ್ರತಿ ಈಕ್ವಿಟಿ ಷೇರಿನ ಮೇಲೆ 4ರು ನಂತೆ ಮೂರನೇ ಮಧ್ಯಂತರ ಡಿವಿಡೆಂಡ್ ಘೋಷಿಸಲಾಗಿದೆ.

English summary
The country's largest software exporter TCS today reported 24.1 per cent growth in net profit at Rs 8,105 crore for the quarter ended December 2018. The company had posted a net profit of Rs 6,531 crore in the same period last fiscal as per Indian accounting norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X