ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

40,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಟಿಸಿಎಸ್

|
Google Oneindia Kannada News

ಬೆಂಗಳೂರು, ಜುಲೈ 14: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ವಿಶ್ವದಾದ್ಯಂತ ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಭಾರತದಲ್ಲೂ ಅನೇಕ ಕಂಪನಿಗಳು ನೌಕರರನ್ನು ಕಡಿತಗೊಳಿಸುತ್ತಿದೆ. ಜೊತೆಗೆ ವೇತನವನ್ನು ಸಹ ಇಳಿಕೆ ಮಾಡಿದೆ. ಇಂತಹ ವೇಳೆಯಲ್ಲಿ ದೇಶದ ಅಗ್ರಮಾನ್ಯ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸೆಸ್ (ಟಿಸಿಎಸ್) ಭಾರೀ ಪ್ರಮಾಣದಲ್ಲಿ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲು ಮುಂದಾಗಿದೆ.

Recommended Video

ಪೋಷಕರು ಇಂತ ಸಮಯದಲ್ಲಿ ಮಕ್ಕಳ ಕಡೆ ಗಮನ ಹರಿಸಬೇಕು | oneindia Kannada

ಹೌದು, ಟಿಸಿಎಸ್ ಹೊಸ ಉದ್ಯೋಗಿಗಳ ನೇಮಕಾತಿಗೆ ಮುಂದಾಗಿದ್ದು, ಕ್ಯಾಂಪಸ್‌ ಸೆಲೆಕ್ಷನ್ ಮೂಲಕ ಸುಮಾರು 40 ಸಾವಿರ ಹೊಸಬರಿಗೆ ಉದ್ಯೋಗ ನೀಡುವ ನಿರ್ಧಾರ ತೆಗೆದುಕೊಂಡಿದೆ.

ಡಿಸೆಂಬರ್‌ವರೆಗೂ ಎಚ್ -1 ಬಿ ವೀಸಾ ನಿಷೇಧ:ಅಮೆರಿಕಾಕ್ಕೆ TCS ಸಿಇಒ ಎಚ್ಚರಿಕೆಡಿಸೆಂಬರ್‌ವರೆಗೂ ಎಚ್ -1 ಬಿ ವೀಸಾ ನಿಷೇಧ:ಅಮೆರಿಕಾಕ್ಕೆ TCS ಸಿಇಒ ಎಚ್ಚರಿಕೆ

ಕಳೆದ ವರ್ಷವೂ ಕೂಡ ಕಂಪನಿ ಇಷ್ಟೇ ಸಂಖ್ಯೆಯಲ್ಲಿ ಹೊಸಬರಿಗೆ ಉದ್ಯೋಗಾವಕಾಶ ಕಲ್ಪಿಸಿತ್ತು. ಆದರೆ, ಕೊರೊನಾ ಸಂಕಷ್ಟದ ನಡುವೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಂಪನಿಗಳು ಒಂದೆಡೆ ಉದ್ಯೋಗ ಕಡಿತ, ವೇತನ ಕಡಿತದಂತಹ ನಿರ್ಣಯಗಳನ್ನು ಕೈಗೊಳ್ಳುತ್ತಿರುವ ಇಂತಹ ಪರಿಸ್ಥಿತಿಯಲ್ಲಿ, ಕಂಪನಿ ಈ ಬಾರಿಯೂ ಕೂಡ ನೌಕರಿ ನೀಡುವ ನಿರ್ಣಯ ಕೈಗೊಂಡಿರುವುದು ಆಶ್ಚರ್ಯ ಮೂಡಿಸಿದೆ.

TCS Plans To Hire 40,000 Freshers In India Campus

ಇದೆ ವೇಳೆ ಅಮೇರಿಕಾದಲ್ಲಿಯೂ ಕೂಡ ಈ ಬಾರಿ ಕ್ಯಾಂಪಸ್ ಮೂಲಕ ನೌಕರರ ಸಂಖ್ಯೆ ಅನ್ನು ದ್ವಿಗುಣಗೊಳಿಸಲು ನಿರ್ಧರಿಸಿದ್ದು, ಕನಿಷ್ಠ ಅಂದರೆ ಸುಮಾರು 2000 ಜನರಿಗೆ ಉದ್ಯೋಗ ಕಲ್ಪಿಸುವುದಾಗಿ ಕಂಪನಿ ಹೇಳಿದೆ.

'' ಕೆಳಭಾಗವನ್ನು ನಿರ್ಮಿಸುವ ನಮ್ಮ ಪ್ರಮುಖ ಕಾರ್ಯತಂತ್ರವು ಯಾವುದೇ ಬದಲಾಗುವುದಿಲ್ಲ. 40,000 (ಭಾರತದಲ್ಲಿ) 35,000 ಅಥವಾ 45,000 ಆಗಬಹುದು. ಅದು ನಾವು ಮಾಡುವ ಯುದ್ಧತಂತ್ರದ ಕರೆ" ಎಂದು ಟಿಸಿಎಸ್ ಇವಿಪಿ ಮತ್ತು ಜಾಗತಿಕ ಎಚ್‌ಆರ್‌ಡಿ ಮುಖ್ಯಸ್ಥ ಮಿಲಿಂದ್ ಲಕ್ಕಾಡ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಈ ಕುರಿತು ಹೇಳಿಕೆ ನೀಡಿದ್ದ ಕಂಪನಿಯ ಸಿಇಓ ರಾಜೇಶ್ ಗೋಪಿನಾಥ್, "ಸಕಾರಾತ್ಮಕ ಬೇಡಿಕೆಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ನಿಧಾನಕ್ಕೆ ತನ್ನ ಲ್ಯಾಟರಲ್ ಹೈರಿಂಗ್ ಆರಂಭಿಸುತ್ತಿದೆ. ಕೊವಿಡ್19 ಹಿನ್ನೆಲೆ ಇದಕ್ಕೂ ಮೊದಲು ಈ ಪ್ರಕಿಯೆಗೆ ತಡೆನೀಡಲಾಗಿತ್ತು. ಆದರೆ, ಇದೀಗ ನಾವು ಈ ಮೊದಲೇ ನಿರ್ಧರಿಸಿದಂತೆ ನಮ್ಮ ಎಲ್ಲ ಯೋಜನೆಗಳನ್ನು ಪುನರಾರಂಭಿಸುತ್ತಿದ್ದೇವೆ" ಎಂದು ಹೇಳಿದ್ದರು.

English summary
TCS is planning to hire as many as 40,000 freshers in India campus amid coronavirus crisis which has eaten up into a lot of jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X