ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ರಹಸ್ಯ ಉದ್ಯೋಗಿಯಿಂದ 'ಎಕ್ಸಿಟ್ ಇಂಟರ್ ವ್ಯೂ' ಲೀಕ್

By Mahesh
|
Google Oneindia Kannada News

ಚೆನ್ನೈ, ಜ.13:ದೇಶದ ಅತಿದೊಡ್ದ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ನಡೆಸಲು ಉದ್ದೇಶಿಸಿರುವ ಮಹಾ 'ಪಿಂಕ್ ಸ್ಲಿಪ್ ವಿತರಣೆ' ಕಾರ್ಯಕ್ರಮಕ್ಕೆ ಈಗ ತಡೆ ಬಿದ್ದ್ದಿದೆ. ಸುಮಾರು 20 ರಿಂದ 30 ಸಾವಿರ ಉದ್ಯೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇದರ ಬೆನ್ನಲ್ಲೇ ಎಕ್ಸಿಟ್ ಇಂಟರ್ ವ್ಯೂ ನೀಡಿದ ಉದ್ಯೋಗಿಯೊಬ್ಬರು ಸಂಸ್ಥೆ ತೊರೆಯುವುದಕ್ಕೆ ಮುನ್ನ ನೀಡಿದ ಸಂದರ್ಶನದ ಆಡಿಯೋ ಕ್ಲಿಪ್ಪಿಂಗ್ ಸೌಂಡ್ ಕ್ಲೌಡ್ ನಿಂದ ಜಾರಿ ಫೇಸ್ ಬುಕ್ ಗೆ ಇಳಿದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. [ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ]

'ಟಿಸಿಎಸ್ ಸಂಸ್ಥೆ ಸುಳ್ಳುಗಳು ಬಹಿರಂಗ' ಎಂಬರ್ಥದ ಶೀರ್ಷಿಕೆ ಹೊಂದಿರುವ ಈ ಧ್ವನಿ ಮುದ್ರಿಕೆಯಲ್ಲಿ ಟಿಸಿಎಸ್ ಸಂಸ್ಥೆ ಗ್ರೇಡಿಂಗ್ ವ್ಯವಸ್ಥೆ, ಉದ್ಯೋಗಿಗಳನ್ನು ನಡೆಸಿಕಿಕೊಳ್ಳುವ ರೀತಿ ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸುವ ಕಾರ್ಯಕ್ರಮದ ವಿವರ ಸಿಗುತ್ತದೆ.

ಟಿಸಿಎಸ್ ಯೋಜನೆಗೆ ಬ್ರೇಕ್: 25 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಮನೆಗೆ ಕಳಿಸಲು ಟಿಸಿಎಸ್ ಯೋಜನೆ ಹಾಕಿಕೊಂಡಿತ್ತು. ಅದರೆ, ಇದರ ವಿರುದ್ಧ ದನಿ ಎತ್ತಿದ ಸಾಫ್ಟ್ ವೇರ್ ಇಂಜಿನಿಯರ್ ಗಳು ಕೋರ್ಟ್ ಮೆಟ್ಟಿಲೇರಿದ್ದರು. [ಮೈಕ್ರೋಸಾಫ್ಟ್ ನಿಂದ 18 ಸಾವಿರ ಉದ್ಯೋಗ ಕಡಿತ]

ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಸಾಫ್ಟ್ ವೇರ್ ಇಂಜಿನಿಯರ್ ಪರ ತೀರ್ಪು ನೀಡಿದ್ದು, ಟಿಸಿಎಸ್ ಸದ್ಯಕ್ಕೆ ಯಾರಿಗೂ ಪಿಂಕ್ ಸ್ಲಿಪ್ ನೀಡಲು ಆಗದಂತೆ ತಡೆ ಒಡ್ಡಲಾಗಿದೆ.

ಲೆವೆಲ್ ಸಿ ಉದ್ಯೋಗಿಗಳು ಮಾತ್ರ ಎಂದ ಟಿಸಿಎಸ್

ಲೆವೆಲ್ ಸಿ ಉದ್ಯೋಗಿಗಳು ಮಾತ್ರ ಎಂದ ಟಿಸಿಎಸ್

ಸಂಸ್ಥೆಯ ನಿರೀಕ್ಷೆ ಮಟ್ಟ ಮುಟ್ಟಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳನ್ನು ಮಾತ್ರ ಮನೆಗೆ ಕಳಿಸಲಾಗುತ್ತಿದೆ ಎಂದು ಟಿಸಿಎಸ್ ಹೇಳಿದೆ.

ಲೆವೆಲ್ ಸಿ ಸೇರಿದ 7 ರಿಂದ 10 ವರ್ಷ ಅನುಭವವುಳ್ಳ ಉತ್ತಮ ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಉದ್ಯೋಗ ಕಡಿತಕ್ಕೆ ಒಳಗಾಗುವ ಭೀತಿಯಲ್ಲಿರುವ 25 ಸಾವಿರ ಮಂದಿ ಸಹಾಯಕ ಕನ್ಸಲ್ಟೆಂಟ್ ಅಥವಾ ಅದಕ್ಕಿಂತ ದೊಡ್ಡ ಹುದ್ದೆಯಲ್ಲಿದ್ದಾರೆ. ಇವರನ್ನು ಕೈ ಬಿಟ್ಟು 55,000 ಫ್ರೆಶರ್ ಗಳನ್ನು ನೇಮಕ ಮಾಡಿಕೊಳ್ಳಲು ಟಿಸಿಎಸ್ ಮುಂದಾಗಿದೆ.

ಕೋರ್ಟ್ ಮೆಟ್ಟಿಲೇರಿದ ಗರ್ಭಿಣಿ ಉದ್ಯೋಗಸ್ಥ ಮಹಿಳೆ

ಕೋರ್ಟ್ ಮೆಟ್ಟಿಲೇರಿದ ಗರ್ಭಿಣಿ ಉದ್ಯೋಗಸ್ಥ ಮಹಿಳೆ

ಮಾರ್ಚ್ 2011ರಂದು ಚೆನ್ನೈನಲ್ಲಿ ಐಟಿ ಅನಾಲಿಸ್ಟ್ ಆಗಿ ಉದ್ಯೋಗಕ್ಕೆ ಸೇರಿದ ರೇಖಾ ಈಗ ಗರ್ಭಿಣಿಯಾಗಿದ್ದು ಡಿ.22, 2014ಕ್ಕೆ ಟರ್ಮಿನೇಷನ್ ಲೆಟರ್ ಪಡೆದುಕೊಂಡಿದ್ದಾರೆ. ಜ.21, 2015 ಕಚೇರಿಯಲ್ಲಿ ಕೊನೆ ದಿನವಾಗಿದೆ.

ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ರೇಖಾಗೆ ತಾತ್ಕಾಲಿಕ ಜಯ ಸಿಕ್ಕಿದ್ದು, ನಾಲ್ಕು ವಾರಗಳ ತಡೆಯಾಜ್ಞೆಯನ್ನು ಕೋರ್ಟ್ ನೀಡಿದೆ.

ಕೈಗಾರಿಕಾ ಕಾನೂನು ಏನು ಹೇಳುತ್ತದೆ?

ಕೈಗಾರಿಕಾ ಕಾನೂನು ಏನು ಹೇಳುತ್ತದೆ?

ಸಾಮಾನ್ಯ ಕಾರ್ಮಿಕರ ಕುರಿತಂತೆ ಇರುವ ಕಾನೂನು ಐಟಿ ಉದ್ಯೋಗಿಗಳೂ ಅನ್ವಯವಾಗುವುದೇ? ಸದ್ಯಕ್ಕಂತೂ ಈ ಪ್ರಕರಣದಲ್ಲಿ ಕೈಗಾರಿಕಾ ವ್ಯಾಜ್ಯ ಕಾಯ್ದೆ 1947ರ ಅನ್ವಯ ರೇಖಾ ಉದ್ಯೋಗಕ್ಕೆ ಅರ್ಹಳಾಗಿದ್ದು, ಸಂಸ್ಥೆಯಿಂದಲೇ ಮೂರು ಬಾರಿ ಸಿ ರೇಟಿಂಗ್ ಸಿಕ್ಕಿದೆ. ಹೀಗಾಗಿ ಆಕೆಯ ಟರ್ಮಿನೇಷನ್ ಗೆ ತಡೆ ನೀಡಬಹುದಾಗಿದೆ.

ಕೈಗಾರಿಕಾ ಕಾಯ್ದೆ ಸೆಕ್ಷನ್ 25ರ ಅನ್ವಯ ಟಿಸಿಎಸ್ ಸಂಸ್ಥೆ ಹಿರಿಯ ಉದ್ಯೋಗಿಗಳ ಪಟ್ಟಿ ನೀಡುವಲ್ಲಿ ವಿಫಲವಾಗಿದೆ. ಉದ್ಯೋಗದಿಂದ ತೆಗೆಯುವುದಕ್ಕೂ ಮುನ್ನ ನೋಟಿಸ್ ಕೂಡಾ ನೀಡಿಲ್ಲ. ಪ್ರತಿ ವರ್ಷ ಪೂರೈಸಿದ್ದಕ್ಕೆ ಉದ್ಯೋಗಿಗೆ ನೀಡಬೇಕಿರುವ ಹೆಚ್ಚುವರಿ ಮೊತ್ತವನ್ನು ನೀಡಿಲ್ಲ ಎಂಬುದು ತಿಳಿದು ಬಂದಿದೆ.

ಸಿ ಲೆವಲ್ ಉದ್ಯೋಗಿ ಕೊನೆ ಸಂದರ್ಶನ ಆಡಿಯೋ

ಸಿ ಲೆವಲ್ ಉದ್ಯೋಗಿ ಕೊನೆ ಸಂದರ್ಶನ ಆಡಿಯೋ

"We are against TCS LayOff", ಎಂಬ ಫೇಸ್ ಬುಕ್ ಪುಟಕ್ಕೆ ಸುಮಾರು 15Kಗೂ ಅಧಿಕ ಲೈಕ್ಸ್ ಬಂದಿದೆ. ಈ ಆಡಿಯೋ ಕ್ಲಿಪ್ಪಿಂಗ್ ನಲ್ಲಿ ಎ ಹಾಗೂ ಬಿ(ಸಂಸ್ಥೆಗೆ ಹೊಸ ಸೇರ್ಪಡೆ) ಉದ್ಯೋಗಿಗಳು ನಿಮಗಿಂತ(ಸಿ) ಹೆಚ್ಚಿನ ದುಡಿಮೆ ನೀಡುತ್ತಿದ್ದಾರೆ. ನಿಮ್ಮ ಅಗತ್ಯವಿಲ್ಲ ಎಂದು ಚೆನ್ನೈ ಮೂಲದ ಎಚ್ ಆರ್ ಮ್ಯಾನೇಜರ್ ಹೇಳುವುದನ್ನು ಕೇಳಬಹುದು.

ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ ಟಿಸಿಎಸ್ ಸುದ್ದಿ

ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ ಟಿಸಿಎಸ್ ಸುದ್ದಿ

ಟಿಸಿಎಸ್ ಉದ್ಯೋಗಿ 'ಎಕ್ಸಿಟ್ ಇಂಟರ್ ವ್ಯೂ' ಲೀಕ್ ಆಡಿಯೋ ಕೇಳಿ.. ಕೇಳಲು ನೇರ ಲಿಂಕ್ ಕ್ಲಿಕ್ ಮಾಡಿ

English summary
There are reports that Tata Consultancy Services (TCS), one of the biggest private sector employers in India, is planning to lay off between 25,000 to 30,000 employees in the coming month. Now if an audio clip, allegedly recorded during an exit interview, is to be believed TCS plans to lay off employees who are performing at a level of "C" or below.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X