ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ತಿಂಗಳಲ್ಲಿ 2ನೇ ಬಾರಿ ಸಂಬಳ ಏರಿಕೆ ಮಾಡಿದ ಐಟಿ ಸಂಸ್ಥೆ !

|
Google Oneindia Kannada News

ಬೆಂಗಳೂರು, ಮಾರ್ಚ್ 19: ಟಾಟಾ ಗ್ರೂಪ್‌ ಸಮೂಹದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಭಾರತದ ನಂ.1 ಸಾಫ್ಟ್ ವೇರ್ ರಫ್ತು ಸಂಸ್ಥೆ ಅಲ್ಲದೆ, ವಿಶ್ವದ ಅತಿ ಹೆಚ್ಚು ಮೌಲ್ಯಯುತ ಸಂಸ್ಥೆಯಾಗಿ ಪ್ರಸಕ್ತ ವರ್ಷವನ್ನು ಆರಂಭಿಸಿದೆ. ಟಿಸಿಎಸ್ ತನ್ನ ಉದ್ಯೋಗಿಗಳಿಗೆ ಸಂಬಳ ಏರಿಕೆ, ಇಂಕ್ರಿಮೆಂಟ್ ಘೋಷಿಸಿದೆ.ಈ ಮೂಲಕ ಈ ಆರ್ಥಿಕ ವರ್ಷದಲ್ಲಿ ಇಂಕ್ರಿಮೆಂಟ್ ಘೋಷಿಸಿದ ಮೊದಲ ಐಟಿ ಸಂಸ್ಥೆ ಎನಿಸಿಕೊಂಡಿದೆ ಎಂದು ಟಿಸಿಎಸ್ ವಕ್ತಾರರು ಶುಕ್ರವಾರ ಹೇಳಿದರು.

ಏಪ್ರಿಲ್ 2021ರಿಂದ ಜಾರಿಗೆ ಬರುವಂತೆ ಜಾಗತಿಕವಾಗಿ ಎಲ್ಲಾ ಸ್ತರದ ಉದ್ಯೋಗಿಗಳಿಗೂ ಇಂಕ್ರಿಮೆಂಟ್ ನೀಡಲು ಸಂಸ್ಥೆ ಮುಂದಾಗಿದೆ. ಉದ್ಯೋಗಿಗಳ ಜೊತೆ ಅನುಬಂಧ ಹೀಗೆ ಮುಂದುವರೆಯಲಿದೆ ಎಂದು ಹೇಳಿದರು.

ಟಿಸಿಎಸ್ ಈಗ ವಿಶ್ವದ ನಂಬರ್ ಒನ್ ಸಾಫ್ಟ್ ವೇರ್ ಕಂಪನಿಟಿಸಿಎಸ್ ಈಗ ವಿಶ್ವದ ನಂಬರ್ ಒನ್ ಸಾಫ್ಟ್ ವೇರ್ ಕಂಪನಿ

ಕೊವಿಡ್ 19 ಸಂದರ್ಭದಲ್ಲಿ ಉದ್ಯೋಗ ಕಡಿತ ಇರುವುದಿಲ್ಲ. ಸಂಸ್ಥೆಯ ಅಟ್ರಿಷನ್ ದರ ಶೇ 12.1 ರಷ್ಟಿದೆ. ಭಾರತದಲ್ಲಿ 3.55 ಲಕ್ಷ ಉದ್ಯೋಗಿಗಳಿದ್ದು, ಶೇ 90 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

TCS has become the first IT Services company to announce increment for FY22

ಕಳೆದ ಆರು ತಿಂಗಳಲ್ಲಿ ಎರಡನೇ ಬಾರಿಗೆ ಸಂಬಳ ಏರಿಕೆ ಮಾಡಲಾಗುತ್ತಿದೆ. ಅಕ್ಟೋಬರ್ 2020ರಲ್ಲಿ ಇಂಕ್ರಿಮೆಂಟ್ ನೀಡಲಾಗಿತ್ತು. ಈಗ ಏಪ್ರಿಲ್ 2021ರಲ್ಲಿ ಕನಿಷ್ಠ ಶೇ 12 ರಿಂದ 14ರಷ್ಟು ಸರಾಸರಿ ಇಂಕ್ರಿಮೆಂಟ್ ಸಿಗಲಿದೆ. ಜೊತೆಗೆ ಆಯ್ದ ಉದ್ಯೋಗಿಗಳಿಗೆ ಬಡ್ತಿ ನೀಡಲಾಗುತ್ತಿದೆ.

ಕಾಗ್ನಿಜೆಂಟ್ ಸಂಸ್ಥೆ ಉದ್ಯೋಗಿಗಳಿಗೆ ಬೋನಸ್, ಬಡ್ತಿ ಘೋಷಣೆಕಾಗ್ನಿಜೆಂಟ್ ಸಂಸ್ಥೆ ಉದ್ಯೋಗಿಗಳಿಗೆ ಬೋನಸ್, ಬಡ್ತಿ ಘೋಷಣೆ

ಮಿಕ್ಕಂತೆ ಆಕ್ಸೆಂಚರ್ ಉದ್ಯೋಗಿಗಳಿಗೆ ಒನ್ ಟೈಂ ಬೋನಸ್ ಘೋಷಿಸಿದೆ. ಕಾಂಗ್ನಿಜೆಂಟ್ 24,000 ಉದ್ಯೋಗಳಿಗೆ ಜಾಗತಿಕವಾಗಿ ಬಡ್ತಿ ನೀಡಿದೆ. ಇನ್ಫೋಸಿಸ್, ವಿಪ್ರೋ ಹಾಗೂ ಎಚ್ ಸಿ ಎಲ್ ಟೆಕ್ ಕೂಡಾ ಸಂಬಳ ಏರಿಕೆ ಘೋಷಿಸಿವೆ.

English summary
Tata Consultancy Services (TCS) became the first major IT services company to announce a pay increment for financial year 2021-22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X