ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರು. 8 ಲಕ್ಷ ಕೋಟಿ ದಾಟಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಬಂಡವಾಳ ಮೌಲ್ಯ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 4: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನ (ಟಿಸಿಎಸ್) ಮಾರುಕಟ್ಟೆ ಬಂಡವಾಳ ಮೌಲ್ಯವು ಮಂಗಳವಾರ ಮೊದಲ ಬಾರಿಗೆ ರು. 8 ಟ್ರಿಲಿಯನ್ ದಾಟಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಂತರ ಇಂಥ ಸಾಧನೆ ಮಾಡಿದ ಭಾರತದ ಎರಡನೇ ಕಂಪೆನಿ ಎಂಬ ಅಗ್ಗಳಿಕೆಗೆ ಟಿಸಿಎಸ್ ಪಾತ್ರವಾಗಿದೆ. ಒಂದು ಟ್ರಿಲಿಯನ್ ಅಂದರೆ ಒಂದು ಲಕ್ಷ ಕೋಟಿ ರುಪಾಯಿ.

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನ ಷೇರುಗಳು 2091 ರುಪಾಯಿಗೆ ಏರಿಕೆ ಕಾಣುವ ಮೂಲಕ ಬಂಡವಾಳ ಮೌಲ್ಯವು ರು. 8.01 ಟ್ರಿಲಿಯನ್ ತಲುಪಿತು. ಈ ವರ್ಷದಲ್ಲೇ ಟಿಸಿಎಸ್ ಕಂಪೆನಿ ಷೇರು 54.6% ಏರಿಕೆ ಕಂಡಿದೆ. ಷೇರು ಮರು ಖರೀದಿಯನ್ನು ಕಂಪೆನಿಯು ಸೆಪ್ಟೆಂಬರ್ 6ರಿಂದ ಆರಂಭಿಸಲಿದ್ದು, ಸೆಪ್ಟೆಂಬರ್ 21ಕ್ಕೆ ಕೊನೆಯಾಗಲಿದೆ.

100 ಬಿಲಿಯನ್ ಡಾಲರ್ ಮೌಲ್ಯ ಸಾಧಿಸಿದ ಟಿಸಿಎಸ್100 ಬಿಲಿಯನ್ ಡಾಲರ್ ಮೌಲ್ಯ ಸಾಧಿಸಿದ ಟಿಸಿಎಸ್

ಒಟ್ಟು 16 ಸಾವಿರ ಕೋಟಿ ರುಪಾಯಿಯಷ್ಟು ಷೇರುಗಳ ಮರು ಖರೀದಿ ಮಾಡಲಾಗುತ್ತದೆ. ಅಂದರೆ 76.19 ಮಿಲಿಯನ್ ಷೇರುಗಳನ್ನು ತಲಾ 2,100 ರುಪಾಯಿಯಂತೆ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಕಂಪೆನಿಯ ಒಟ್ಟಾರೆ ಪೇಯ್ಡ್ ಅಪ್ ಬಂಡವಾಳದ 1.99%ನಷ್ಟು ಹೂಡಿಕೆದಾರರಿಂದ ವಾಪಸ್ ಖರೀದಿ ಮಾಡಿದಂತಾಗುತ್ತದೆ.

TCS company market capital crossed 8 trillion, after RIL

ಡಾಲರ್ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಜೂನ್ ತ್ರೈ ಮಾಸಿಕದಲ್ಲಿ ಟಿಸಿಎಸ್ ಉತ್ತಮ ಪ್ರಗತಿಯನ್ನು ದಾಖಲಿಸಿದೆ. ಕಳೆದ ಎಂಟು ತ್ರೈ ಮಾಸಿಕಕ್ಕೆ ಹೋಲಿಸಿದರೆ ಈ ಬಾರಿಯೇ ಅತಿ ಹೆಚ್ಚು ದಾಖಲಾಗಿದೆ.

English summary
TCS company crossed market capital of 8 trillion (8 lakh crore rupees) on Tuesday. After Reliance industries TCS has crossed this 8 trillion mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X