ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ವರೆಗೂ ಎಚ್ -1 ಬಿ ವೀಸಾ ನಿಷೇಧ:ಅಮೆರಿಕಾಕ್ಕೆ TCS ಸಿಇಒ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜುಲೈ 10: ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಡಿಸೆಂಬರ್ ಅಂತ್ಯದವರೆಗೂ ಎಚ್ -1 ಬಿ ವೀಸಾ ರದ್ದುಗೊಳಿಸಿರುವ ಕುರಿತು ಏಷ್ಯಾದ ಅತಿದೊಡ್ಡ ಐಟಿ ಸೇವೆಗಳ ಸಂಸ್ಥೆ ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಎಚ್ಚರಿಕೆ ನೀಡಿದ್ದಾರೆ.

Recommended Video

India and China both wants peace says China | Oneindia Kannada

ಅಮೆರಿಕಾ ಸಾವಿರಾರು ಉದ್ಯೋಗ ವೀಸಾಗಳನ್ನು ಸ್ಥಗಿತಗೊಳಿಸುವುದರಿಂದ ವಾಲ್ ಸ್ಟ್ರೀಟ್ ಬ್ಯಾಂಕುಗಳು, ವಾಹನ ತಯಾರಕರು ಮತ್ತು ಔಷಧ ತಯಾರಕರಂತಹ ಅಮೆರಿಕಾದ ನಿಗಮಗಳಿಗೆ ಮಾತ್ರ ವೆಚ್ಚ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಎಚ್ -1 ಬಿ ವೀಸಾ ನಿಷೇಧ: ಟಿಸಿಎಸ್ ಸೇರಿದಂತೆ ಭಾರತದ ಐಟಿ ಕಂಪನಿಗಳ ಷೇರುಗಳು ತತ್ತರಎಚ್ -1 ಬಿ ವೀಸಾ ನಿಷೇಧ: ಟಿಸಿಎಸ್ ಸೇರಿದಂತೆ ಭಾರತದ ಐಟಿ ಕಂಪನಿಗಳ ಷೇರುಗಳು ತತ್ತರ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ ಸಿಇಒ ರಾಜೇಶ್ ಗೋಪಿನಾಥನ್ ಬ್ಲೂಮ್ಬರ್ಗ್ ನ್ಯೂಸ್‌ ಜೊತೆಗೆ ಮಾತನಾಡಿದ್ದು ಈ ಕ್ರಮವು ಅಮೆರಿಕಾದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ ಮತ್ತು ಅಮೆರಿಕನ್ ಕ್ಲೈಂಟ್‌ಗಳನ್ನು ಬೆಂಬಲಿಸಲು ಸಹಾಯ ಮಾಡಿದ ಭಾರತೀಯ ಮೂಲದ ಎಂಜಿನಿಯರ್‌ಗಳ ಮೇಲೆ ಭಾರಿ ಒತ್ತಡವನ್ನುಂಟು ಮಾಡಿದೆ. ಅಂತಿಮವಾಗಿ ಅವರು ಹೆಚ್ಚು ನೋವನ್ನು ಅನುಭವಿಸುತ್ತಾರೆ ಎಂದಿದ್ದಾರೆ.

TCS CEO Warns Trumps Visa Curbs Will Cost US

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೂನ್ ಅಂತ್ಯದ ವೇಳೆಗೆ ಹಲವಾರು ವೀಸಾಗಳ ಅನುಮೋದನೆಗಳನ್ನು ವರ್ಷದ ಅಂತ್ಯದವರೆಗೆ ನಿಲ್ಲಿಸಲು ನಿರ್ಧಾರ ತೆಗೆದುಕೊಂಡ ಬಳಿಕ ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಅನೇಕ ಐಟಿ ದಿಗ್ಗಜರು ಅಮೆರಿಕಾ ನಿರ್ಧಾರವನ್ನು ಟೀಕಿಸಿದರು.

ಅಮೆರಿಕಾದ ಎಚ್ -1 ಬಿ ವೀಸಾ ರದ್ದತಿ ಕ್ರಮವು ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಉದ್ಯೋಗ ಕಳೆದುಕೊಂಡಿರುವ ಲಕ್ಷಾಂತರ ಯುಎಸ್ ನಾಗರಿಕರಿಗೆ ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಟ್ರಂಪ್ ಅವರ ನಿರ್ಧಾರವು ಅಮೆರಿಕಾದಲ್ಲಿ 5,25,000 ಉದ್ಯೋಗಗಳನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ.

English summary
TCS Ceo warned that a U.S. freeze on thousands of employment visas will only raise costs for American corporations like Wall Street banks, auto manufacturers and drugmakers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X