ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ಈಗ ವಿಶ್ವದ ನಂಬರ್ ಒನ್ ಸಾಫ್ಟ್ ವೇರ್ ಕಂಪನಿ

|
Google Oneindia Kannada News

ಬೆಂಗಳೂರು, ಜನವರಿ 25: ಟಾಟಾ ಗ್ರೂಪ್‌ ಸಮೂಹದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಭಾರತದಲ್ಲಿ ನಂ.1 ಸಾಫ್ಟ್ ವೇರ್ ರಫ್ತು ಸಂಸ್ಥೆ ಎಂಬುದು ಟೆಕ್ ಕ್ಷೇತ್ರದಲ್ಲಿ ಎಲ್ಲರಿಗೂ ತಿಳಿದಿದೆ. ಸೋಮವಾರ(ಜ. 25) ದಂದು ಟಿಸಿಎಸ್ ವಿಶ್ವದ ನಂ. 1 ಸಾಫ್ಟ್ ವೇರ್ ಸಂಸ್ಥೆ ಎನಿಸೊಂಡಿದೆ.

ವಿಶ್ವದ ಹೆಚ್ಚು ಮೌಲ್ಯಯುತ ಐಟಿ ಸಂಸ್ಥೆ ಎನಿಸಿಕೊಂಡಿದ್ದ ಆಕ್ಸೆಂಚರ್ ಸಂಸ್ಥೆ(168.57B)ಯನ್ನು ಟಿಸಿಎಸ್ ಹಿಂದಿಕ್ಕಿದೆ. ಸೋಮವಾರ ಟಿಸಿಎಸ್ ಮಾರುಕಟ್ಟೆ ಮೌಲ್ಯ 169.9 ಬಿಲಿಯನ್ ಡಾಲರ್ ಏರಿಕೆ ಕಂಡಿದೆ.

ಮಾರುಕಟ್ಟೆ ಮೌಲ್ಯ ದಿಢೀರ್ ಏರಿಕೆ ಕಾಣುತ್ತಿದ್ದಂತೆ ಟಿಸಿಎಸ್ ಮಾರುಕಟ್ಟೆ ಮೌಲ್ಯ ಜನವರಿ 25ರ ಮಧ್ಯಾಹ್ನದ ವೇಳೆಗೆ 12,43,540.29 ಕೋಟಿ ರೂಪಾಯಿ ನಷ್ಟಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಂತರ 12 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಕ್ಯಾಪ್ ಹೊಂದಿದ ಕಂಪನಿ ಎಂಬ ದಾಖಲೆಗೂ ಟಿಸಿಎಸ್ ಪಾತ್ರವಾಗಿದೆ.

TCS beats Accenture to become most-valued IT company of the world

2018ರಲ್ಲಿ ಐಬಿಎಂ ಟಾಪ್ ಸ್ಥಾನದಲ್ಲಿತ್ತು. ಟಿಸಿಎಸ್ ಸೇರಿದಂತೆ ಉಳಿದ ಐಟಿ ಸಂಸ್ಥೆಗಳಿಗಿಂತ ಈ ಪುರಾತನ ಸಂಸ್ಥೆ ಶೇ 300 ರಷ್ಟು ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿತ್ತು. ಆದರೆ, 2019ರ ಏಪ್ರಿಲ್ ನಲ್ಲಿ ಟಿಸಿಎಸ್ ಮೊದಲ ಬಾರಿಗೆ 100 ಬಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿರುವ ಐಟಿ ಸಂಸ್ಥೆಗಳ ಸಾಲಿಗೆ ಸೇರ್ಪಡೆಗೊಂಡಿತ್ತು.

ಡಿಸೆಂಬರ್ 31, 2020 ಕ್ಕೆ ಕೊನೆಗೊಂಡ 3ನೇ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭ 8,701 ಕೋಟಿ ರೂಪಾಯಿ ಗಳಿಸಿತ್ತು. ಟಿಸಿಎಸ್ ಷೇರುಗಳು ಬಿಎಸ್ಇಯಲ್ಲಿ 3,287. 40 ರು ನಂತೆ ಟ್ರೆಂಡ್ ಆಗಿದ್ದು, 0.45 ರಷ್ಟು ಕುಸಿತ ಕಂಡಿದೆ. ಎನ್ಎಸ್ಇಯಲ್ಲಿ 3,303 ರು ನಂತೆ ವಹಿವಾಟು ಅಂತ್ಯಗೊಳಿಸಿದೆ.

ಟಾಪ್ 10 ಐಟಿ ಕಂಪನಿಗಳ ಪೈಕಿ ಟಾಪ್ 4 ಕಂಪನಿಗಳ ಮೌಲ್ಯ ಒಟ್ಟುಗೂಡಿಸಿದರೆ ಕಳೆದ ವಾರ 1,15,758.53 ಕೋಟಿ ರು ನಷ್ಟಿತ್ತು. ರಿಲಯನ್ಸ್, ಟಿಸಿಎಸ್, ಹಿಂದೂಸ್ತಾನ್ ಲಿವರ್, ಬಜಾಜ್ ಫೈನಾನ್ಸ್ ಸದ್ಯ ಮಾರುಕಟ್ಟೆ ಮೌಲ್ಯ ಹೆಚ್ಚಳ ಕಂಡ ಕಂಪನಿಗಳಾಗಿವೆ.

English summary
TCS surpassed Accenture to become world's most-valuable information technology firm for first time on October 9, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X