ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣದ ನಂತರ ತೆರಿಗೆದಾರರ ಸಂಖ್ಯೆ ಹೆಚ್ಚಳ

By Prasad
|
Google Oneindia Kannada News

ನವದೆಹಲಿ, ಜನವರಿ 29 : 2016ರ ನವೆಂಬರ್ 8ರಂದು ಆದ ಅಪನಗದೀಕರಣದಿಂದ ಹಿಡಿದುಕೊಂಡು ಇಂದಿನವರೆಗೆ ಅಪನಗದೀಕರಣದ ಬಾಧ್ಯತೆಯ ಬಗ್ಗೆ ಟೀಕೆ ಟಿಪ್ಪಣೆಗಳು ಸಾಕಷ್ಟು ಹರಿದುಬಂದಿವೆ. ಕೇಂದ್ರ ಎಷ್ಟೇ ಸಮಜಾಯಿಷಿ ಕೊಟ್ಟರು ಒಪ್ಪಿಕೊಳ್ಳದಿರುವವರು ಇನ್ನೂ ಹಲವರಿದ್ದಾರೆ.

ಆದರೆ, ಸಾವಿರ ಮತ್ತು ಐನೂರು ರುಪಾಯಿ ಹಳೆಯ ನೋಟುಗಳನ್ನು ರದ್ದುಗೊಳಿಸಿ, ಆರ್ಥಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದ ನಂತರ, ನಿಧಾನವಾಗಿಯಾದರೂ ದೇಶದಲ್ಲಿ ತೆರಿಗೆ ಕಟ್ಟುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

2018- 19ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ದರ 7- 7.52018- 19ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ದರ 7- 7.5

ಕೇಂದ್ರ ಬಜೆಟ್ಟಿಗೂ ಮುನ್ನ 2017-18ನೇ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಂಸತ್ತಿನಲ್ಲಿ ಕೇಂದ್ರ ಸರಕಾರ ಸೋಮವಾರ ಮಂಡಿಸಿದೆ. ಪ್ರಸಕ್ತ ವರ್ಷ ಜಿಡಿಪಿ 7ರಿಂದ 7.5ರವರೆಗೆ ವೃದ್ಧಿಯಾಗಲಿದೆ ಎಂದು ಸಮೀಕ್ಷೆ ತಿಳಿಸಿದ್ದು, ಫೆಬ್ರವರಿ 1ರಂದು ಮಂಡನೆಯಾಗಲಿರುವ ಬಜೆಟ್ಟಿನ ಬಗ್ಗೆ ಹಲವಾರು ಸೂಚನೆಗಳನ್ನು ಕೂಡ ನೀಡಿದೆ.

Tax payers base increased after demonetisation and GST : Economic Survey

ಪ್ರತಿ ತಿಂಗಳಲ್ಲಿ ತೆರಿಗೆ ಕಟ್ಟುವವರ ಸಂಖ್ಯೆ ಶೇ.0.8ರಷ್ಟು (ವಾರ್ಷಿಕ ಶೇ.10ರಷ್ಟು) ಹೆಚ್ಚಿದೆ. 2017ರ ನವೆಂಬರ್ ತಿಂಗಳಲ್ಲಿ ಸರಾಸರಿಗಿಂತ ಶೇ. 31ರಷ್ಟು ತೆರಿಗೆ ಕಟ್ಟುವುದು ಹೆಚ್ಚಾಗಿದ್ದು, ಆರ್ಥಿಕವಾಗಿ ಬಾರೀ ಆಶಾಭಾವನೆ ಮೂಡಿಸಿದೆ ಎಂದು ಹಣಕಾಸು ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಸಂತಸ ವ್ಯಕ್ತಪಡಿಸಿದ್ದಾರೆ.

ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯ ನಂತರ 18 ಲಕ್ಷದಷ್ಟು ಹೊಸ ತೆರಿಗೆದಾರರು ಶೇ.3ರಷ್ಟಿರುವ ತೆರಿಗೆದಾರರನ್ನು ಸೇರಿಕೊಂಡಿದ್ದಾರೆ. ನರೇಂದ್ರ ಮೋದಿಯವರು 2016ರ ನವೆಂಬರ್ 8ರಂದು, ಭ್ರಷ್ಟಾಚಾರ, ಕಾಳಧನ ಮತ್ತು ಭಯೋತ್ಪಾದನೆ ಮಟ್ಟ ಹಾಕುವ ಉದ್ದೇಶದಿಂದ ಸಾವಿರ ಮತ್ತು ಐನೂರು ನೋಟುಗಳನ್ನು ರದ್ದುಗೊಳಿಸಿದ್ದರು.

ಆರ್ಥಿಕತೆಯನ್ನು ಅತೀಹೆಚ್ಚು ಭಾರತೀಯರನ್ನು ತೆರಿಗೆಯ ಚೌಕಟ್ಟಿನೊಳಗೆ ತರುವ ಮತ್ತೊಂದು ಉದ್ದೇಶದಿಂದ ಅಪನಗದೀಕರಣ ಮತ್ತು ಜಿಎಸ್ಟಿ ದರಗಳನ್ನು ಬದಲಿಸಿ ಜಾರಿಗೆ ತರಬೇಕಾಯಿತು. ಪ್ರಸ್ತುತ 5.93 ಕೋಟಿ ರುಪಾಯಿ ಕೋಟಿ ತೆರಿಗೆದಾರರು ದೇಶದೊಳಗಿದ್ದಾರೆ.

English summary
Tax payers base in India has increased significantly after implementation of demonetisation and GST, says Economic Survey 2017-18 presented by Union government in Parliament on 29th January, just before presentation of Union Budget 2018 on February 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X