ಬಿಟ್ ಕಾಯಿನ್ ಆದಾಯದ ಮೇಲೆ ತೆರಿಗೆ ಅಧಿಕಾರಿಗಳ ಕಣ್ಣು

Posted By:
Subscribe to Oneindia Kannada

ಹಣದಂತೆಯೇ ಬಳಕೆಯಾಗುವ ಬಿಟ್ ಕಾಯಿನ್ ಥರದ ಬಳಕೆ ದಿನದಿನಕ್ಕೂ ಜನಪ್ರಿಯವಾಗುತ್ತಿದೆ. ಆದರೆ ಅವುಗಳಿಂದ ಆಗುವ ಲಾಭದ ಮೇಲೆ ಹೇಗೆ ತೆರಿಗೆ ಹಾಕಲಾಗುತ್ತದೆ ಎಂಬ ಬಗ್ಗೆ ಇನ್ನೂ ಗೊಂದಲ ಇದೆ. ಆದ್ದರಿಂದಲೇ ಈ ರೀತಿಯ ವ್ಯವಹಾರದಲ್ಲಿ ಬಂದ ಲಾಭಕ್ಕೆ ತೆರಿಗೆ ಪಾವತಿಸುವುದಿಲ್ಲ.

ಸಾಫೃ ವೇರ್ ಡೆವಲಪರ್ ಆಗಿರುವ ಪವನ್ ಭಾರ್ತಿ ಈಚೆಗೆ ಐವತ್ತೈದು ಸಾವಿರ ರುಪಾಯಿಯಷ್ಟು ಮೌಲ್ಯದ ಬಿಟ್ ಕಾಯಿನ್ ಮಾರಿದ್ದರು. ಅದೂ ಅವರು ಮಾಡಿದ್ದ ಹೂಡಿಕೆ ದುಪ್ಪಟ್ಟು ಆದ ನಂತರ. "ಈ ಗಳಿಕೆ ಮೇಲೆ ತೆರಿಗೆ ಕಟ್ಟಬೇಕೋ ಬೇಡವೋ ಎಂಬುದು ನನಗೂ ಗೊತ್ತಿಲ್ಲ, ನನ್ನ ಸ್ನೇಹಿತರಿಗೂ ಗೊತ್ತಿಲ್ಲ" ಎನ್ನುತ್ತಾರೆ.

ವಿದೇಶಿ ದೇಣಿಗೆ ಸ್ವೀಕಾರ: 1222 ಎನ್ ಜಿಒಗಳಿಗೆ ಕೇಂದ್ರದ ನೋಟಿಸ್

ಅದರಿಂದ ಬಂದ ಲಾಭವನ್ನು ನಿರಂತರ ಆದಾಯ ತರಬಲ್ಲದರ ಮೇಲೆ ಹೂಡಿಕೆ ಮಾಡಬೇಕು ಎಂಬುದು ಅವರ ಉದ್ದೇಶ. ಈ ರೀತಿ ಹಣಕ್ಕೆ ಸಮನಾದದ್ದರ ಮೇಲೆ ಹೂಡಿಕೆ ಮಾಡಿ, ಅದರ ಮೇಲೆ ಲಾಭ ಬಂದರೆ ಅದಕ್ಕೆ ತೆರಿಗೆ ಪಾವತಿಸಲೇ ಬೇಕು ಎನ್ನುತ್ತಾರೆ ತೆರಿಗೆ ತಜ್ಞರು.

ಆದರೆ, ಹೂಡಿಕೆದಾರರ ಆಲೋಚನೆ ಏನೆಂದರೆ, ಈ ರೀತಿಯ ಹಣಕ್ಕೆ ಸಮನಾದದ್ದರ ಮೇಲಿನ ಗಳಿಕೆ ಬಗ್ಗೆ ಆದಾಯ ತೆರಿಗೆ ಕಾಯ್ದೆಯಲ್ಲಿ ನಿರ್ದಿಷ್ಟ ಪ್ರಸ್ತಾವ ಇಲ್ಲ ಅಂದುಕೊಂಡು ಬಿಡ್ತಾರೆ. ವಾಸ್ತವದಲ್ಲಿ ಯಾವುದೇ ಆದಾಯ ಅಥವಾ ಲಾಭಕ್ಕೆ ತೆರಿಗೆ ಪಾವತಿಸಲೇಬೇಕು ಎಂಬುದು ಆದಾಯ ತಜ್ಞರ ಅಭಿಮತ.

ಲಾಭದ ಉದ್ದೇಶಕ್ಕೇ ಖರೀದಿ

ಲಾಭದ ಉದ್ದೇಶಕ್ಕೇ ಖರೀದಿ

ಇನ್ನೊಂದು ವಿಚಾರ ಏನೆಂದರೆ, ಇಂಥ ಕರೆನ್ಸಿಗಳನ್ನು ತಾವು ಖರೀದಿಸಿದ ಸರಕಿಗೆ ಬದಲಾಗಿ ನೀಡುವುದಕ್ಕೆ ಬಳಸಿದರೆ ಅದಕ್ಕೆ ತೆರಿಗೆ ಆಗುವುದಿಲ್ಲ. ಆದರೆ ಈ ರೀತಿ ಸರಕಿಗೆ ಬದಲಾಗಿ ನೀಡುವ ಸಂದರ್ಭ ವಿರಳ. ಬಹಳ ಮಂದಿ ಅವುಗಳಿಂದ ಲಾಭ ಮಾಡಬೇಕು ಅಂದುಕೊಂಡೇ ಖರೀದಿ ಮಾಡುತ್ತಾರೆ.

ಶೇಕಡಾ ಇಪ್ಪತ್ತರಷ್ಟು ತೆರಿಗೆ

ಶೇಕಡಾ ಇಪ್ಪತ್ತರಷ್ಟು ತೆರಿಗೆ

ಬಿಟ್ ಕಾಯಿನ್ ನಂಥದ್ದರ ಮೇಲೆ ಮಾಡುವ ಲಾಭವನ್ನು ಕ್ಯಾಪಿಟಲ್ ಗೇಯ್ನ್ (ಬಂಡವಾಳದ ಮೇಲಿನ ಲಾಭ) ಅಂತಲೇ ಪರಿಗಣಿಸಲಾಗುತ್ತದೆ. ಮೂರು ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಇವುಗಳನ್ನು ಇಟ್ಟುಕೊಂಡು ಆದ ಲಾಭದಲ್ಲಿ ಶೇ ಇಪ್ಪತ್ತರಷ್ಟನ್ನು ಹೂಡಿಕೆದಾರರು ತೆರಿಗೆಯಾಗಿ ಪಾವತಿಸಬೇಕು.

ವ್ಯವಹಾರದ ಆದಾಯ

ವ್ಯವಹಾರದ ಆದಾಯ

ಅದಕ್ಕಿಂತ ಕಡಿಮೆ ಅವಧಿಯಾದಲ್ಲಿ ಅದನ್ನು ಅಲ್ಪಾವಧಿ ಲಾಭಾ ಅಂತ ಪರಿಗಣಿಸಿ, ಅದನ್ನು ಹೂಡಿಕೆದಾರರ ಆದಾಯಕ್ಕೇ ಸೇರಿಸಲಾಗುತ್ತದೆ. ಆಗ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ನಿರಂತರವಾಗಿ ಬಿಟ್ ಕಾಯಿನ್ ನ ವ್ಯವಹಾರ ಮಾಡುವವರಾದರೆ, ಅದರ ಮೇಲೆ ಗಳಿಸುವ ಲಾಭ ವ್ಯವಹಾರದಿಂದ ಬಂದ ಆದಾಯ (ಬಿಜಿನೆಸ್ ಇನ್ ಕಮ್) ಆಗುತ್ತದೆ.

ದಂಡ ವಿಧಿಸಬಹುದು

ದಂಡ ವಿಧಿಸಬಹುದು

ಈ ರೀತಿ ವ್ಯವಹಾರಗಳೆಲ್ಲವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದೇ ಬರುತ್ತವೆ. ಒಂದು ವೇಳೆ ತೆರಿಗೆ ಕದಿಯಲು ಪ್ರಯತ್ನಿಸಿದರೆ ದಂಡ ಕೂಡ ವಿಧಿಸಬಹುದು. ಬಿಟ್ ಕಾಯಿನ್ ನಿಂದ ಬಂದ ಆದಾಯ ಬ್ಯಾಂಕ್ ಖಾತೆಯಲ್ಲಿ ಕಂಡುಬಂದಾಗ ನೋಟಿಸ್ ಕೂಡ ಕಳಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Income Tax officials keep close eye on the income made by investors from virtual currencies like bit coin. Who are invested in virtual currencies have a doubt about tax implication.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ