ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಸೋಲಾರ್‌ ಘಟಕ ಮಾಡಲು ಟಾಟಾ 3000 ಕೋಟಿ ಹೂಡಿಕೆ

|
Google Oneindia Kannada News

ಚೆನ್ನೈ, ಜು.4: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಸೌರ ಕೋಶಗಳು ಮತ್ತು ಮಾಡ್ಯೂಲ್‌ಗಳನ್ನು ತಯಾರಿಸಲು ಹೊಸ ಘಟಕ ಸ್ಥಾಪಿಸಲು 3,000 ಕೋಟಿ ರೂಪಾಯಿ ಹೂಡಿಕೆ ಮಾಡಲು ತಮಿಳುನಾಡು ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಟಾಟಾ ಪವರ್ ಸೋಮವಾರ ಪ್ರಕಟಿಸಿದೆ.

ಭಾರತದ ಅತಿದೊಡ್ಡ ಸಂಯೋಜಿತ ವಿದ್ಯುತ್ ಕಂಪನಿಗಳಲ್ಲಿ ಒಂದಾದ ಟಾಟಾ ಪವರ್, ತಿರುನೆಲ್ವೇಲಿ ಜಿಲ್ಲೆಯಲ್ಲಿ ಗ್ರೀನ್‌ಫೀಲ್ಡ್ 4 ಗಿಗಾ ವ್ಯಾಟ್‌ ಸೋಲಾರ್ ಸೆಲ್ ಮತ್ತು 4 ಗಿಗಾ ವ್ಯಾಟ್‌ ಸೋಲಾರ್ ಮಾಡ್ಯೂಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸರಿಸುಮಾರು 3,000 ಕೋಟಿ ರೂಪಾಯಿ ಹೂಡಿಕೆ ಮಾಡಲು ತಮಿಳುನಾಡು ಸರ್ಕಾರದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ಗ್ರಾಹಕರಿಗೆ ಸಿಹಿಸುದ್ದಿ: ಹಿಂದೂಸ್ತಾನ್‌ ಮೋಟಾರ್ಸ್‌ನಿಂದ 2023ಕ್ಕೆ ಎಲೆಕ್ಟ್ರಿಕ್‌ ಬೈಕ್‌ ರಸ್ತೆಗೆಗ್ರಾಹಕರಿಗೆ ಸಿಹಿಸುದ್ದಿ: ಹಿಂದೂಸ್ತಾನ್‌ ಮೋಟಾರ್ಸ್‌ನಿಂದ 2023ಕ್ಕೆ ಎಲೆಕ್ಟ್ರಿಕ್‌ ಬೈಕ್‌ ರಸ್ತೆಗೆ

ಟಾಟಾ ಹೇಳಿಕೆಯ ಪ್ರಕಾರ, ರಾಜ್ಯದಲ್ಲಿ ಶುದ್ಧ ಇಂಧನ ಪರಿವರ್ತನೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಸರ್ಕಾರ ಮತ್ತು ಕಂಪೆನಿಯ ಬದ್ಧತೆಯನ್ನು ತಿಳಿವಳಿಕೆ ಒಪ್ಪಂದವು ವಿವರಿಸುತ್ತದೆ. ಸ್ಥಾವರದಲ್ಲಿ ಹೂಡಿಕೆಯನ್ನು 16 ತಿಂಗಳ ಅವಧಿಯಲ್ಲಿ ಮಾಡಲಾಗುವುದು ಮತ್ತು ನೇರವಾಗಿ ಅಥವಾ ಪರೋಕ್ಷವಾಗಿ 2,000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ಅವುಗಳಲ್ಲಿ ಹೆಚ್ಚಿನವು ಮಹಿಳೆಯರಿಗೆ ಆದ್ಯತೆ ನೀಡಲಾಗವುದು ಎಂದು ಅದು ಹೇಳಿದೆ.

 ಅತ್ಯಾಧುನಿಕ ಉತ್ಪಾದನಾ ಸೌಲಭ್ಯ ಸ್ಥಾಪನೆ

ಅತ್ಯಾಧುನಿಕ ಉತ್ಪಾದನಾ ಸೌಲಭ್ಯ ಸ್ಥಾಪನೆ

ರಾಜ್ಯ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತಮಿಳುನಾಡು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್. ಕೃಷ್ಣನ್, ಕೈಗಾರಿಕಾ ಇಲಾಖೆ ಮತ್ತು ಟಾಟಾ ಪವರ್‌ನ ಸಿಇಒ ಮತ್ತು ಎಂಡಿ ಪ್ರವೀರ್ ಸಿನ್ಹಾ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಟಾಟಾ ಪವರ್ ದೇಶದಲ್ಲಿ ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಬದ್ಧವಾಗಿದೆ ಮತ್ತು ಹಸಿರು ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ವಿಷಯದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ನೂತನ ಜಿಎಸ್‌ಟಿ ದರ: ಹಾಲಿನ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆನೂತನ ಜಿಎಸ್‌ಟಿ ದರ: ಹಾಲಿನ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ

 ಬೆಂಗಳೂರಿನಲ್ಲಿರುವ ಮೊದಲ ಅಸ್ತಿತ್ವ

ಬೆಂಗಳೂರಿನಲ್ಲಿರುವ ಮೊದಲ ಅಸ್ತಿತ್ವ

ಕಂಪನಿಯು 1991ರಲ್ಲಿ ದೇಶದಲ್ಲಿ ಸೌರ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಿದ ಮೊದಲ ಸಂಸ್ಥೆಗಳಲ್ಲಿ ಒಂದಾಗಿದೆ ಮತ್ತು ಅಂದಿನಿಂದ ಎಫ್‌ವೈ 21 ರಲ್ಲಿ ಮೊನೊ ಪಿಆರ್‌ಸಿ ಸೆಲ್ ಲೈನ್ ಅನ್ನು ಕರ್ನಾಟಕದ ಬೆಂಗಳೂರಿನಲ್ಲಿರುವ ಅದರ ಅಸ್ತಿತ್ವದಲ್ಲಿರುವ ಸೌಲಭ್ಯದಲ್ಲಿ ಸ್ಥಾಪಿಸುವ ಮೂಲಕ ಸೌಲಭ್ಯವನ್ನು ನಿಯಮಿತವಾಗಿ ಅಪ್‌ಗ್ರೇಡ್ ಮಾಡಿದೆ.

 ತಮಿಳಿನಾಡಿನ ಬೆಂಬಲದೊಂದಿಗೆ ಸ್ಥಾಪನೆ

ತಮಿಳಿನಾಡಿನ ಬೆಂಬಲದೊಂದಿಗೆ ಸ್ಥಾಪನೆ

ಟಾಟಾ ಪವರ್ ಸಿಇಒ ಮತ್ತು ಎಂಡಿ ಪ್ರವೀರ್ ಸಿನ್ಹಾ ಮಾತನಾಡಿ, ಭಾರತವು ತನ್ನ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಶುದ್ಧ ಮತ್ತು ಹಸಿರು ಇಂಧನ ಪರಿಹಾರಗಳ ಬಳಕೆಯನ್ನು ಮುನ್ನಡೆಸಲು ಅವಕಾಶವನ್ನು ಹೊಂದಿದೆ. ಟಾಟಾ ಪವರ್ ಸೋಲಾರ್‌ನ ಹೊಸ ಉತ್ಪಾದನಾ ಘಟಕವನ್ನು ತಮಿಳಿನಾಡಿನ ಬೆಂಬಲ ಮತ್ತು ನೆರವಿನೊಂದಿಗೆ ಸ್ಥಾಪಿಸಲಾಗುತ್ತಿದೆ. ಬೃಹತ್ ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ ದೇಶದಲ್ಲಿ ಶುದ್ಧ ಇಂಧನ ಪರಿಹಾರಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸರ್ಕಾರವು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

 635 ಮೆಗಾ ವ್ಯಾಟ್‌ ಸಾಮರ್ಥ್ಯದ ಮಾಡ್ಯೂಲ್‌

635 ಮೆಗಾ ವ್ಯಾಟ್‌ ಸಾಮರ್ಥ್ಯದ ಮಾಡ್ಯೂಲ್‌

ಬೆಂಗಳೂರಿನ ನಂತರ ಟಾಟಾ ಪವರ್ ಸೋಲಾರ್‌ನ ತಮಿಳುನಾಡು ಘಟಕವು ಕಂಪನಿಯ ಎರಡನೇ ಉತ್ಪಾದನಾ ಘಟಕವಾಗಿದೆ. ಭಾರತದಲ್ಲಿ ಅತಿದೊಡ್ಡ ಸೌರ ಉತ್ಪಾದಕರಲ್ಲಿ ಒಂದಾಗಿರುವ ಕಂಪನಿಯು ಬೆಂಗಳೂರಿನಲ್ಲಿ ಉತ್ಪಾದನಾ ಘಟಕವನ್ನು ನಿರ್ವಹಿಸುತ್ತಿದ್ದು, 635 ಮೆಗಾ ವ್ಯಾಟ್‌ ಸಾಮರ್ಥ್ಯದ ಮಾಡ್ಯೂಲ್‌ಗಳು ಮತ್ತು 500 ಮೆಗಾ ವ್ಯಾಟ್‌ ಸೆಲ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

English summary
Tata Power on Monday announced that it has signed an agreement with the Tamil Nadu government to invest Rs 3,000 crore to set up a new unit to manufacture solar cells and modules in Tamil Nadu's Tirunelveli district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X