ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಸಾವಿರ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹೊಣೆ ಹೊತ್ತ ಟಾಟಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಮುಂಬರುವ ವರ್ಷಗಳಲ್ಲಿ ದೇಶವನ್ನು ಪೆಟ್ರೋಲ್, ಡೀಸೆಲ್ ಗಳ ಅವಲಂಬನೆಯಿಂದ ಮುಕ್ತವಾಗಿಸುವ ಕೇಂದ್ರ ಸರ್ಕಾರದ ಆಶಯ ನಿಧಾನವಾಗಿ ಸ್ಪಷ್ಟ ಸ್ವರೂಪ ಪಡೆದುಕೊಳ್ಳುತ್ತಿದೆ.

ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳ ತಯಾರಿಗೆ ವಿಶೇಷ ಆದ್ಯತೆ ನೀಡಲು ಸಿದ್ಧವಾಗಿರುವ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನರ್ಜಿ ಎಫಿಷಿಯನ್ಸಿ ಸರ್ವೀಸಸ್ ಲಿಮಿಟೆಡ್ ಗೆ (ಇಇಎಸ್ಎಲ್) 2030ರೊಳಗೆ ಸುಮಾರು 10 ಸಾವಿರ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸಿಕೊಡುವ ಜವಾಬ್ದಾರಿಯನ್ನು ಟಾಟಾ ಮೋಟಾರ್ ಸಂಸ್ಥೆ ಹೊತ್ತುಕೊಂಡಿದೆ. ಇದರ ಮೊದಲ ಹೆಜ್ಜೆಯಾಗಿ, ಇದೇ ವರ್ಷ ನವೆಂಬರ್ ನೊಳಗೆ ಸುಮಾರು 500 ಕಾರುಗಳನ್ನು ಟಾಟಾ ಕಂಪನಿಯು ಇಇಎಸ್ಎಲ್ ಗೆ ತಯಾರಿಸಿಕೊಡಲಿದೆ.

Tata to deliver 10,000 Tigor Electric Vehicles to EESL

ಈ ನಿಟ್ಟಿನಲ್ಲಿ ಕರೆಯಲಾಗಿದ್ದ ಟೆಂಡರ್ ಟಾಟಾ ಸಂಸ್ಥೆಯ ಪಾಲಾಗಿದ್ದು, ಇದೀಗ, ದೇಶದಲ್ಲಿ ಹೊಸತೊಂದು ಟ್ರೆಂಡ್ ಅನ್ನು ಸೃಷ್ಟಿಸಲು ಟಾಟಾ ಸಂಸ್ಥೆ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಅಡಿಯಿಟ್ಟಿವೆ. 2030ರೊಳಗೆ ದೇಶವನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಸರ್ವವ್ಯಾಪಿಯಾಗಿಸುವ ಉದ್ದೇಶ ಇದರ ಹಿಂದಿದೆ. ಇದರೊಂದಿಗೆ ದೇಶಕ್ಕೆ ಅಂಟಿಕೊಂಡಿರುವ ತೈಲಾಧಾರಿತ ಸಾರಿಗೆ ವ್ಯವಸ್ಥೆಯ ಹಣೆಪಟ್ಟಿಯನ್ನು ಕಿತ್ತುಹಾಕುವುದು ಹಾಗೂ ಪರಿಸರ ಮಾಲಿನ್ಯವನ್ನು ತೊಡೆದು ಹಾಕುವ ಉದ್ದೇಶ ಹೊಂದಲಾಗಿದೆ.

ಅಂದಹಾಗೆ, ಟಾಟಾ ಕಂಪನಿಯಿಂದ ಸಿದ್ಧವಾಗಲಿರುವ ಹೊಸ ಮಾದರಿಯ ಇಲೆಕ್ಟ್ರಿಕ್ ಕಾರುಗಳಿಗೆ ಟೈಗರ್ ಎಂದು ಹೆಸರಿಡಲಾಗಿದೆ.

English summary
Tata Motors Ltd. has won a bid from Energy Efficiency Services Ltd. (EESL) by which the automaker will supply 10,000 electric sedans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X