ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಟೆಲಿಸರ್ವೀಸ್ ನಿಂದ ಸಾವಿರಾರು ಹುದ್ದೆ ಕಡಿತ

By Mahesh
|
Google Oneindia Kannada News

ಮುಂಬೈ, ಅಕ್ಟೋಬರ್ 09 : ಟಾಟಾ ಸನ್ಸ್ ಒಡೆತನದ ಟೆಲಿಕಾಂ ಸಂಸ್ಥೆ ಟಾಟಾ ಟೆಲಿಸರ್ವೀಸಸ್(ಟಿಟಿಎಸ್ಎಲ್) ನಿಂದ ಸುಮಾರು 5,000ಕ್ಕೂ ಅಧಿಕ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ವ್ಯವಸ್ಥೆಯಡಿಯಲ್ಲಿ ಉದ್ಯೋಗ ತೊರೆಯುಂತೆ ಸೂಚಿಸಿರುವ ಸುದ್ದಿ ಬಂದಿದೆ.

ಕೆಲ ಉದ್ಯೋಗಿಗಳಿಗೆ ಈ ಕುರಿತಂತೆ ಮೂರರಿಂದ ಆರು ತಿಂಗಳ ನೋಟಿಸ್ ನೀಡಲಾಗಿದ್ದು, ವಿಆರ್ ಎಸ್ ಪಡೆಯುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.

Tata Teleservice TTSL to cut 5,000 jobs

ಟೆಲಿಕಾಂನ ಪ್ರಾದೇಶಿಕ ವೃತ್ತದ ಉನ್ನತ ಅಧಿಕಾರಿಗಳಿಗೆ ಮಾರ್ಚ್ 31,2018ರೊಳಗೆ ಉದ್ಯೋಗ ತೊರೆಯುವಂತೆ ಸೂಚಿಸಲಾಗಿದೆ. ಮಾರ್ಚ್ 321, 2017ರ ಗಣತಿಯಂತೆ ಸಂಸ್ಥೆಯಲ್ಲಿ 5,101 ಉದ್ಯೋಗಿಗಳಿದ್ದಾರೆ.

ಸುಮಾರು 149 ವರ್ಷ ಇತಿಹಾಸ ಹೊಂದಿರುವ ಟಾಟಾ ಸಮೂಹ ಸಂಸ್ಥೆಯು ತನ್ನ ಅತಿ ದೊಡ್ಡ ಟೆಲಿಕಾಂ ಘಟಕವನ್ನು ಮುಚ್ಚುತ್ತಿದೆ. 1996ರಲ್ಲಿ ಲ್ಯಾಂಡ್ ಲೈನ್ ಮೂಲಕ ಸೇವೆ ನೀಡಲು ಆರಂಭಿಸಿದ ಟಾಟಾ ಸಂಸ್ಥೆ 2002ರಲ್ಲಿ ಸಿಡಿಎಂಎ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತು. 2008ರಲ್ಲಿ ಜಿಎಸ್ಎಂ ಫೋನ್ ಗಳನ್ನು ಪರಿಚಯಿಸಿದರೂ ಸಂಸ್ಥೆ ಏಳಿಗೆ ಕಂಡಿರಲಿಲ್ಲ.

ಎನ್ ಟಿಟಿ ಡೊಕೊಮೊದಿಂದ ಸುಮಾರು 14,000 ಕೋಟಿ ರು ಬಂಡವಾಳ ಹೂಡಿಕೆ ಪಡೆದ ಬಳಿಕ 2014ರ ತನಕ ಜಂಟಿಯಾಗಿ ಮಾರುಕಟ್ಟೆ ಸ್ವಲ್ಪ ಹೆಸರು ಕೇಳಿ ಬರುತ್ತಿತ್ತು. 2014ರ ನಂತರ ಎನ್ ಟಿಟಿ ಡೊಕೊಮೊ ಒಪ್ಪಂದದಿಂದ ಹೊರ ಬಂದ ಬಳಿಕ ಟಾಟಾ ಟೆಲಿಕಾಂ ಘಟಕ ನಷ್ಟ ಅನುಭವಿಸುತ್ತಾ ಬಂದು ಈಗ ಮುಚ್ಚುವ ಹಂತ ತಲುಪಿದೆ.

English summary
Tata Teleservices the telecom unit of Tata Sons, is preparing an exit plan for most of its 5,000-odd employees, which includes a notice of three to six months, severance packages for those willing to leave earlier, a voluntary retirement scheme (VRS) for elders, while transferring only a small part of its employees to other group companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X