ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಕಂಪನಿಗೆ 4 ಸಾವಿರ ಕೋಟಿ ಲಾಭ

|
Google Oneindia Kannada News

ನವದೆಹಲಿ, ಫೆಬ್ರವರಿ 10: ಕೊರೊನಾ ಸಾಂಕ್ರಾಮಿಕದಿಂದ ಎಲ್ಲಾ ಸಂಸ್ಥೆಗಳಂತೆ ಟಾಟಾ ಸಮೂಹ ಸಂಸ್ಥೆಯ ಟಾಟಾ ಸ್ಟೀಲ್ ಕೂಡಾ ಬಳಲಿತ್ತು. ಆದರೆ, ಕಳೆದ ತ್ರೈಮಾಸಿಕದಲ್ಲಿ ಭರ್ಜರಿ ಚೇತರಿಕೆ ಕಂಡು 4 ಸಾವಿರ ಕೋಟಿ ಲಾಭ ದಾಖಲಿಸಿದೆ.

ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ ಟಾಟಾ ಸ್ಟೀಲ್ ಸಂಸ್ಥೆಗೆ 4,010 ಕೋಟಿ ರು ನಿವ್ವಳ ಲಾಭ ಬಂದಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,228.53 ಕೋಟಿ ರು ನಷ್ಟ ಅನುಭವಿಸಿತ್ತು ಎಂದು ಬಿಎಸ್ಇಗೆ ತಿಳಿಸಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದ ಅಕ್ಟೋಬರ್ -ಡಿಸೆಂಬರ್ ಅವಧಿಯಲ್ಲಿ ಒಟ್ಟಾರೆ,39,809.05 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ35,613.34 ಕೋಟಿ ರು ಗಳಿಸಿತ್ತು.

Tata Steel posts over Rs 4,010 crore profit for October-December

ಇದೇ ಅವಧಿಯಲ್ಲಿ 34,183.18 ಕೋಟಿ ರು ಆದಾಯದಲ್ಲಿ ವ್ಯಯವಾಗಿದೆ. 2019-20 ರ ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ 35,849.92 ಕೋಟಿ ಖರ್ಚಾಗಿತ್ತು. ಹೀಗಾಗಿ, ಈ ಬಾರಿ ಸಂಸ್ಥೆಯ ಖರ್ಚು ಕೂಡಾ ತಗ್ಗಿಸಲಾಗಿದೆ ಎಂದು ಬಿಎಸ್ಇಗೆ ಮಾಹಿತಿ ನೀಡಲಾಗಿದೆ.

ಬುಧವಾರದಂದು ಷೇರುಪೇಟೆಯಲ್ಲಿ ಟಾಟಾ ಸ್ಟೀಲ್ ಷೇರುಗಳು ಬಿಎಸ್ಇಯಲ್ಲಿ 701 ರು ನಂತೆ ಆರಂಭವಾಗಿ 703.15 ನಂತೆ ವಹಿವಾಟು ನಡೆಸಿತ್ತು. ಈ ಸಮಯಕ್ಕೆ 5 ರು ಏರಿಕೆ ಕಂಡಿದೆ.

English summary
Tata Steel swung back into black in the October-December quarter posting a consolidated profit of Rs 4,010.94 crore for the quarter on the back of increased income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X