ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಸ್ಟಾರ್ ಬಕ್ಸ್ ಸಿಇಒ ನವೀನ್ ರಾಜೀನಾಮೆ, ಸುಶಾಂತ್ ಹೊಸ ಬಾಸ್!

|
Google Oneindia Kannada News

ನವದೆಹಲಿ, ಫೆಬ್ರವರಿ 10: ಟಾಟಾ ಸ್ಟಾರ್ ಬಕ್ಸ್ ಸಿಇಒ ಸ್ಥಾನದಿಂದ ನವೀನ್ ಗುರ್ನಾನಿ ಕೆಳಗಿಳಿದಿದ್ದಾರೆ. ಸುಶಾಂತ್ ಡಾಶ್ ಅವರು ಹೊಸ ಮುಖ್ಯ ನಿರ್ವಹಣಾಧಿಕಾರಿಯಾಗಿ ಮೇ 1,2021ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ.

ಏಪ್ರಿಲ್ 1, 2021ರಂದು ಡಾಶ್ ಅವರು ಟಾಟಾ ಸ್ಟಾರ್ ಬಕ್ಸ್ ಸೇರಲಿದ್ದು, ನಿಯೋಜಿತ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದು, ಏಪ್ರಿಲ್ ನಿಂದ ಪೂರ್ಣಾವಧಿ ಸಿಇಒ ಆಗಿರಲಿದೆ. ನವೀನ್ ಅವರ ನಿರ್ಧಾರಕ್ಕೆ ಬೋರ್ಡ್ ಕೂಡಾ ಸಮ್ಮತಿಸಿದೆ. ಬುಧವಾರದಂದು ಟಿಸಿಪಿಎಲ್ ಬಿಎಸ್ಇಯಲ್ಲಿ 599 ರು ನಂತೆ ವಹಿವಾಟು ಆರಂಭಿಸಿ 2.30 ರು ಏರಿಕೆ ಕಂಡು 601 ರು ತಲುಪಿದೆ.

ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ವಿಭಾಗದಲ್ಲಿ ಅಧ್ಯಕ್ಷರಾಗಿರುವ ಸುಶಾಂತ್ ಅವರು ಸದ್ಯ ಭಾರತವಲ್ಲದೆ ಬಾಂಗ್ಲಾದೇಶ, ಮಧ್ಯಪ್ರಾಚ್ಯದಲ್ಲಿ ಸಂಸ್ಥೆಯ ಪ್ಯಾಕೇಜ್ಡ್ ಪಾನೀಯ ವ್ಯವಹಾರಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. 2012ರಲ್ಲಿ ಮೊದಲ ಸ್ಟಾರ್ ಬಕ್ಸ್ ಕೆಫೆ ಆರಂಭಕ್ಕೆ ಸಂಸ್ಥೆ ಮುನ್ನುಡಿ ಬರೆದಾಗಿನಿಂದಲೂ ಸುಶಾಂತ್ ಅವರು ಈ ವಿಭಾಗದ ಏಳಿಗೆ ಕಾಣುತ್ತಾ ಬಂದಿದ್ದಾರೆ.

Tata Starbucks CEO Navin Gurnaney to step down; Sushant Dash to take over

ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್(ಟಿಸಿಪಿಎಲ್) ಹಾಗೂ ಸ್ಟಾರ್ ಬಕ್ಸ್ 50:50ರ ಅನುಪಾತದಲ್ಲಿ ಅಕ್ಟೋಬರ್ 2012ರಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿರಿಸಿದ್ದು, ಸದ್ಯ 17 ನಗರಗಳಲ್ಲಿ 216 ಮಳಿಗೆಗಳನ್ನು ಹೊಂದಿದೆ.

ಭಾರತದಲ್ಲಿ ಸುಮಾರು 400 ಕೋಟಿ ರು ಬಂಡವಾಳ ಹೂಡಿಕೆ ಮಾಡಿರುವ ಸ್ಟಾರ್ ಬಕ್ಸ್ 2012ರಲ್ಲಿ 30 ಮಳಿಗೆಗಳನ್ನು ಆರಂಭಿಸಿತ್ತು. 3,000 ದಿಂದ 3,500 ಚ.ಅಡಿ ವಿಸ್ತೀರ್ಣದ ಮಳಿಗೆಗಳಲ್ಲಿ ಗ್ರಾಹಕರಿಗೆ ಸ್ಟಾರ್ ಬಕ್ಸ್ ಕಾಫಿ ನೀಡುತ್ತಿದೆ.

ವಾಷಿಂಗ್ಟನ್ ನ ಸಿಯಾಟಲ್ ಮೂಲದ ಸ್ಟಾರ್ ಬಕ್ಸ್ ಕಾರ್ಪೋರೇಷನ್ ಸಂಸ್ಥೆ ಅಂತಾರಾಷ್ಟ್ರೀಯ ಕಾಫಿ ಕಂಪನಿಯಾಗಿದೆ. ವಿಶ್ವದ ಅತ್ಯಂತ ವಿಸ್ತಾರವಾದ ಕಾಫಿ ಶಾಪ್ ಜಾಲ ಹೊಂದಿರುವ ಸಂಸ್ಥೆ ಇದಾಗಿದ್ದು 62ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 19,000ಕ್ಕೂ ಅಧಿಕ ಕಾಫಿ ಶಾಪ್ ಜಗತ್ತಿನೆಲ್ಲೆಡೆ ಇದೆ. 1922ರಲ್ಲಿ ಸ್ಥಾಪಿತವಾದ ಕಂಪನಿ.

English summary
Tata Starbucks CEO Navin Gurnaney will step down and Sushant Dash will be taking over as CEO from May 1, 2021, the company announced on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X