• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿಚ್ಚ ಸುದೀಪ್ ಜೊತೆ ಟಾಟಾ ಸ್ಕೈ ಡಿಟಿಎಚ್ ಸಂಭ್ರಮ

By Mahesh
|

ಬೆಂಗಳೂರು, ಆಗಸ್ಟ್ 09: ಟಾಟಾ ಸ್ಕೈ, ಭಾರತದ ಪ್ರಮುಖ ಡೈರೆಕ್ಟ್ ಟು ಹೋಂ (ಡಿಟಿಎಚ್) ಸೇವಾ ಸಂಸ್ಥೆಯಾಗಿದ್ದು, ಈಗ ಕರ್ನಾಟಕದಲ್ಲಿ ತನ್ನ ಯಶಸ್ಸನ್ನು ಸ್ಯಾಂಡಲ್ ವುಡ್ ಸೂಪರ್‌ಸ್ಟಾರ್ ಸುದೀಪ್ ಅವರೊಂದಿಗೆ ಆಚರಿಸುತ್ತಿದೆ.

ಸುದೀಪ್ ಅವನ್ನು ಒಳಗೊಂಡ ಪ್ರಚಾರಾಂದೋಲನ (ರಾಜಿ ಮಾಡ್ಕೋಬೇಡಿ, ಆರಿಸ್ಕೋಳಿ ಟಾಟಾ ಸ್ಕೈ)ದಿಂದಾಗಿ ಟಾಟಾ ಸ್ಕೈ ಎರಡು ವರ್ಷದ ಅವಧಿಯಲ್ಲಿಯೇ ಕರ್ನಾಟಕದಲ್ಲಿ ಮೊದಲ ಆಯ್ಕೆಯ ಡಿಟಿಎಚ್ ಬ್ರಾಂಡ್ ಆಗಿದೆ.

ಟಾಟಾ ಸ್ಕೈ ಪ್ರಸ್ತುತ 10,000ಕ್ಕೂ ಅಧಿಕ ವಿತರಕರನ್ನು ಹೊಂದಿದ್ದು, ಸ್ಥಳೀಯ ಶಾಪ್ ಗಳು ಸೇರಿದಂತೆ 25,000 ಅಧಿಕ ಪಟ್ಟಣಗಳು, ನಗರಗಳಲ್ಲಿ ಅಸ್ತಿತ್ವ ಹೊಂದಿದೆ. ಸಂಭ್ರಮಾಚರಣೆಯು ಬೆಂಗಳೂರಿನ ಜೆ.ಡಬ್ಲ್ಯೂ.ಮಾರಿಯೊಟ್ ನಲ್ಲಿ ನಡೆದಿದ್ದು, ನಂತರ ಟಾಟಾ ಸ್ಕೈ ವಿತರಕರ ಸಭೆಯು ಅದೇ ಸ್ಥಳದಲ್ಲಿ ನಡೆಯಿತು. ಬ್ರಾಂಡ್ ಪ್ರಗತಿಗೆ ನೀಡಿದ ನೆರವಿಗಾಗಿ ವಿತರಕರನ್ನು ಗೌರವಿಸಲಾಯಿತು.

ಟಾಟಾ ಸ್ಕೈನ ಚೀಫ್ ಸೇಲ್ಸ್ ಆಫೀಸರ್ ಸಲೀಪ್ ಶೇಖ್: ಕರ್ನಾಟಕದಲ್ಲಿ ದೊರೆತೆ ಅತೀವ ಪ್ರತಿಕ್ರಿಯೆಯಿಂದಾಗಿ ನಮಗೆ ಸಂತಸವಾಗಿದೆ. ಇದು, ಗ್ರಾಹಕರು ನಮ್ಮ ಸೇವೆಯ ಮೇಲೆ ಇಟ್ಟಿರುವ ವಿಶ್ವಾಸ ತೋರಿಸಲಿದೆ. ಕಳೆದ ನಾಲ್ಕು ತಿಂಗಳಲ್ಲಿ, ನನ್ನ 99 ಆರಂಭದ ನಂತರ ಸಾಕಷ್ಟು ಪ್ರಗತಿ ಕಂಡಿದ್ದು, ಗ್ರಾಮೀಣ ಮಾರುಕಟ್ಟೆಯಲ್ಲಿ ಶೇ 40 ಪ್ರಗತಿ ಕಂಡಿದೆ. ಜೊತೆಗೆ ನಗರ ಪ್ರದೇಶಗಳಲ್ಲಿಯೂ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ನನ್ನ 99 ಪ್ಯಾಕ್‌ನ ಆರಂಭ ಮತ್ತು ಸುದೀಪ್ ಅವರ ಸಹಭಾಗಿತ್ವದೊಂದಿಗೆ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ದೃಢಪಡಿಸಿಕೊಳ್ಳಲಾಗುತ್ತಿದೆ ಎಂದರು.

ಸೂಪರ್‌ಸ್ಟಾರ್ ಸುದೀಪ್ : 'ಟಾಟಾ ಸ್ಕೈ ಯಶಸ್ಸಿನಿಂದ ನನಗೆ ಸಂತಸವಾಗಿದೆ. ಇದು, ಮನರಂಜನೆಗೆ ಹೊಸ ವ್ಯಾಖ್ಯಾನ ಬರೆದ ಬ್ರಾಂಡ್ ಆಗಿದೆ.ಇದು, ತಾಂತ್ರಿಕವಾಗಿ ಎಂದಿಗೂ ಒಂದು ಹೆಜ್ಜೆ ಮುಂದಿದೆ. ನನಗೆ ಬ್ರಾಂಡ್ ಜೊತೆಗೆ ಕೈಜೋಡಿಸಲು ಸಂತಸವಾಗಿದೆ' ಎಂದರು.

ಎಚ್.ಡಿ ವಲಯದಲ್ಲಿ ಟಾಟಾ ಸ್ಕೈ ಈಗಾಗಲೇ ಪ್ರಮುಖ ಬ್ರಾಂಡ್ ಆಗಿದೆ. ಇದು, ಡಿಜಿಟಲ್ ವೇದಿಕೆಯು ಅನಲಾಗ್‌ಗಿಂದಲೂ ಕಡಿಮೆ ವೆಚ್ಚದ್ದು ಎಂಬುದನ್ನು ದೃಢಪಡಿಸಿದೆ. ಈಗ ನನ್ನ 99 ಮೂಲಕ ಗುಣಮಟ್ಟದ ಡಿಜಿಟಲ್ ಸೇವೆಯು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ದಿನ 24 ಗಂಟೆಗೆ ಗ್ರಾಹಕ ಸೇವೆಯು ಲಭ್ಯವಿದೆ.

ಬೆಂಗಳೂರು, ಮೈಸೂರು ಅಂಥ ಪ್ರಮುಖ ನಗರಗಳನ್ನು ಹೊರತುಪಡಿಸಿ ರಾಯಚೂರು, ಗುಲ್ಬರ್ಗ, ಬಳ್ಳಾರಿ, ದಾವಣಗೆರೆ, ಬಸವಕಲ್ಯಾಣ, ಮುದ್ದೇಬಿಹಾಳ, ಗದಗ, ಶೋರಾಪುರ, ಗದಗ, ರಾಮದುರ್ಗ, ಹುಕ್ಕೇರಿ, ಚಿಕ್ಕೋಡಿ ಮತ್ತು ಸಕಲೇಶಪುರ ಸೇರಿದಂತೆ ವಿವಿಧ ನಗರಗಳಲ್ಲಿಯೂ ಮಾರುಕಟ್ಟೆಯಲ್ಲಿ ಗಣನೀಯ ಪಾಲು ಹೊಂದಿದೆ.

ಟಾಟಾ ಸ್ಕೈ ಕುರಿತು: 2006ರಲ್ಲಿ ಆಋಂಭವಾದ ಟಾಟಾ ಸ್ಕೈ ಎಂಬುದು ಟಾಟಾ ಸಮೂಹ ಮತ್ತು ಟ್ವೆಂಟಿಫಸ್ಟ್ ಸೆಂಚುರಿ ಫಾಕ್ಸ್‌ನ ಜಂಟಿ ಉದ್ಯಮವಾಗಿದೆ. ಕಂಪನಿಯು ಅತ್ಯಾಧುನಿಕವಾದ ಡಿಜಿಟಲ್ ಮೂಸೌಕರ್ಯವನ್ನು ಹೊಂದಿದ್ದು, ಉನ್ನತ ಗುಣಮಟ್ಟದ ತಾಂತ್ರಿಕತೆಗಾಗಿ ಜಾಗತಿಕ ಕಂಪನಿಗಳ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಅಲ್ಲದೆ, ದಿನದ 24 ಗಂಟೆಗೆ ಸೇವೆ ಒದಗಿಸುವ ಕಾಲ್ ಸೆಂಟರ್, ಬಹುಭಾಷಾ ಗ್ರಾಹಕ ಸೇವಾ ಸೌಲಭ್ಯವನ್ನು ಹೊಂದಿದೆ.

ಟಾಟಾ ಸ್ಕೈ ಬ್ರಾಂಡ್ ಗಣನೀಯ ಮೈಲುಗಲ್ಲು ಸಾಧಿಸಿದ್ದು, ಇಟಿ ಬ್ರಾಂಡ್ ಈಕ್ವಿಟಿ 2012ರಲ್ಲಿ ನಂ. 1 ಡಿಟಿಎಚ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ಅಲ್ಲದೆ, ಡಿಟಿಎಚ್ ವರ್ಗಲ್ಲಿ ಟಾಟಾ ಸ್ಕೈ+ ಪ್ರಾಡಕ್ಟ್ ಆಫ್ ದ ಇಯರ್ ಎಂಬ ಹಿರಿಮೆ ಹೊಂದಿದೆ. ಕಂಪನಿಯು ಪ್ರಸ್ತುತ 36,000 ಪಟ್ಟಣಗಳಲ್ಲಿ ಅಸ್ತಿತ್ವ ಹೊಂದಿದ್ದು, 14.5 ಮಿಲಿಯನ್ ಗ್ರಾಹಕ ಸಂಪರ್ಕವನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata Sky, India’s leading Direct-To-Home (DTH) service provider in the country celebrated its success in Karnataka with Sandalwood superstar Sudeep.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more