ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1,550 ಕೋಟಿ ರೂಪಾಯಿ ಬ್ಯಾಂಕ್ ಸಾಲ ತೀರಿಸಿದ ಟಾಟಾ ಪವರ್ ಅಂಗಸಂಸ್ಥೆ CGPL

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಟಾಟಾ ಪವರ್‌ನ ಅಂಗಸಂಸ್ಥೆಯಾದ ಸಿಜಿಪಿಎಲ್, 1,550 ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಮರುಪಾವತಿಸಿದೆ ಎಂದು ಪ್ರಕಟಿಸಿದೆ. ಡಿಸೆಂಬರ್ 2ರಂದು ಕರಾವಳಿ ಗುಜರಾತ್ ವಿದ್ಯುತ್ ನಿಗಮ (ಸಿಜಿಪಿಎಲ್) ತನ್ನ ಕಂಪನಿ ಮೇಲಿದ್ದ ಸಾಲವನ್ನು ಮರುಪಾವತಿಸಿದೆ ಎಂದು ಮುಂಬೈ ಷೇರುಪೇಟೆ ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿದೆ.

'' ಈ ಮರುಪಾವತಿ ಜೊತೆಗೆ 2020 ಅಕ್ಟೋಬರ್‌ನಲ್ಲಿ 2,600 ಕೋಟಿ ಬ್ಯಾಂಕ್ ಸಾಲ ಹಿಂದಿರುಗಿಸಿದ್ದು, ಒಟ್ಟಾರೆಯಾಗಿ ಸಿಜಿಪಿಎಲ್ ಮೇಲಿನ 4,150 ಕೋಟಿ ಮೊತ್ತದ ಸಂಪೂರ್ಣ ಬ್ಯಾಂಕ್ ಸಾಲಗಳನ್ನು ಮರುಪಾವತಿಸಲಾಗಿದೆ. ಈ ಮರುಪಾವತಿಯ ನಂತರ, ಸಿಜಿಪಿಎಲ್‌ನ ದೀರ್ಘಕಾಲೀನ ಸಾಲವು ಬಾಂಡ್‌ಗಳು ಮತ್ತು ಡಿಬೆಂಚರ್‌ಗಳಿಂದ ಕೇವಲ, 3,790 ಕೋಟಿಗಳನ್ನು ಒಳಗೊಂಡಿದೆ "ಎಂದು ಅದು ಹೇಳಿದೆ.

ಟಾಟಾ ಮೋಟಾರ್ಸ್‌ನಿಂದ ವಿಶಿಷ್ಟ ಕ್ರಮ: ಸೇಫ್ಟಿ ಬಬಲ್ ಮೂಲಕ ಕಾರುಗಳ ವಿತರಣೆಟಾಟಾ ಮೋಟಾರ್ಸ್‌ನಿಂದ ವಿಶಿಷ್ಟ ಕ್ರಮ: ಸೇಫ್ಟಿ ಬಬಲ್ ಮೂಲಕ ಕಾರುಗಳ ವಿತರಣೆ

ಹೀಗೆ ದೊಡ್ಡ ಮಟ್ಟದಲ್ಲಿ ಸಾಲವನ್ನು ಮರುಪಾವತಿಸುವುದು ಕಂಪನಿಯ ಉದ್ದೇಶಕ್ಕೆ ಅನುಗುಣವಾಗಿದೆ. ಸಿಜಿಪಿಎಲ್‌ನ ಆವರ್ತಕ ಸಾಲ ಸೇವೆಯ ಜವಾಬ್ದಾರಿಗಳನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಅದರ ಕಾರ್ಯಾಚರಣೆಯನ್ನು ಹೆಚ್ಚು ಸ್ವಾವಲಂಬಿಯಾಗಿಸುತ್ತದೆ ಎಂದು ಫೈಲಿಂಗ್ ವೇಳೆ ತಿಳಿಸಿದೆ.

Tata Power Arm CGPL Repays Loans Worth Rs 1550 Crore

ಭಾರತದ ಅತ್ಯಂತ ಹಳೆಯ ವಿದ್ಯುತ್ ಶಕ್ತಿ ವಿತರಣಾ ಕಂಪನಿಯಾದ ಟಾಟಾ ಪವರ್‌, 2006ರಲ್ಲಿ ಸಿಜಿಪಿಎಲ್ ಅನ್ನು ಗುಜರಾತ್‌ನಲ್ಲಿ ಸ್ಥಾಪಿಸಿತು.

English summary
Costal Gujarat power ltd (CGPL) repaid the amount on december 2, tata power said in BSE filing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X