• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರತನ್ ಕನಸಿನ ಕಡಿಮೆ ಬಜೆಟ್ ಕಾರು 'ನ್ಯಾನೋ'ಗೆ 'ಟಾಟಾ' ಹೇಳುವ ಸಮಯ

|

ಬೆಂಗಳೂರು, ಅಕ್ಟೋಬರ್ 08: ಮಧ್ಯಮವರ್ಗದ ಜನರ ಕಾರು ಹೊಂದುವ ಕನಸನ್ನು ನನಸು ಮಾಡಿದ್ದ ಟಾಟಾ ಸಂಸ್ಥೆಯ 'ನ್ಯಾನೊ' ಕಾರು ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿದೆ. ರತನ್ ಟಾಟಾ ಅವರ ಕನಸಿನ ಕಡಿಮೆ ಬಜೆಟ್ ಕಾರು 'ನ್ಯಾನೋ ಕಾರು' ಉತ್ಪಾದನೆ ಮುಂದಿನ ವರ್ಷದಿಂದ ಬಂದ್ ಆಗಲಿದೆ. ಟಾಟಾ ಮೋಟರ್ಸ್ ಭಾರತ್ ಸ್ಟೇಜ್-ಆರು (ಬಿಎಸ್- VI) ಪರಿಸರದ ಗುಣಮಟ್ಟಗಳಿಗೆ ಅನುಗುಣವಾಗಿ ನವೀಕರಿಸುವ ಯೋಜನೆ ಹೊಂದಿಲ್ಲ. 2020ರ ವೇಳೆಗೆ ಸಣ್ಣ ಕಾರಿನ ಉತ್ಪಾದನೆ ರದ್ದಾಗಲಿದೆ ಎಂಬ ಸುದ್ದಿ ಬಂದಿದೆ.

ಕಾರಿನ ಮಾರಾಟದಲ್ಲಿ ಆದ ಕುಸಿತ, ಗ್ರಾಹಕರಿಂದ ಬೇಡಿಕೆ ಕೊರತೆ ಕಾರಣದಿಂದ ಟಾಟಾ ಸಂಸ್ಥೆಯು 'ನ್ಯಾನೊ' ಕಾರಿಗೆ 'ಟಾಟಾ' ಹೇಳಲು ಸಜ್ಜಾಗಿದೆ. ಬೇಡಿಕೆ ಕುಂಠಿತವಾಗಿರುವ ಕಾರಣ ನ್ಯಾನೊ ಕಾರು ಉತ್ಪಾದನೆಯನ್ನು ಕಂಪೆನಿ ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ. 2019ರಲ್ಲಿ ಒಂದು ಕಾರು ಉತ್ಪಾದಿಸಲಾಗಿದ್ದು, ಒಂದು ಕಾರು ಮಾತ್ರ ಮಾರಾಟವಾಗಿದೆ.

2009ರಲ್ಲಿ ಮಾರುಕಟ್ಟೆಗೆ ಬಂದ ಟಾಟಾ ನ್ಯಾನೋ ಪುಟ್ಟ ಕುಟುಂಬದ ನೆಚ್ಚಿನ ಕಾರು ಎನಿಸಿಕೊಂಡಿತ್ತು. ಕೈಗೆಟುಕುವ ದರ ಕೂಡಾ ಇತ್ತು. ಟಾಟಾ ನ್ಯಾನೋ ಬೇಸಿಕ್ ಮಾಡೆಲ್ ಬೆಲೆ 1 ಲಕ್ಷ ರೂಪಾಯಿಗಳ ಆಸುಪಾಸು ಇತ್ತು. ದೇಶದ ಪ್ರತಿಯೊಬ್ಬರು ಕಾರು ಹೊಂದಬೇಕೆಂಬ ಕನಸು ನನಸಾಗಬೇಕೆಂಬ ನಿಟ್ಟಿನಲ್ಲಿ ರತನ್ ಟಾಟಾ ತಂದ ಯೋಜನೆ ತಕ್ಕಮಟ್ಟಿನ ಯಶಸ್ವಿಯಾಗಿತ್ತು.

ರತನ್ ಕನಸಿನ ಕಡಿಮೆ ಬಜೆಟ್ ಕಾರು 'ನ್ಯಾನೋ'ಗೆ 'ಟಾಟಾ' ಅನೇಕ ತೊಂದರೆಗಳನ್ನು ಅನುಭವಿಸಿದರೂ, ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು. 2020 ರ ವೇಳೆಗೆ ಬಿಎಸ್- VI ಜಾರಿಗೆ ಬರಲಿದೆ. ಎಲ್ಲ ಕಾರುಗಳ ನವೀಕರಣ ಸಾಧ್ಯವಿಲ್ಲ. ಇದಕ್ಕೆ ಹೆಚ್ಚುವರಿ ಹೂಡಿಕೆ ಮಾಡಲು ಕಂಪನಿ ಬಯಸುವುದಿಲ್ಲ. ಈ ಪಟ್ಟಿಯಲ್ಲಿ ನ್ಯಾನೋ ಕೂಡ ಸೇರಿದೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಸಿಂಗೂರ್ ನಲ್ಲಿ ಉತ್ಪಾದನಾ ಘಟಕ ಆರಂಭಿಸಲು ಮುಂದಾದ ರೈತರು ತೀವ್ರ ಹೋರಾಟ ನಡೆಸಿದ್ದರು. ಬಳಿಕ ಈ ಘಟಕವನ್ನು ಗುಜರಾತಿನ ಸನಂದ್ ಗೆ ವರ್ಗಾಯಿಸಲಾಗಿತ್ತು. ಆ ಬಳಿಕ ಈ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡ ಕೆಲ ಪ್ರಕರಣಗಳು ನಡೆದಿದ್ದು, ಇದು ಕೂಡಾ ಖರೀದಿಗೆ ಜನ ಹಿಂದೇಟು ಹೊಡೆಯಲು ಕಾರಣವಾಗಿತ್ತು.

ಟಾಟಾ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ, ಆದರೆ ಕಂಪನಿ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 2018 ರ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಟಾಟಾ ಮೋಟರ್ಸ್ ಟಾಟಾ ನ್ಯಾನೋ 297 ಯೂನಿಟ್ ಗಳನ್ನು ಉತ್ಪಾದಿಸಿದ್ದು, ಆದರೆ ಪ್ರಸಕ್ತ ಸಾಲಿನ ಈ ಅವಧಿಯಲ್ಲಿ ಒಂದೇ ಒಂದು ಯೂನಿಟ್ ಉತ್ಪಾದನೆ ಮಾಡಿಲ್ಲವೆಂಬುದು ಗಮನಾರ್ಹ.

ಪೆಟ್ರೋಲ್ ನ್ಯಾನೋಪ್ರತಿ ಲೀಟರ್ ಗೆ 2.3ಕೆಜಿ ಕಾರ್ಬನ್ ಡೈ ಆಕ್ಸೈಡ್ ಹೊರಹಾಕುತ್ತದೆ. ಡೀಸೆಲ್ ಬಳಸುವ ನ್ಯಾನೋ ಪ್ರತಿ ಲೀಟರ್ ಗೆ 2.7ಕೆಜಿ ಕಾರ್ಬನ್ ಡೈ ಆಕ್ಸೈಡ್ ಹೊರಹಾಕುತ್ತದೆ. ನ್ಯಾನೋ ಪ್ರತಿ ಲೀಟರ್ ಗೆ 20 ಕಿ.ಮೀ ನೀಡಿದರೆ, ನ್ಯಾನೋ ಎರಡೂ ಸೇರಿ ಸುಮಾರು 1.3 ಲಕ್ಷ ರು ತಗುಲುತ್ತದೆ.

English summary
Tata Motors has not produced a single Nano car since the beginning of 2019. Before the implementation of BS IV(2020 April) tata motors to bid adieu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X