ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಝಿಕಾದೊಂದಿಗೆ ಠಾಕು ಠೀಕಿನ ಪಯಣ ಮಾಡಿ

|
Google Oneindia Kannada News

ಬೆಂಗಳೂರು, ಡಿಸೆಂಬರ್, 04: ಹೊಸ ವರ್ಷದ ಆರಂಭದಲ್ಲಿ ನಿಮ್ಮ ಕುಟುಂಬದ ಜತೆ ಹಾಗೇ ಒಂದು ಜಾಲಿ ರೈಡ್ ಹೋಗಿಬರಲು ಮನಸ್ಸಾಗುತ್ತಿದೆಯೇ? ಅದು ಹೊಸ ವಾಹನದಲ್ಲಿಯೇ ಕುಟುಂಬದವರನ್ನು ಕುಳ್ಳಿರಿಸಿಕೊಂಡು ಸುತ್ತುವ ಆಸೆಯೇ? ಹಾಗಾದರೆ ಟಾಟಾ ಮೋಟಾರ್ಸ್ ಅವರ ಝಿಕಾ ಬರಲಿದೆ ಕೊಂಚ ತಾಳಿ.

ಭಾರತದ ಪ್ರಮುಖ ನಗರಗಳ ವಾಹನ ಪ್ರಿಯರು ಒಂದೇ ಒಂದು ಕ್ಷಣಕ್ಕಾಗಿ ಹಾತೊರೆಯುತ್ತಿದ್ದಾರೆ. ಅದೇ ಟಾಟಾ ಮೋಟಾರ್ಸ್ ಅವರ ಝಿಕಾ ಆಗಮನವಾಗುವ ಕ್ಷಣ. ಅಷ್ಟಕ್ಕೂ ಹೊಸ ಟಾಟಾ ಝಿಕಾ ಹ್ಯಾಚ್ ಬ್ಯಾಕ್ ಕಾರಿನ ವಿಶೇಷಗಳು ಏನು ಎಂಬುದನ್ನು ತಿಳಿದುಕೊಳ್ಳದಿದ್ದರೇ ಆದೀತೆ?

tata

* ಬೆಂಗಳೂರು, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಏಕಕಾಲಕ್ಕೆ ಬಿಡುಗಡೆ.

* ಸಾಮಾಜಿಕ ಜಾಲತಾಣಗಳಲಲ್ಲೂ #Fantastico Hunt ಹೆಸರಿನಲ್ಲಿ ಆಕ್ಟಿವಿಟಿ ಆರಂಭವಾಗಿದೆ.

* ವಿನ್ಯಾಸ ಈಗಿರುವ ಟಾಟಾ ಮಾದರಿಗಿಂತಲೂ ವಿಭಿನ್ನವಾದ ಹೊಸ ವಿನ್ಯಾಸ ನೀತಿಯನ್ನು ಟಾಟಾ ಝಿಕಾ ಕಾರಿನಲ್ಲಿ ಅನುಸರಿಸಲಾಗಿದೆ. ಇದು ಗ್ರಾಹಕರಿಗೆ ತಾಜಾತನದ ಅನುಭವ ನೀಡಲಿದೆ.[ಟಾಟಾ ಝಿಕಾದ ವಿಶೇಷತೆಗಳೇನು?]

* ದಿಟ್ಟವಾದ ಫ್ರಂಟ್ ಗ್ರಿಲ್, ಆಕರ್ಷಕ್ ಹೆಡ್ ಲೈಟ್ ವಿನ್ಯಾಸ, ಬದಿಯಲ್ಲಿ ಸ್ವಭಾವ ರೇಖೆ, ಕಪ್ಪುವ ವರ್ಣದ ಬಿ ಪಿಲ್ಲರ್, ರಿಯರ್ ಸ್ಪಾಯ್ಲರ್ ಹಾಗ ರಿಯರ್ ಬಂಪರ್ ಸೇರಿದಂತೆ ಒಟ್ಟಾರೆ ವಿನ್ಯಾಸವು ಪ್ರಭಾವಿ ಎನಿಸಿಕೊಂಡಿದೆ.

tata

* ಎಂಜಿನ್ ಮತ್ತು ಗೇರ್ ಬಾಕ್ಸ್ ನೂತನ ಟಾಟಾ ಝಿಕಾ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

* 1199 ಸಿಸಿ ಪೆಟ್ರೋಲ್ ಎಂಜಿನ್ 114 ಎನ್‌ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿ ಉತ್ಪಾದಿಸಲಿದೆ. ಅದೇ ರೀತಿ 1047 ಸಿಸಿ ಡೀಸೆಲ್ ಎಂಜಿನ್ 69 ಅಶ್ವಶಕ್ತಿ ಉತ್ಪಾದಿಸಲಿದೆ. ಇವೆರಡು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.
* ಮೈಲೇಜ್ ಇಂಧನ ಕ್ಷಮತೆಯ ಬಗ್ಗೆ ಸಂಸ್ಥೆಯಿಂದ ಮಾಹಿತಿಗಳೇನು ಬಂದಿಲ್ಲ. ಹಾಗಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 20 ಹಾಗೂ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.[ಲೆಜೆಂಡ್ ಮೆಸ್ಸಿ ಈಗ ಟಾಟಾ ಮೋಟರ್ಸ್ ರಾಯಭಾರಿ]
* ಟಾಟಾದ ಜನಪ್ರಿಯ ಬೋಲ್ಟ್ ಕೆಳಗಡೆ ಗುರುತಿಸಿಕೊಳ್ಳಲಿರುವ ಟಾಟಾ ಝಿಕಾ ಒಂದೇ ಸಮಯದಲ್ಲಿ ಎಂಟ್ರಿ ಲೆವೆಲ್ ಗ್ರಾಹಕರನ್ನು ಆಕರ್ಷಿಸಲಿದೆ. ಕ್ಯಾಬಿನ್‌ನೊಳಗೆ ಬಾಟಲಿ, ಕಪ್ ಹೋಲ್ಡರ್ ಸೇರಿದಂತೆ ಒಟ್ಟಾರೆ 22 ಸ್ಟೋರೆಜ್ ಜಾಗವು ಸಿಗಲಿದೆ.

tata

* ಮನರಂಜನೆ ಬೋಲ್ಟ್ ಕಾರಿನಲ್ಲಿರುವುದಕ್ಕೆ ಸಮಾನವಾದ ಹರ್ಮಾನ್ ಸಿಸ್ಟಂ, ನೇವಿಗೇಷನ್, ಸ್ಮಾರ್ಟ್ ಫೋನ್ ಸಂಪರ್ಕ, ಬ್ಲೂಟೂತ್ ಮುಂತಾದ ವ್ಯವಸ್ಥೆಗಳು ಇದರಲ್ಲಿರಲಿದೆ.

* ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ 8 ಸ್ಪೀಕರ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್, ಕೂಲ್ಡ್ ಗ್ಲೋವ್ ಬಾಕ್ಸ್, ಮಡಚಬಹುದಾದ ಕೀ ಮತ್ತು ರೂಫ್ ಆಂಟೆನಾ.

* ಸಾಮಾಜಿಕ ತಾಣ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಅಭಿಮಾನಿಗಳು, ವಾಹನ ಪ್ರಿಯರು ತಮ್ಮ ನೆಚ್ಚಿನ ವಾಹನ ಬಿಡುಗಡೆ ಕುರಿತ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಅಭಿಯಾನದ ಫಲಿತಾಂಶ ನೋಡಿ
#Fantastico 150 ಮಿಲಿಯನ್ ಇಂಪ್ರೆಶನ್
45,469 ಉಲ್ಲೇಖಗಳು
ಟ್ವಟ್ಟರ್ ಹ್ಯಾಂಡಲ್ ಗೆ 117 ಮಿಲಿಯನ್ ಇಂಪ್ರೆಶನ್

English summary
Fans across 4 cities reveal the name of the next big thing by Tata Motors in a massive online and on-ground clue hunt. A massive national digital campaign with on ground legs in 4 cities (Mumbai, Delhi, Bengaluru and Kolkata). Themed as "The #Fantastico Hunt" to share a glimpse of the car's communication thought of "It's #Fantastico!"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X