ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ 98 ಪೇಟೆಂಟ್ ಪಡೆದುಕೊಂಡ ಟಾಟಾ ಮೋಟಾರ್ಸ್

|
Google Oneindia Kannada News

ನವದೆಹಲಿ, ಜನವರಿ 20: ದೇಶದ ಅಗ್ರಮಾನ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ ಎಂಜಿನಿಯರಿಂಗ್ ಉತ್ಕೃಷ್ಟತೆ ಮತ್ತು ನಾವೀನ್ಯತೆಗಾಗಿ 2020ರಲ್ಲಿ ಒಟ್ಟು 98 ಪೇಟೆಂಟ್‌ಗಳನ್ನು ಪಡೆದುಕೊಂಡಿದೆ ಎಂದು ಮಂಗಳವಾರ ತಿಳಿಸಿದೆ.

ಈ ಪೇಟೆಂಟ್‌ಗಳು ಪ್ರಧಾನವಾಗಿ ಸಿಇಎಸ್ಎಸ್ (ಸಂಪರ್ಕಿತ, ವಿದ್ಯುದ್ದೀಕೃತ, ಸುಸ್ಥಿರ ಮತ್ತು ಸುರಕ್ಷಿತ) ವಾಹನಗಳ ಮೆಗಾಟ್ರೆಂಡ್‌ಗೆ ಸಂಬಂಧಿಸಿವೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಬಿಗ್‌ ಬಾಸ್ಕೆಟ್‌ನಲ್ಲಿ ದೊಡ್ಡ ಹೂಡಿಕೆ ಮಾಡಲಿರುವ ಟಾಟಾ ಗ್ರೂಪ್ಬಿಗ್‌ ಬಾಸ್ಕೆಟ್‌ನಲ್ಲಿ ದೊಡ್ಡ ಹೂಡಿಕೆ ಮಾಡಲಿರುವ ಟಾಟಾ ಗ್ರೂಪ್

ಟಾಟಾ ಮೋಟಾರ್ಸ್ ಪಡೆದಿರುವ 98 ಪೇಟೆಂಟ್‌ಗಳಲ್ಲಿ ಆಟೋಮೋಟಿವ್ ಎಲೆಕ್ಟ್ರಾನಿಕ್ಸ್, ಶಬ್ದ ಕಂಪನ , ಸಾಂಪ್ರದಾಯಿಕ ಮತ್ತು ಸುಧಾರಿತ ಪವರ್‌ಟ್ರೇನ್ ವ್ಯವಸ್ಥೆಗಳು ಮತ್ತು ಕೈಗಾರಿಕಾ ವಿನ್ಯಾಸಗಳು, ವಿವಿಧ ವರ್ಗಗಳ ಅಡಿಯಲ್ಲಿ ಅಪಘಾತ ಸುರಕ್ಷತೆಯ ಸುಧಾರಣೆಗಳ ಕುರಿತಾದ ಪೇಟೆಂಟ್‌ಗಳು ಒಳಗೊಂಡಿವೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

Tata Motors Received 98 Patents In 2020

ಕಂಪನಿಯು "2020 ರಲ್ಲಿ 98 ಪೇಟೆಂಟ್‌ಗಳನ್ನು ಪಡೆಯುವ ಮೂಲಕ ಎಂಜಿನಿಯರಿಂಗ್ ಶ್ರೇಷ್ಠತೆ ಮತ್ತು ನಾವೀನ್ಯತೆಗಾಗಿ ತನ್ನ ಚಾಲನೆಯನ್ನು ವೇಗಗೊಳಿಸಿದೆ" ಎಂದು ಅದು ಹೇಳಿದೆ.

"ಟಾಟಾ ಮೋಟಾರ್ಸ್‌ನಲ್ಲಿ, ಉದ್ಯಮದ ಮಾನದಂಡಗಳಾಗಿ ಬೆಳೆಯುವ ಆವಿಷ್ಕಾರಗಳನ್ನು ಪರಿಚಯಿಸುವ ಶ್ರೀಮಂತ ಇತಿಹಾಸ ನಮ್ಮಲ್ಲಿದೆ. ನಮ್ಮ ಪ್ರತಿಭಾವಂತ ತಂಡವನ್ನು ಹೊಸದಾಗಿ ಯೋಚಿಸಲು ನಾವು ಪ್ರೋತ್ಸಾಹಿಸುತ್ತೇವೆ " ಎಂದು ಟಾಟಾ ಮೋಟಾರ್ಸ್ ಮುಖ್ಯ ತಂತ್ರಜ್ಞಾನ ಅಧಿಕಾರಿ ರಾಜೇಂದ್ರ ಪೆಟ್ಕರ್ ಹೇಳಿದರು.

ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ವಾಹನ ತಯಾರಿಕಾ ಮಟ್ಟವನ್ನು ಉನ್ನತೀಕರಣಕ್ಕೆ ಟಾಟಾ ಮೋಟಾರ್ಸ್ ಪ್ರಾಮುಖ್ಯತೆಯನ್ನು ನೀಡಿದೆ.

English summary
Auto Major on Tuesday said it has received 98 patents last year under its accelerated drive for engineering excellence and innovation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X