ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಮೋಟಾರ್ಸ್ ಜಾಗತಿಕ ವೋಲ್‌ಸೇಲ್ ಮಾರಾಟ ಶೇ. 16ರಷ್ಟು ಇಳಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 06: ಜಾಗ್ವಾರ್ ಲ್ಯಾಂಡ್ ರೋವರ್ ಸೇರಿದಂತೆ ತನ್ನ ಗುಂಪಿನ ಜಾಗತಿಕ ವೋಲ್‌ಸೇಲ್ ಮಾರಾಟವು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ. 16ರಷ್ಟು 2,02,873 ಕ್ಕೆ ತಲುಪಿದೆ ಎಂದು ಮಂಗಳವಾರ ಟಾಟಾ ಮೋಟಾರ್ಸ್ ಹೇಳಿದೆ.

ಪ್ರಯಾಣಿಕರ ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಅದರ ವಾಣಿಜ್ಯ ವಾಹನಗಳ ಮಾರಾಟ ಮತ್ತು ಡೇವೂ ಶ್ರೇಣಿಯ ಮಾರಾಟವು ಶೇ. 29ರಷ್ಟು (56,614 ವಾಹನಗಳು) ಹೆಚ್ಚಾಗಿದೆ. ಇದು ಹಿಂದಿನ ಎರಡನೇ ತ್ರೈಮಾಸಿಕದಲ್ಲಿ ಶೇ. 9ರಷ್ಟು (1,46,259 ಯುನಿಟ್) ಕುಸಿದಿದೆ.

ಟಾಟಾ ಮೋಟಾರ್ಸ್ ವಾಹನಗಳ ಮಾರಾಟದಲ್ಲಿ ಏರಿಕೆ: ಆಗಸ್ಟ್‌ನಲ್ಲಿ ಶೇ. 13.38ರಷ್ಟು ಹೆಚ್ಚಳಟಾಟಾ ಮೋಟಾರ್ಸ್ ವಾಹನಗಳ ಮಾರಾಟದಲ್ಲಿ ಏರಿಕೆ: ಆಗಸ್ಟ್‌ನಲ್ಲಿ ಶೇ. 13.38ರಷ್ಟು ಹೆಚ್ಚಳ

ಹಣಕಾಸು ವರ್ಷ 2020-21 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್‌ನ ಜಾಗತಿಕ ವೋಲ್‌ಸೇಲ್ ಮಾರಾಟ 91,367 ವಾಹನಗಳಾಗಿವೆ. ತ್ರೈಮಾಸಿಕದಲ್ಲಿ ಜಾಗ್ವಾರ್ ಸಗಟು 18,189 ವಾಹನಗಳಾಗಿದ್ದರೆ, ತ್ರೈಮಾಸಿಕದಲ್ಲಿ ಲ್ಯಾಂಡ್ ರೋವರ್ ವೋಲ್‌ಸೇಲ್ 73,178 ವಾಹನಗಳಾಗಿವೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

Tata Motors Global Wholesale Decline 16 Percent In July To September

ಇದರ ನಡುವೆ ಕಳೆದ ಆಗಸ್ಟ್‌ನಲ್ಲಿ 36,472 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಶೇಕಡಾ 13.38ರಷ್ಟು ಹೆಚ್ಚಳವನ್ನು ಇತ್ತೀಚೆಗೆ ವಾಹನಗಳ ಮಾರಾಟದಲ್ಲಿ ವರದಿ ಮಾಡಿದೆ.

English summary
Tata Motors on Tuesday said its group global wholesales, including Jaguar Land Rover, declined by 16% to 2,02,873 units in the second quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X