ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ಖರೀದಿಗೆ ಮುಂದಾದ ಟಾಟಾ ಸಮೂಹ

|
Google Oneindia Kannada News

ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣ ಖಾಸಗಿ ಅಥವಾ 100% ಖಾಸಗಿಗೆ ಒಪ್ಪಿಸುವ ಬಗ್ಗೆ ಸರಕಾರ ನಿರ್ಧಾರ ಮಾಡಲಿದೆ ನಾಗರಿಕ ವಿಮಾನ ಯಾನ ಖಾತೆ ರಾಜ್ಯ ಸಚಿವ ಹರ್ ದೀಪ್ ಸಿಂಗ್ ಪುರಿ ಘೋಷಿಸಿದ್ದು ನೆನಪಿರಬಹುದು. ಸಾಲದ ಭಾರಕ್ಕೆ ಕುಸಿಯುತ್ತಿರುವ ಉಕ್ಕಿನ ಹಕ್ಕಿಯ ಹೊಣೆಯನ್ನು ಹೊತ್ತುಕೊಳ್ಳಲು ಅನೇಕ ಸಂಸ್ಥೆಗಳು ಮುಂದೆ ಬಂದಿವೆ. ಈ ಪೈಕಿ ಏರ್ ಇಂಡಿಯಾವನ್ನು ಖರೀದಿಸಲು ಟಾಟಾ ಸಮೂಹ ಸಂಸ್ಥೆ ಮುಂದಾಗಿರುವ ಸುದ್ದಿ ಪ್ರಮುಖವಾಗಿದೆ.

1953ರ ಬಳಿಕ ಮತ್ತೊಮ್ಮೆ ಏರ್ ಇಂಡಿಯಾದ ಮೇಲೆ ಟಾಟಾ ಸಂಸ್ಥೆ ತನ್ನ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಟಾಟಾ ವಿಸ್ತಾರದ ಭಾಗವಾಗಿ ಏರ್ ಇಂಡಿಯಾ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚಿಸಲಾಗಿದೆ

ಆದರೆ, "ವಿಸ್ತಾರ, ಏರ್ ಏಷ್ಯಾ ಜೊತೆಗೆ ಮತ್ತೊಂದು ವಿಮಾನಯಾನ ಸಂಸ್ಥೆ ನಡೆಸಲು ಇಚ್ಛೆಯಿಲ್ಲ. ಹಾಲಿ ಚಾಲ್ತಿಯಲ್ಲ್ರುವ ಸಂಸ್ಥೆ ಜೊತೆ ವಿಲೀನವಾದರೆ ಯಾವುದೇ ತೊಂದರೆಯಿಲ್ಲ" ಎಂದು ಟಾಟಾಸನ್ಸ್ ಸಮೂಹದ ಚೇರ್ಮನ್ ಎನ್ ಚಂದ್ರಶೇಖರ್ ಹೇಳಿದ್ದಾರೆ.

 60,000 ಕೋಟಿ ರುಪಾಯಿಗೂ ಅಧಿಕ ಸಾಲದ ಹೊರೆ

60,000 ಕೋಟಿ ರುಪಾಯಿಗೂ ಅಧಿಕ ಸಾಲದ ಹೊರೆ

ಸುಮಾರು 60,000 ಕೋಟಿ ರುಪಾಯಿಗೂ ಅಧಿಕ ಸಾಲದ ಹೊರೆ ಹೊತ್ತುಕೊಂಡಿರುವ ಏರ್ ಇಂಡಿಯಾ ಪುನಶ್ಚೇತನಕ್ಕಾಗಿ ಸರ್ಕಾರ ಇನ್ನಿಲ್ಲದ್ದಂತೆ ಯತ್ನಿಸಿ ಸೋತಿದೆ. ತನ್ನ ಪಾಲಿನ ಶೇಕಡಾ 76ರಷ್ಟು ಷೇರು ಮಾರಾಟಕ್ಕಿಟ್ಟರೂ ಖರೀದಿದಾರರು ಇಲ್ಲದ್ದಂತಾಗಿದೆ. ಏರ್ ಇಂಡಿಯಾ ಬದಲಿಗೆ ಜೆಟ್ ಏರ್ ಲೈನ್ಸ್ ಖರೀದಿಯತ್ತ ಟಾಟಾ ಸಮೂಹ ಸಂಸ್ಥೆ ಹೆಚ್ಚಿನ ಆಸಕ್ತಿ ವಹಿಸಿತ್ತು. ಆದರೆ ಈಗ ಟಾಟಾ ಸನ್ಸ್ ಚೇರ್ಮನ್ ಎನ್ ಚಂದ್ರಶೇಖರನ್ ಅವರು ಏರ್ ಇಂಡಿಯಾ ಖರೀದಿ ಪ್ರಕ್ರಿಯೆ ಬಗ್ಗೆ ಸುಳಿವು ನೀಡಿದ್ದಾರೆ.

ಖರೀದಿ ಮೊತ್ತದ ಪ್ರಥಮ ಪಾವತಿ ಎಷ್ಟು?

ಖರೀದಿ ಮೊತ್ತದ ಪ್ರಥಮ ಪಾವತಿ ಎಷ್ಟು?

ಈಗ ಏರ್ ಇಂಡಿಯಾ ಎಕ್ಸ್ ಪ್ರೆಸ್ ಲಿಮೆಟೆಡ್ 50% ಹಾಗೂ ಏರ್ ಇಂಡಿಯಾ SATS ಏರ್ ಪೋರ್ಟ್ ಸರ್ವೀಸ್ ಪ್ರೈ ಲಿ ಮತ್ತು ಏರ್ ಏಷ್ಯಾ ಇಂಡಿಯಾ ವಿಲೀನ ಎಲ್ಲವನ್ನು ಟಾಟಾ ತೆಕ್ಕೆಗೆ ನೀಡಬೇಕಾಗುತ್ತದೆ. 60 ಸಾವಿರ ಸಾಲ ಹೊರೆ ಇರುವ ವಿಮಾನಯಾನ ಸಂಸ್ಥೆ ಖರೀದಿಸುವ ಸಂಸ್ಥೆ 23, 286.5 ಕೋಟಿ ರು ಪಾವತಿಸಿ ಹಕ್ಕು ಪಡೆದುಕೊಳ್ಳಬಹುದು. ಮಿಕ್ಕ ಮೊತ್ತವನ್ನು ಏರ್ ಇಂಡಿಯಾ ಆಸ್ತಿ ಹೋಲ್ಡಿಂಗ್ ಲಿಮಿಟೆಡ್(AIAHL)ಗೆ ವರ್ಗಾವಣೆಯಾಗಲಿದೆ.

 ಜೆಆರ್ ಡಿ ಟಾಟಾ ಅವರ ಕನಸಿನ ಉಕ್ಕಿನ ಹಕ್ಕಿ

ಜೆಆರ್ ಡಿ ಟಾಟಾ ಅವರ ಕನಸಿನ ಉಕ್ಕಿನ ಹಕ್ಕಿ

1932ರಲ್ಲಿ ಜೆಆರ್ ಡಿ ಟಾಟಾ ಅವರು ಟಾಟಾ ಏರ್ ಲೈನ್ಸ್ ಆರಂಭಿಸಿದರು. ಕರಾಚಿಯಿಂದ ಬಾಂಬೆಗೆ ಮೊದಲ ವಿಮಾನಯಾನಕ್ಕೆ ಟಾಟಾ ಪೈಲಟ್ ಆಗಿದ್ದರು. ವಿಮಾನ ಸಂಸ್ಥೆ ಟಾಟಾ ಅವರ ಕನಸಾಗಿತ್ತು. 1948ರಲ್ಲಿ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (ಎಐಟಿಎ) ಸ್ಥಾಪಿಸಿದರು. 1978ರ ತನಕ ಏರ್ ಇಂಡಿಯಾದ ಏಳಿಗೆಗೆ ಶ್ರಮಿಸಿದ್ದರು. ಆದರೆ, ಟಾಟಾ ಕಟ್ಟಿ ಬೆಳೆಸಿದ ಸಂಸ್ಥೆ ರಾಜಕೀಯ ತಂತ್ರಕ್ಕೆ ಕೈ ತಪ್ಪಿತು. ದೇಶಕ್ಕಾಗಿ ಟಾಟಾ ಅವರು ತ್ಯಾಗಕ್ಕೆ ಸಿದ್ಧವಾಗಬೇಕಾಯಿತು.

ಸರ್ಕಾರಿ ಸ್ವಾಮ್ಯದ ಸಂಸ್ಥೆ ಎಂದು ಘೋಷಣೆ

ಸರ್ಕಾರಿ ಸ್ವಾಮ್ಯದ ಸಂಸ್ಥೆ ಎಂದು ಘೋಷಣೆ

1953ರಲ್ಲಿ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಏರ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಘೋಷಿಸಲು ಮುಂದಾದಾಗ ಟಾಟಾಗೆ ನಿಜಕ್ಕೂ ಆಘಾತವಾಗಿತ್ತು. ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಟಾಟಾ ಅವರನ್ನು ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆಯುವಂತೆ ನೆಹರೂ ಒಪ್ಪಿಸಿದರು. 1977ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟಾಟಾ ಅವರನ್ನು ಸಂಸ್ಥೆ ಚೇರ್ಮನ್ ಸ್ಥಾನದಿಂದ ಕೆಳಗಿಸಿದರು. 1946ರಲ್ಲಿ ಟಾಟಾ ಏರ್ ಲೈನ್ಸ್ ಸಾರ್ವಜನಿಕ ಸಂಸ್ಥೆಯಾಗಿ ನಂತರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಆಗಿದ್ದು ಈಗ ಇತಿಹಾಸ.

ಸಂಸ್ಥೆಯ ನಷ್ಟ, ಮಾರುಕಟ್ಟೆ ಮೌಲ್ಯ

ಸಂಸ್ಥೆಯ ನಷ್ಟ, ಮಾರುಕಟ್ಟೆ ಮೌಲ್ಯ

2017-18ರಲ್ಲಿ 5,799 ಕೋಟಿ ರು ನಷ್ಟ ಅನುಭವಿಸಿದೆ. ಇಂದಿಗೆ ಏರ್ ಇಂಡಿಯಾ ಸಂಸ್ಥೆ ಮೇಲೆ 58,000 ಕೋಟಿ ರು ಸಾಲವಿತ್ತು. 2019ರ ಮಾರ್ಚ್ 31ಕ್ಕೆ ಈ ಪ್ರಮಾಣ 60, 074ಕೊಟಿರು ಗೇರಿದೆ. ಮಾರುಕಟ್ಟೆ ಮೌಲ್ಯ ಲೆಕ್ಕ ಹಾಕುವಾಗ ಕಡಿಮೆ ಹಾಗೂ ದೀರ್ಘಾವಧಿ ಸಾಲದ ಮೊತ್ತ ಕೂಡಾ ಸೇರಿಸಿಕೊಳ್ಳಬೇಕಾಗುತ್ತದೆ.

ಇಂಧನ ಬಾಕಿ ಮೊತ್ತ ಪಾವತಿಸದ ಕಾರಣ, ಏರ್ ಇಂಡಿಯಾ ವಿಮಾನಗಳಿಗೆ ತೈಲ ಪೂರೈಕೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಸ್ಥಗಿತಗೊಳಿಸಿತ್ತು. 6 ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ಕಂಡಿರಲಿಲ್ಲ. ಬೇರೆ ದೇಶಿ ವಿಮಾನಯಾನ ಸಂಸ್ಥೆಗೆ ಹೋಲಿಸಿದರೆ, ವಿಮಾನ ರದ್ದು (2.6%), ಸರಿಯಾದ ಸಮಯಕ್ಕೆ ಕಾರ್ಯಕ್ಷಮತೆ (53.5%), ಏರ್ ಲೈನ್ ಲೋಡ್ ಫ್ಯಾಕ್ಟರ್ 80.9% ನಷ್ಟು ಹಿಂದೆ ಉಳಿದಿದೆ.

English summary
Tata Group is believed to have submitted an expression of interest for the beleaguered national carrier Air India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X