• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದರ್ಜೆಯ ಸಾಫ್ಟ್ ವೇರ್ ಪ್ರತಿಭೆಗಳಿಗೆ ಟಾಟಾ ಕೇಂದ್ರ ವೇದಿಕೆ

|

ಬೆಂಗಳೂರು, ಅ.8: ಜಾಗತಿಕ ಇಂಜಿನಿಯರಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ಡಿಜಿಟಲ್ ಸೇವಾ ಕಂಪನಿ ಟಾಟಾ ಟೆಕ್ನಾಲಜೀಸ್ ಮತ್ತು ಡ್ರೈವ್‍ಲೈನ್ ಸಿಸ್ಟಮ್ & ಅತ್ಯಾಧುನಿಕ ಇ-ಪವರ್‍ಟ್ರೇನ್ ಟೆಕ್ನಾಲಜಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಕೆಎನ್ ಆಟೊಮೋಟಿವ್, ಅತ್ಯಾಧುನಿಕ, ಜಾಗತಿಕ ಇ-ಸಂಚಾರ ಸಾಫ್ಟ್ ವೇರ್ ಇಂಜಿನಿಯರಿಂಗ್ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಿವೆ.

ಈ ಹೊಸ ಕೇಂದ್ರವು ಟಾಟಾ ಟೆಕ್ನಾಲಜಿಯ ಎಲೆಕ್ಟ್ರಿಕ್ ಹಾಗೂ ಎಂಬೇಡೆಡ್ ಸಿಸ್ಟಮ್‍ಗಳ ಪರಿಣತಿ ಮತ್ತು ಜಿಕೆಎನ್ ಆಟೊಮೋಟಿವ್‍ನ ಮುಂದಿನ ಪೀಳಿಗೆಯ ಇ-ಡ್ರೈವ್ ತಂತ್ರಜ್ಞಾನಗಳತ್ತ ಕೆಲಸ ಮಾಡಲು ಭಾರತದ ಸಾಫ್ಟ್ ವೇರ್ ಇಂಜಿನಿಯರಿಂಗ್ ಪ್ರತಿಭೆಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಬಳಸಿಕೊಂಡು. ಭವಿಷ್ಯದ ಸುಸ್ಥಿರ ಇ-ಸಂಚಾರ ವ್ಯವಸ್ಥೆಯನ್ನು ಮರುರೂಪಿಸಲಿದೆ.

ರತನ್ ಟಾಟಾಗೆ ಸಲಹೆ ನೀಡುವ ಆಪ್ತ ಸಹಾಯಕ ಶಾಂತನು ನಾಯ್ದು ಯಾರು?

12650 ಚದರ ಅಡಿ ವಿಸ್ತೀರ್ಣದ ಈ ಕೇಂದ್ರವು ಡಿಸೈನ್ ಸ್ಟುಡಿಯೊ, ಲ್ಯಾಬ್ ಸ್ಟೇಷನ್, ಮೀಟಿಂಗ್ ಮತ್ತು ಸಮ್ಮೇಳನ ಸಭಾಂಗಣ, ಸುಕ್ಷೇಮ ಕೇಂದ್ರವನ್ನು ಒಳಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಅಸಾಧಾರಣ ಸವಾಲುಗಳು ಎದುರಾಗಿರುವ ಹೊರತಾಗಿಯೂ, ಈ ಕೇಂದ್ರದ ರೂಪುರೇಷೆಯಿಂದ ಹಿಡಿದು ನಿರ್ಮಾಣದವರೆಗೆ ಎಲ್ಲ ಕಾಮಗಾರಿಗಳನ್ನು ಕೇವಲ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಇದು ಹಂತಹಂತವಾಗಿ ಆರಂಭವಾಗಲಿದ್ದು, ಟಾಟಾ ಟೆಕ್ನಾಲಜೀಸ್‍ನ ಎಲ್ಲ ಕೇಂದ್ರಗಳಂತೆ ಕಟ್ಟುನಿಟ್ಟಾಗಿ ನೈರ್ಮಲ್ಯ, ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರ ಕಾಪಾಡುವ ನಿಯಮಗಳನ್ನು ಅನುಸರಿಸಲಾಗುತ್ತದೆ.

2020ರ ಕೊನೆಯ ಒಳಗಾಗಿ 100ಕ್ಕೂ ಹೆಚ್ಚು ವಿಶ್ವದರ್ಜೆಯ ಸಾಫ್ಟ್ ವೇರ್ ಇಂಜಿನಿಯರ್ ಮತ್ತು ಬೆಂಬಲ ಸಿಬ್ಬಂದಿಯ ತಂಡವನ್ನು ರೂಪಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟೆಕ್ನಾಲಜೀಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ವಾರ್ರನ್ ಹ್ಯಾರೀಸ್, "ಎಂಜಿನಿಯರಿಂಗ್ ಎ ಬೆಟರ್ ವಲ್ರ್ಡ್' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಟಾಟಾ ಟೆಕ್ನಾಲಜೀಸ್, ಜಾಗತಿಕ ಓಇಎಂಗಳು ಮತ್ತು ಒಂದನೇ ಸ್ತರದ ಉತ್ಪಾದಕರಿಗೆ ತನ್ನ ಉತ್ಪನ್ನ ವಿನ್ಯಾಸ ಮತ್ತು ಎಂಜಿನಿಯರಿಂಗ್ ಸಾಮರ್ಥ್ಯದ ಮೂಲಕ ಉತ್ಪನ್ನ ಉತ್ಪನ್ನಗಳ ಉತ್ಪಾದನೆಗೆ ಸಶಕ್ತಗೊಳಿಸಲಿದೆ. ಜಿಕೆಎನ್ ಆಟೊಮೋಟಿವ್ ಜತೆಗಿನ ಸಹಭಾಗಿತ್ವದಿಂದಾಗಿ, ಸುಸ್ಥಿರ ಹಾಗೂ ಹಸಿರು ವಿಶ್ವವನ್ನು ಸಾಧಿಸಲು ನೆರವಾಗುವ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲು ಗಣನೀಯ ಕೊಡುಗೆ ನೀಡಲು ಸಾಧ್ಯವಾಗಲಿದೆ" ಎಂದು ಬಣ್ಣಿಸಿದರು.

ಕೊವಿಡ್ 19 ಸಂಕಷ್ಟದಲ್ಲೂ ಸಿಬ್ಬಂದಿಗೆ 235.54 ಕೋಟಿ ಬೋನಸ್!

   Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

   ಜಿಕೆಎನ್ ಆಟೊಮೋಟಿವ್‍ನ ಸಿಇಓ ಲಿಯಾಮ್ ಬಟರ್‍ವರ್ಥ್, "ಇದು ಜಿಕೆಎನ್ ಆಟೊಮೋಟಿವ್ ಪಾಲಿಗೆ ಅತ್ಯಂತ ಮಹತ್ವದ ಉಪಕ್ರಮವಾಗಿದೆ. ಟಾಟಾ ಟೆಕ್ನಾಲಜೀಸ್ ಜತೆಗಿನ ಸಹಭಾಗಿತ್ವವು ನಮಗೆ ಭಾರತದಲ್ಲಿರುವ ವಿಶ್ವದರ್ಜೆಯ ಸಾಫ್ಟ್ ವೇರ್ ಎಂಜಿನಿಯರಿಂಗ್ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ಟಾಟಾ ಟೆಕ್ನಾಲಜೀಸ್‍ನ ಉತ್ಪನ್ನ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮಹತ್ವದ ಹೆಜ್ಜೆ ಎನಿಸಲಿದೆ. ನಮ್ಮ ಇ-ಚಾಲನೆ ತಂತ್ರಜ್ಞಾನ ಹೀಗಾಗಲೇ ನಮ್ಮನ್ನು ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೆ ತಂದು ನಿಲ್ಲಿಸಿದ್ದು, ಈ ಉಪಕ್ರಮವು ನಮ್ಮ ಮತ್ತಷ್ಟು ಬೆಳವಣಿಗೆ ಮತ್ತು ವಿಸ್ತರಣೆಗೆ ಕಾರಣವಾಗಲಿದೆ ಹಾಗೂ ನಮ್ಮ ತಂತ್ರಜ್ಞಾನ ಸಾಮಥ್ರ್ಯವನ್ನು ಸುಧಾರಿಸಿಕೊಳ್ಳಲೂ ನೆರವಾಗಲಿದೆ" ಎಂದರು.

   English summary
   Tata Technologies, a global engineering and product development digital services company, and GKN Automotive, a global leader in driveline systems and advanced ePowertrain technologies, today announced the opening of an advanced, global e-mobility software engineering centre in Bengaluru, India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X