• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುನೀತ್ ರಣ ವಿಕ್ರಮ ಜೊತೆ ಜಾಲ ಬೆಸೆದ ಟಾಟಾ ಡೊಕೊಮೊ

By Mahesh
|

ಬೆಂಗಳೂರು,ಏ.8: ಟಾಟಾ ಟೆಲಿಸರ್ವೀಸಸ್ ಲಿಮಿಟೆಡ್ ನ ಏಕೀಕೃತ ದೂರಸಂಪರ್ಕ ಬ್ರ್ಯಾಂಡ್ ಟಾಟಾ ಡೊಕೊಮೊ, ಪುನಿತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಣವಿಕ್ರಮ ಪ್ರಚಾರಕ್ಕೆ ಮುಂದಾಗಿದೆ.

ಪವನ್ ಒಡೆಯರ್ ನಿರ್ದೇಶನದ ಹಾಗೂ ಜಯಣ್ಣ-ಬೋಗೇಂದ್ರ ನಿರ್ಮಾಣದಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರ ಏಪ್ರಿಲ್ 10, 2015ರಿಂದ ಕರ್ನಾಟಕದ ಸಿನಿ ರಸಿಕರನ್ನು ರಂಜಿಸಲು ಸಿದ್ಧವಾಗಿದೆ. ಸಿನಿಮಾ ಪಾಲುದಾರಿಕೆಯು ಟಾಟಾ ಡೊಕೊಮೊಗೆ ಏಕಮಾತ್ರವಾಗಿದೆ ಹಾಗೂ ಕರ್ನಾಟಕದಲ್ಲಿ ಟಾಟಾ ಡೊಕೊಮೊ ಹಾಗೂ ಪುನೀತ್ ರಾಜ್ ಕುಮಾರ್ ಎಂಬ ಎರಡು ಬ್ರ್ಯಾಂಡ್ ಗಳ ಆಕರ್ಷಣೆ ಮತ್ತು ಪ್ರಾಬಲ್ಯವನ್ನು ಸೂಚಿಸುತ್ತದೆ.['ರಣವಿಕ್ರಮ'ನಿಗೆ ಸವಾಲಾದ ಸನ್ ಆಫ್ ಸತ್ಯಮೂರ್ತಿ]

ಟಾಟಾ ಡೊಕೊಮೊ ಹಾಗೂ ಪುನಿತ್ ಇಬ್ಬರೂ ಯುವಕರ ಬ್ರ್ಯಾಂಡ್ ಆಗಿದ್ದು, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ನೈಜ ಮೌಲ್ಯಗಳಿಗೆ ಜನಪ್ರಿಯರು. ಈ ಪಾಲುದಾರಿಕೆಯೊಂದಿಗೆ, ಟಾಟಾ ಡೊಕೊಮೊ ಕರ್ನಾಟಕದಾದ್ಯಂತ ಬೆಂಗಳೂರು ಹಾಗೂ ಕರ್ನಾಟಕದ ಉಳಿದ ಭಾಗಗಳಲ್ಲಿ ಟಿವಿ, ರೇಡಿಯೋ, ಔಟ್ ಡೋರ್ ಗಳು ಮತ್ತು 50,000 ಔಟ್ ಲೆಟ್ ಗಳಲ್ಲಿ ರೀಟೇಲ್ ಟಚ್ ಪಾಯಿಂಟ್ ಗಳಂಥ ನಾನಾ ಬಗೆಯ ಮಾಧ್ಯಮಗಳಲ್ಲಿ ಈ ಚಲನಚಿತ್ರವನ್ನು ಸಹ-ಪ್ರಚಾರ ಮಾಡಲು ಏಕಮಾತ್ರ (ಎಕ್ ಕ್ಲೂಸಿವ್) ಹಕ್ಕನ್ನು ಪಡೆದುಕೊಂಡಿದೆ.

ಆಯ್ದ ಟಾಟಾ ಡೊಕೊಮೊ ಗ್ರಾಹಕರಿಗೆ ವಿಶೇಷವಾಗಿ ಮೀಟ್ ಅಂಡ್ ಗ್ರೀಟ್ ಅವಕಾಶವನ್ನು ಸಹ ನೀಡಲಾಗುತ್ತದೆ. ಸಹ-ಪ್ರಚಾರದ ವೇಳೆ, ಟಾಟಾ ಡೊಕೊಮೊ ಪ್ರಸ್ತುತ ಕರ್ನಾಟಕದಲ್ಲಿ 10,000ಕ್ಕೂ ಅಧಿಕ ಟವರ್ ಗಳೊಂದಿಗೆ ತನ್ನ ಶ್ರೇಷ್ಠ ನೆಟ್‍ವರ್ಕ್ ಸಾಮರ್ಥವನ್ನು ಹಾಗೂ ರೂ. 175ಕ್ಕೆ 1G 3G ಡೇಟಾದಂಥ ಮೌಲ್ಯಯುತ ಕೊಡುಗೆಗಳ ಪ್ರಚಾರವನ್ನೂ ಸಹ ಮಾಡಲಿದೆ.

ಮೊಬಿಲಿಟಿ ವಹಿವಾಟು ಘಟಕದ ಮುಖ್ಯಸ್ಥ ಅಶೋಕ್ ಘೋಷ್: "ಪುನಿತ್ ರಾಜ್ ಕುಮಾರ್ ನಾಯಕನಾಗಿ ನಟಿಸಿರುವ ರಣವಿಕ್ರಮ ಸಿನಿಮಾದೊಂದಿಗೆ ಸಹಭಾಗಿತ್ವದಿಂದ ನಿಜಕ್ಕೂ ನಾವು ಉತ್ಸಾಹಗೊಂಡಿದ್ದೇವೆ.

ಅದಲ್ಲದೇ ಕರ್ನಾಟಕದಲ್ಲಿ ಪುನೀತ್ ರಾಜ್ ಕುಮಾರ್ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ಹಾಗೂ ಅವರು ಅತಿ ಅನುಭವಿ, ವಿಭಿನ್ನ ಮತ್ತು ಪ್ರತಿಭಾನ್ವಿತ ನಟರಾಗಿದ್ದಾರೆ. ಅವರ ಆಕರ್ಷಣೆ ಹಾಗೂ ಜನರ ಮನ ಮುಟ್ಟುವ ಅಂಶಗಳು, ಗ್ರಾಹಕರಿಗೆ ತಡೆರಹಿತ ಮತ್ತು ಮನಸೆಳೆಯುವ ಅನುಭವವನ್ನು ಒದಗಿಸುತ್ತಿರುವ ನಮ್ಮ ಬ್ರ್ಯಾಂಡ್ ಗಳಿಗೆ ಸಹ ಸೂಕ್ತವಾಗಿದೆ."

ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ: ಟಾಟಾ ಡೊಕೊಮೊದಂಥ ಪ್ರಬಲ ಬ್ರ್ಯಾಂಡ್ ನೊಂದಿಗೆ ಕೈಜೋಡಿಸಲು ಹೆಮ್ಮೆಯಾಗುತ್ತಿದೆ. ‘ಸಂವಹನ ಪಾಲುದಾರರಾಗಿ' ಟಾಟಾ ಡೊಕೊಮೊ ನಮ್ಮ ಪ್ರಚಾರ ವ್ಯಾಪ್ತಿಯನ್ನು ಹೆಚ್ಚಿಸಲು ಸಹಕರಿಸಿದೆ ಮತ್ತು ಕರ್ನಾಟಕದಾದ್ಯಂತ ಟಿವಿ, ರೇಡಿಯೋ, ಔಟ್ ಡೋರ್ ಮತ್ತು ರೀಟೇಲ್ ಔಟ್ ಲೆಟ್ ಗಳು ಮುಂತಾದ ವಿವಿಧ ಬಗೆಯ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಂಡಿದೆ.

ಟಾಟಾ ಡೊಕೊಮೊ ಈ ರೀತಿ ಕನ್ನಡ ಚಲನಚಿತ್ರಗಳೊಂದಿಗೆ ಪಾಲುದಾರರಾಗುತ್ತಿರುವುದು ಹಾಗೂ ಕರ್ನಾಟಕದಲ್ಲಿ ಪ್ರಬಲ ಸಂಪರ್ಕವನ್ನು ಹೊಂದುತ್ತಿರುವುದು ನಮಗೆ ಹರ್ಷ ತಂದಿದೆ."

ಟಾಟಾ ಡೊಕೊಮೊ : ಕಳೆದ ಕೆಲವು ತಿಂಗಳಿನಲ್ಲಿ ತನ್ನ ನೆಟ್‍ವರ್ಕ್ ಸಾಮಥ್ರ್ಯವನ್ನು 10,000ಕ್ಕೂ ಅಧಿಕ ಟವರ್ ಗಳಿಗೆ ಹಾಗೂ ರೀಟೇಲ್ ಔಟ್ ಲೆಟ್ ಗಳನ್ನು 50,000ಕ್ಕೂ ಅಧಿಕವಾಗಿ ವಿಸ್ತರಿಸುವ ಮೂಲಕ ಕರ್ನಾಟಕದಲ್ಲಿ ತನ್ನ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಜೊತೆಗೆ ಕಂಪನಿ ತಾಂತ್ರಿಕವಾಗಿ ಉತ್ಕೃಷ್ಟತೆ ಹೊಂದಿರುವ ತನ್ನದೇ ಆದ 84 ರೀಟೇಲ್ ಮಳಿಗೆಗಳನ್ನು ರಾಜ್ಯದ ಪ್ರಮುಖ ನಗರಗಳಲ್ಲಿ ಹೊಂದಿದೆ.

ಈ ಒಟ್ಟಾರೆ ವಿಸ್ತರಣೆಯು ಟಾಟಾ ಡೊಕೊಮೊ ತನ್ನ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಗ್ರಾಹಕರು ಒಳನಾಡಿನಲ್ಲಾಗಲಿ ಅಥವಾ ರೋಮಿಂಗ್ ನಲ್ಲಾಗಲಿ ತಡೆರಹಿತ, ಉತ್ಕೃಷ್ಟ ಹಾಗೂ ಮೌಲ್ಯಯುತ ಧ್ವನಿ ಮತ್ತು 3ಜಿ ಡೇಟಾ ಸೇವೆಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಬಲಗೊಳಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata DOCOMO has partnered with ‘Rana Vikrama’ producers Jayanna and Bhogendra for the much awaited film, ‘Rana Vikrama’ starring Puneeth Rajkumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more