ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ತಲುಪಿದ ಟಿಸಿಎಸ್: ಈ ಮೈಲಿಗಲ್ಲು ತಲುಪಿದ ದೇಶದ ಎರಡನೇ ಸಂಸ್ಥೆ

|
Google Oneindia Kannada News

ದೇಶದ ಬಹುದೊಡ್ಡ ಐಟಿ ಸಂಸ್ಥೆಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸೋಮವಾರ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ನಂತರ 9 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ದಾಟಿದ ಎರಡನೇ ಭಾರತೀಯ ಕಂಪನಿಯಾಗಿದೆ.

ಮುಂಬೈ ಮೂಲದ ಐಟಿ ದಿಗ್ಗಜ ಸಂಸ್ಥೆ ಟಿಸಿಎಸ್‌ ಷೇರುಗಳು ಶೇಕಡಾ 3 ಕ್ಕಿಂತ ಹೆಚ್ಚಾಗಿದ್ದು, ಹೊಸ 52 ವಾರಗಳ ಗರಿಷ್ಠ 2,454.45 ರೂ. ತಲುಪಿದೆ.

 40,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಟಿಸಿಎಸ್ 40,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಟಿಸಿಎಸ್

ಬರೆಯುವ ಸಮಯದಲ್ಲಿ, ಟಿಸಿಎಸ್ ಶೇ. 2.79 ರಷ್ಟು (72.15 ಪಾಯಿಂಟ್ ಹೆಚ್ಚಾಗಿದೆ) 2,440 ರೂ.ಗೆ ವಹಿವಾಟು ನಡೆಸುತ್ತಿದೆ ಮತ್ತು ಅದರ ಮಾರುಕಟ್ಟೆ ಬಂಡವಾಳೀಕರಣವು 9,17,870.82 ಕೋಟಿ ರೂ. ತಲುಪಿದೆ.

Tata Consultancy Services becomes second Indian firm to hit market cap of Rs 9 lakh crore

ವರದಿಗಳ ಪ್ರಕಾರ, ಟಿಸಿಎಸ್ ಷೇರು ಮಾರುಕಟ್ಟೆಯಲ್ಲಿ ಉತ್ತಮ ಸಾಧನೆ ತೋರುತ್ತಿದ್ದರೂ, ಇದು ಕಳೆದ ವಾರದಲ್ಲಿ ಬಿಎಸ್ಇ ಸೆನ್ಸೆಕ್ಸ್ ಅನ್ನು ಮೀರಿಸಿದೆ. ಬಿಎಸ್‌ಇಗೆ ಹೋಲಿಸಿದರೆ ಕಳೆದ ವಾರ ಟಿಸಿಎಸ್ ಷೇರು ಶೇ. 4ರಷ್ಟು ಏರಿಕೆಯಾಗಿತ್ತು.

ಮಾರುಕಟ್ಟೆ ಬಂಡವಾಳೀಕರಣವು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯ ಮೌಲ್ಯವಾಗಿದೆ ಮತ್ತು ಪ್ರಸ್ತುತ ಷೇರುಗಳ ಬೆಲೆಯಿಂದ ಒಟ್ಟು ಷೇರುಗಳ ಸಂಖ್ಯೆಯನ್ನು ಗುಣಿಸಿ ಲೆಕ್ಕಹಾಕಲಾಗುತ್ತದೆ.

ಇತ್ತೀಚೆಗಷ್ಟೇ ರಿಲಯನ್ಸ್‌ ಇಂಡಸ್ಟ್ರೀಸ್ ಷೇರುಗಳು ಹೊಸ ಗರಿಷ್ಠ ಮಟ್ಟಕ್ಕೆ ಏರಿದ ಕೆಲವು ದಿನಗಳ ನಂತರ ಟಿಸಿಎಸ್‌ ಈ ಹಂತ ತಲುಪಿದೆ. ರಿಲಯನ್ಸ್‌ ಇಂಡಸ್ಟ್ರೀಸ್ 200 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳವನ್ನು ಮುಟ್ಟಿದ ಮೊದಲ ಭಾರತೀಯ ಕಂಪನಿಯಾಗಿದೆ.

English summary
IT major Tata Consultancy Services became the second Indian company after Reliance Industries to cross market capitalisation of Rs 9 lakh crore on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X