ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾರ್ ಬಕ್ಸ್ ಕೈ ಹಿಡಿದರೂ ಮೇಲಕ್ಕೇರದ ಟಾಟಾ ಕಾಫಿ!

By Mahesh
|
Google Oneindia Kannada News

ಬೆಂಗಳೂರು, ಜುಲೈ 21: ವಿಶ್ವಪ್ರಸಿದ್ಧ ಕಾಫಿ ಮಳಿಗೆ ಕಂಪನಿ ಸ್ಟಾರ್ ಬಕ್ಸ್ ಕೈ ಹಿಡಿದರೂ ಟಾಟಾ ಕಾಫಿ ತನ್ನ ಪರಿಮಳವನ್ನು ಹೆಚ್ಚಿಸಿಕೊಳ್ಳುವಲ್ಲಿ ವಿಫಲವಾಗಿದೆ. ಟಾಟಾ ಕಾಫಿ ಸಂಸ್ಥೆ ತನ್ನ ಮೊದಲ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭದಲ್ಲಿ ಶೇ 16ರಷ್ಟು ಇಳಿಮುಖ ಕಂಡು ಕಂಗಾಲಾಗಿದೆ.

ಜೂ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭದಲ್ಲಿ ಶೇ 16ರಷ್ಟು ಇಳಿಮುಖ ಕಂಡ್ದು 25.4 ಕೋಟಿ ರು ಮಾತ್ರ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 30.31 ಕೋಟಿ ರು ಗಳಿಸಿತ್ತು. [ಶಂಕರ್ ಕಾರ್ಟೂನಿಸ್ಟ್ ಮತ್ತು ಸೊಗಸಾದ ಕಾಫಿ ಪರಿಮಳ]

ಏಪ್ರಿಲ್- ಜೂನ್ ಅವಧಿಯಲ್ಲಿ ಒಟ್ಟಾರೆ ಆದಾಯ 396.04 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆದಾಯ 374.52 ಕೋಟಿ ರು ನಷ್ಟಿತ್ತು. [ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ]

ಇನ್ಸ್ಟಾ ಕಾಫಿ ಕ್ಷೇತ್ರದಲ್ಲಿ ವಿಶ್ವದಲ್ಲೇ 3ನೇ ಸ್ಥಾನ ಹಾಗೂ ಏಷ್ಯಾದ ಅತಿ ವಿಸ್ತೃತ ಜಾಲ ಹೊಂದಿರುವ ಟಾಟಾ ಗ್ಲೋಬಲ್ ಬೆವರೆಜಸ್ಸ್ ನ ಟಾಟಾ ಕಾಫಿ ಸಹಜವಾಗಿ ಈ ಫಲಿತಾಂಶದಿಂದ ಆತಂಕಕ್ಕೊಳಗಾಗಿದೆ.

Tata Coffee Q1 net profit falls

ದಕ್ಷಿಣ ಭಾರತದ ಸುಮಾರು 19 ಎಸ್ಟೇಟುಗಳಲ್ಲಿ ಅರೇಬಿಕಾ ಹಾಗೂ ರೊಬಸ್ಟಾ ಕಾಫಿಗಳನ್ನು 10,000 ಟನ್ ಗಳ ಲೆಕ್ಕದಲ್ಲಿ ಉತ್ಪಾದಿಸುವ ಟಾಟಾ ಕಾಫಿ ಈಗ ಕೆಫೆ ಕಾಫಿಡೇ ಜೊತೆ ತೀವ್ರ ಸೆಣಸಾಟ ನಡೆಸಬೇಕಿದೆ. [ಬೆಂಗಳೂರಿನ ಇನ್ನೆರಡು ಕಡೆ ಸ್ಟಾರ್ ಬಕ್ಸ್ ಕಾಫಿ ಪರಿಮಳ]

ಟಾಟಾ ಮೈತ್ರಿ ಕೂಟದಲ್ಲಿ ಸ್ಟಾರ್ ಬಕ್ಸ್ ಸೇರಿದ ಮೇಲೆ 2012ರಲ್ಲಿ ಸುಮಾರು 30 ರಿಂದ 50 ಮಳಿಗೆಗಳನ್ನು ಮೊದಲ ಹಂತದಲ್ಲಿ ಆರಂಭಿಸಿತ್ತು. ಸ್ಟಾರ್ ಬಕ್ಸ್ ಜತೆ 50:50 ರ ಅನುಪಾತದ ಒಪ್ಪಂದದ ಜೊತೆಗೆ ತನ್ನ ಟೀ ಉತ್ಪನ್ನ 'ಟಾಟಾ ಟಾಜೊ' ಕ್ಕೆ ಕೂಡಾ ಪ್ರಚಾರ ನೀಡಲು ಟಾಟಾ ಸಂಸ್ಥೆ ಬಯಸಿತ್ತು.

ರೀಟೈಲ್ ಮಾರುಕಟ್ಟೆಯಲ್ಲಿ ಅನೇಕ ಬದಲಾವಣೆಗಳು ಕಾಣುತ್ತಿರುವ ಸಂದರ್ಭದಲ್ಲಿ ರೀಟೈಲ್ ಜಗತ್ತಿನ ಆಳ ಕಂಡಿರುವ ಸ್ಟಾರ್ ಬಕ್ಸ್ ಪ್ರವೇಶ ಟಾಟಾ ಸಂಸ್ಥೆಗೆ ಲಾಭದಾಯಕವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

ಸ್ಟಾರ್ ಬಕ್ಸ್ ಬಗ್ಗೆ : ವಾಷಿಂಗ್ಟನ್ ನ ಸಿಯಾಟಲ್ ಮೂಲದ ಸ್ಟಾರ್ ಬಕ್ಸ್ ಕಾರ್ಪೋರೇಷನ್ ಸಂಸ್ಥೆ ಅಂತಾರಾಷ್ಟ್ರೀಯ ಕಾಫಿ ಕಂಪನಿಯಾಗಿದೆ. ವಿಶ್ವದ ಅತ್ಯಂತ ವಿಸ್ತಾರವಾದ ಕಾಫಿ ಶಾಪ್ ಜಾಲ ಹೊಂದಿರುವ ಸಂಸ್ಥೆ ಇದಾಗಿದ್ದು 62ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 19,000ಕ್ಕೂ ಅಧಿಕ ಕಾಫಿ ಶಾಪ್ ಜಗತ್ತಿನೆಲ್ಲೆಡೆ ಇದೆ. 1922ರಲ್ಲಿ ಸ್ಥಾಪಿತವಾದ ಈ ಕಂಪನಿ ಬಗ್ಗೆ ಹೆಚ್ಚಿನ ಮಾಹಿತಿಗೆ ಸ್ಟಾರ್ ಬಕ್ಸ್ ವೆಬ್ ಸೈಟ್ ನೋಡಿ. (ಒನ್ ಇಂಡಿಯಾ ಸುದ್ದಿ)

English summary
Tata Coffee reported about 16 per cent decline in consolidated net profit at Rs 25.4 crore for the first quarter ended June 30, due to higher expenses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X