ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರೋ ಇಂಡಿಯಾ: ಕ್ಷಿಪಣಿ ಬಿಡಿಭಾಗ ಉತ್ಪಾದನೆಗೆ ಟಾಟಾ ರೇತಿಯಾನ್ ಡೀಲ್

ಸೇನೆಯ ಸ್ಟ್ರಿಂಗರ್ ಕ್ಷಿಪಣಿಗಳ ಬಿಡಿಭಾಗಗಳ ಉತ್ಪಾದನೆ ಸಂಬಂಧ ದೇಶದ ಪ್ರಮುಖ ಕಂಪನಿಯಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಅಮೆರಿಕಾ ಮೂಲದ ರೇತಿಯಾನ್ ಕಂಪನಿ ಜತೆ ಇಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 17: ಸೇನೆಯ ಸ್ಟ್ರಿಂಗರ್ ಕ್ಷಿಪಣಿಗಳ ಬಿಡಿಭಾಗಗಳ ಉತ್ಪಾದನೆ ಸಂಬಂಧ ದೇಶದ ಪ್ರಮುಖ ಕಂಪನಿಯಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಅಮೆರಿಕಾ ಮೂಲದ ರೇತಿಯಾನ್ ಕಂಪನಿ ಜತೆ ಇಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರೇತಿಯಾನ್ ಲ್ಯಾಂಡ್ ವಾರ್‍ಫೇರ್ ಸಿಸ್ಟಮ್ಸ್‍ನ ಉಪಾಧ್ಯಕ್ಷ ಡುವಾನೆ ಗೂಡೆನ್ ಅವರು, "ಭಾರತದ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ನಾಯಕನ ಸ್ಥಾನದಲ್ಲಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜತೆ ನಾವು ಒಪ್ಪಂದ ಮಾಡಿಕೊಂಡಿರುವುದರಿಂದ ನಮಗೆ ಅಂದರೆ, ಅಮೆರಿಕಾಕ್ಕೆ ಹೆಚ್ಚು ಅವಕಾಶಗಳು ಮತ್ತು ಬಲ ಬಂದಂತಾಗಿದೆ. ಈ ಎರಡೂ ಕಂಪನಿಗಳ ಸಹಭಾಗಿತ್ವ ನಮ್ಮ ಗುರಿಗಳನ್ನು ತಲುಪಲು ಸಹಕಾರಿಯಾಗುತ್ತದೆ'' ಎಂದು ಅಭಿಪ್ರಾಯಪಟ್ಟರು.[ಏರೋ ಇಂಡಿಯಾದಲ್ಲಿ ಟಾಟಾ ಸಮೂಹದ 8 ಶಕ್ತಿ ಪ್ರದರ್ಶನ]

Tata Advanced Systems Ltd, Raytheon to co-produce Stinger missile components in India

ಈ ಒಪ್ಪಂದದ ಹಿನ್ನೆಲೆಯಲ್ಲಿ ಟಿಎಎಸ್ ಎಲ್ ಭಾರತದಲ್ಲಿ ಸ್ಟಿಂಗರ್ ಕ್ಷಿಪಣಿಗೆ ಅಗತ್ಯವಾದ ಬಿಡಿಭಾಗಗಳನ್ನು ತಯಾರಿಸಲಿದೆ. ಈ ಸ್ಟಿಂಗರ್ ಕ್ಷಿಪಣಿ ಭೂಮಿಯಿಂದ-ಆಕಾಶಕ್ಕೆ, ಆಕಾಶದಿಂದ ಆಕಾಶಕ್ಕೆ ಚಿಮ್ಮಿ ಎದುರಾಳಿ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮಥ್ರ್ಯ ಹೊಂದಿದೆ ಕ್ಷಿಪಣಿಯಾಗಿದೆ.[ಏರೋ ಇಂಡಿಯಾಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಸೇವೆ]

ಈ ಸಂದರ್ಭದಲ್ಲಿ ಮಾತನಾಡಿದ ಟಿಎಎಸ್ ಎಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಕರಣ್ ಸಿಂಗ್ ಅವರು, "ಈ ಒಪ್ಪಂದದಿಂದಾಗಿ ರೇತಿಯಾನ್ ಕಂಪನಿ ಮತ್ತು ಟಿಎಎಸ್ ಎಲ್ ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಈ ಮೂಲಕ ಭಾರತೀಯ ಸ್ಟಿಂಗರ್ ಕ್ಷಿಪಣಿಗಳಿಗೆ ಬಿಡಿಭಾಗಗಳನ್ನು ಪೂರೈಸುವ ಪ್ರಮುಖ ಕಂಪನಿಯಾಗುವ ಗುರಿ ಇಟ್ಟುಕೊಂಡಿದ್ದೇವೆ'' ಎಂದರು.[6 ವರ್ಷಗಳ ಬಳಿಕ ಏರೋ ಇಂಡಿಯಾನಲ್ಲಿ ಸೂರ್ಯ ಕಿರಣ್ ಚಮತ್ಕಾರ]

Tata Advanced Systems Ltd, Raytheon to co-produce Stinger missile components in India

"ಕ್ಷಿಪಣಿ ತಯಾರಿಕೆ ಮತ್ತು ತಂತ್ರಜ್ಞಾನ ಒದಗಿಸುವ ವಿಚಾರದಲ್ಲಿ ನಾವು ವ್ಯಾವಹಾರಿಕ ಸಂಬಂಧವನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದ್ದು, ಈ ಮೂಲಕ ಸರ್ಕಾರದ ಮೇಕ್ ಇನ್ ಇಂಡಿಯಾ' ಉದ್ದೇಶಗಳನ್ನು ಈಡೇರಿಸುವ ಸಂಕಲ್ಪ ಮಾಡಿದ್ದೇವೆ. ಮೌಲ್ಯವರ್ಧನೆ, ಉದ್ಯೋಗ ಸೃಷ್ಟಿ ಮತ್ತು ಪ್ರಮುಖ ತಂತ್ರಜ್ಞಾನಗಳ ಕಡೆ ಹೆಚ್ಚು ಗಮನಹರಿಸಲಿದ್ದೇವೆ'' ಎಂದು ಸಿಂಗ್ ತಿಳಿಸಿದರು.

2016 ರಲ್ಲಿ ಸ್ಟಿಂಗರ್ ಕ್ಷಿಪಣಿಗಳ ಆರ್ಡರ್ ನೀಡಿದ 3 ಗ್ರಾಹಕ ದೇಶಗಳ ಪೈಕಿ ಭಾರತವೂ ಒಂದಾಗಿದೆ. ಭಾರತ ತನ್ನ ಎಎಚ್-64 ಅಪಾಚೆ ಹೆಲಿಕಾಪ್ಟರ್ ಗಳನ್ನು ಸಿದ್ಧಪಡಿಸಿದ್ದು, ಸದ್ಯದಲ್ಲೇ ಭಾರತೀಯ ವಾಯುಸೇನೆಗೆ ಸೇರ್ಪಡೆ ಮಾಡಲಿದೆ.

English summary
Tata Advanced Systems Ltd on Friday announced the signing of a memorandum of understanding (MoU) with Raytheon Company to engage in the co-production of Stinger air defense missile components.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X