• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಬೈಲ್ ಆಪ್ ಗಳಿಂದ ಖಾಸಗಿ ವಿಷಯ ಬಹಿರಂಗ ಭೀತಿ

By Mahesh
|

ಬೆಂಗಳೂರು, ಜೂನ್ 28, 2016: ಸೈಮಾಂಟೆಕ್ ನ ನಾರ್ಟನ್ ಸಂಸ್ಥೆ ಭಾರತದಲ್ಲಿ ನಡೆಸಿದ ಮೊಬೈಲ್ ಸುರಕ್ಷತೆ ಸಮೀಕ್ಷೆಯ ವಿವರವನ್ನು ಬಿಡುಗಡೆ ಮಾಡಲಾಗಿದೆ. ಉಚಿತ ಮೊಬೈಲ್ ಅಪ್ಲಿಕೇಷನ್ ಗಳಿಗೆ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚುವ ಮೂಲಕ ಗ್ರಾಹಕರು, ಪ್ರೈವೆಸಿ ರಿಸ್ಕ್ ನ ಜಾಲದೊಳಕ್ಕೆ ಬೀಳುತ್ತಿದ್ದಾರೆ ಎಂಬ ಅಂಶ ಈ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

ನಾರ್ಟನ್ ಅಧ್ಯಯನವು ಕಂಡುಕೊಂಡ ಪ್ರಕಾರ, ಮೂವರು ಭಾರತೀಯರ ಪೈಕಿ ಇಬ್ಬರು (ಶೇಕಡಾ 65) ಪಿಸಿ(ಪರ್ಸನಲ್ ಕಂಪ್ಯೂಟರ್) ಗಿಂತ ಹೆಚ್ಚಾಗಿ ತಮ್ಮ ಮೊಬೈಲ್ಸ್ ಗಳ ಮೂಲಕವೇ ಇಂಟರ್ನೆಟ್ ಸೇವೆ ಪಡೆಯುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಇಂಟರ್ನೆಟ್ ಸೇವೆ ಪಡೆಯಲು ಬಳಸುವ ಮೊದಲ ಮತ್ತು ಏಕೈಕ ಸಾಧನವೆಂದರೆ ಸ್ಮಾರ್ಟ್ ಫೋನ್. [ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?]

ದಿನಕ್ಕೆ ಸರಾಸರಿ 41 ಬಾರಿಯಾದರೂ ಫೋನ್ ಅನ್ನು ವೀಕ್ಷಿಸುತ್ತೇವೆ ಎಂದಿದ್ದಾರೆ. ಕರೆ ಮಾಡುವುದು ಸ್ಮಾರ್ಟ್ ಫೋನಿನ ಪ್ರಾಥಮಿಕ ಬಳಕೆಯ ಉದ್ದೇಶವಾಗಿ ಮುಂದುವರಿದರೆ, ಇಂಟರ್ನೆಟ್ ಬ್ರೌಸಿಂಗ್ ಗಾಗಿ ಅಪ್ಲಿಕೇಷನ್ ಗಳು, ಸಂವಹನ ಮತ್ತು ಸಾಮಾಜಿಕ ಜಾಲತಾಣಗಳು ಕೂಡ ಬಳಕೆಯಲ್ಲಿ ಮುಖ್ಯ ಪಾತ್ರ ವಹಿಸಿವೆ.

ನಾರ್ಟನ್ ಮೊಬೈಲ್ ಸಮೀಕ್ಷೆ ಹೇಳುವ ಪ್ರಕಾರ, 2014ಕ್ಕೆ ಹೋಲಿಸಿದರೆ ವೈರಸ್, ಮಾಲ್ ವೇರ್ ಗಳ ಸಂಖ್ಯೆ ಶೇ.230ರಷ್ಟು ಹೆಚ್ಚಿದೆ.

ಭಾರತೀಯ ಮೊಬೈಲ್ ಬಳಕೆದಾರರು ಅತಿ ಹೆಚ್ಚು ಕಳವಳ ಪಡುತ್ತಿರುವ ಭದ್ರತಾ ವಿಚಾರವೆಂದರೆ, ವೈರಸ್/ಮಾಲ್ವೇರ್ ದಾಳಿಗಳು (ಶೇಕಡಾ 34). ನಂತರ ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆ ವಿವರಗಳ (ಶೇಕಡಾ 21) ದುರ್ಬಳಕೆಯ ಭೀತಿ ಮತ್ತು ವೈಯಕ್ತಿಕ ಮಾಹಿತಿಗಳ ಹ್ಯಾಕಿಂಗ್ ಅಥವಾ ಸೋರಿಕೆ (ಶೇಕಡಾ 19).[ಸೈನಿಕರಿಗೆ ತಂತ್ರಜ್ಞಾನ ಪಾಠ ಕಲಿಸುವ ಸಿಂಪ್ಲಿಲರ್ನ್.ಕಾಂ]

ಇದೇ ವೇಳೆ, ಮೊಬೈಲ್ ಸಾಧನಗಳಲ್ಲಿನ ಮಾಲ್ವೇರ್, ಹ್ಯಾಕಿಂಗ್ ಮತ್ತು ದತ್ತಾಂಶ ದುರ್ಬಳಕೆ, ಸೈಬರ್ ಸ್ಟಾಕಿಂಗ್ ಇತ್ಯಾದಿ ಭದ್ರತಾ ಸಮಸ್ಯೆಗಳು ಡೆಸ್ಕ್‍ಟಾಪ್/ಲ್ಯಾಪ್‍ಟಾಪ್ ಗಳನ್ನು ಬಳಸುವವರು ಎದುರಿಸುವ ಸಮಸ್ಯೆಗಳಿಗಿಂತ ಹೆಚ್ಚು ಎನ್ನುವುದು ಐವರ ಪೈಕಿ ನಾಲ್ವರು ಗ್ರಾಹಕರ (ಶೇಕಡಾ 81) ಅಭಿಪ್ರಾಯ.

ಮೊಬೈಲ್ ಸಾಧನಗಳನ್ನು, ನಾವು ಆನ್‍ಲೈನ್ ಮೂಲಕವಾಗಲೀ, ಮಳಿಗೆಗಳಲ್ಲಾಗಲಿ ಹೇಗೆ ಶಾಪ್ ಮಾಡಿ, ಹಣ ಪಾವತಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಮೊಬೈಲ್ ಬ್ಯಾಂಕಿಂಗ್(ಶೇ.67) ಮತ್ತು ಮೊಬೈಲ್ ವ್ಯಾಲೆಟ್ಸ್ (ಶೇ.62)ಗಳ ಜೊತೆಗೆ ಇ-ಕಾಮರ್ಸ್ ಅಪ್ಲಿಕೇಷನ್(ಶೇ. 76)ಗಳು ಅತ್ಯಂತ ಜನಪ್ರಿಯ ಅಪ್ಲಿಕೇಷನ್‍ಗಳ ಪೈಕಿ ಒಂದಾಗಿವೆ ಎನ್ನುವುದು ಅಚ್ಚರಿಯ ವಿಷಯವೇನೂ ಅಲ್ಲ. ಇವುಗಳು ಸಾಮಾಜಿಕ ಜಾಲತಾಣ(ಶೇ.86) ಮತ್ತು ಮೆಸೇಜಿಂಗ್ ಅಪ್ಲಿಕೇಷನ್(ಶೇ.78)ಗಳ ನಂತರದ ಸ್ಥಾನದಲ್ಲಿದೆ.[ಬಳಕೆದಾರರ ಪತ್ತೆಗೆ ಟ್ರೂ ಕಾಲರ್ ನಿಂದ ಟ್ರೂ ಎಸ್ಡಿಕೆ ಬಿಡುಗಡೆ]

ಶೇಕಡಾ 50ರಷ್ಟು ಗ್ರಾಹಕರು ತಾವು ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಆನ್‍ಲೈನ್ ಶಾಪಿಂಗ್ ಮಾಡುತ್ತೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಶೇ.68ರಷ್ಟು ಬಳಕೆದಾರರು ಆನ್‍ಲೈನ್ ಶಾಪಿಂಗ್ ನಲ್ಲಿನ ಭದ್ರತಾ ಅಪಾಯಗಳ ಬಗ್ಗೆ ಚಿಂತಿಸಿದರೆ, ಶೇ.42ರಷ್ಟು ಮಂದಿ ತಾವು ತಮ್ಮ ಮೊಬೈಲ್‍ನಲ್ಲಿ ಆನ್‍ಲೈನ್ ಶಾಪಿಂಗ್ ಮಾಡುತ್ತಿದ್ದಾಗ ನಿಜಕ್ಕೂ ಭದ್ರತಾ ಸಮಸ್ಯೆಯನ್ನು, ಅಪಾಯವನ್ನು, ಗೊಂದಲವನ್ನು ಎದುರಿಸಿದ್ದೇವೆ ಎಂದಿದ್ದಾರೆ.

ಭಾರತದೊಳಗೇ ಎಂವ್ಯಾಲೆಟ್ ವಿಷಯಕ್ಕೆ ಬಂದರೆ, ದೆಹಲಿ(ಶೇ.71)ಯ ಬಳಕೆದಾರರು ದೇಶದ ವಾಣಿಜ್ಯ ನಗರಿಯಾದ ಮುಂಬೈ(ಶೇ.63)ಗಿಂತಲೂ ಹೆಚ್ಚು ಹಾಗೂ ಆಗಾಗ್ಗೆ ಮೊಬೈಲ್ ಬ್ಯಾಂಕಿಂಗ್ ಅನ್ನು ಬಳಸುತ್ತಾರೆ

ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್ ಗಳು ಅತಿಹೆಚ್ಚಿನ ಅಪಾಯ ತಂದೊಡ್ಡಬಲ್ಲದು ಎಂದು ಶೇಕಡಾ 27ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಮೊಬೈಲಿನಲ್ಲಿ ಇಂಥ ಸಾಮಾಜಿಕ ಮಾಧ್ಯಮ ಆಪ್ ಸೇರಿದಂತೆ ಇತರೆ ಅಪ್ಲಿಕೇಷನ್ ಗಳನ್ನು ಬಳಸುವುದರಿಂದಾಗಿ ನಮ್ಮ ಎಂವ್ಯಾಲೆಟ್‍ಗೆ ರಿಸ್ಕ್ ಉಂಟಾಗಿದೆ ಎಂದು ಶೇಕಡಾ 52ರಷ್ಟು ಮಂದಿ ನಂಬಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Symantec Norton mobile survey suggests possible security threat to smartphone by social networking apps. The survey was commissioned by Norton by Symantec, and conducted across 14 cities, with 1,005 Indian smartphone and tablet users aged 16 and above.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more