ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಗ್ಗಿಯಿಂದ 350 ಪ್ಲಸ್ ಸಿಬ್ಬಂದಿ ಉದ್ಯೋಗ ಕಡಿತ

|
Google Oneindia Kannada News

ಬೆಂಗಳೂರು, ಜುಲೈ 28: ಬೆಂಗಳೂರು ಮೂಲದ ಸ್ವಿಗ್ಗಿ ಸಂಸ್ಥೆ ತನ್ನ ಉದ್ಯೋಗಗಳ ಸಂಖ್ಯೆ ಕಡಿತಗೊಳಿಸುತ್ತಿದೆ. ಫುಡ್ ಡೆಲಿವರಿ ಆಪ್ ಆಧಾರಿತ ಆನ್ಲೈನ್ ಸೇವೆ ಹೊಂದಿರುವ ಸ್ವಿಗ್ಗಿ ಎರಡು ತಿಂಗಳಲ್ಲಿ 350 ಪ್ಲಸ್ ಸಿಬ್ಬಂದಿಗಳನ್ನು ಮನೆಗೆ ಕಳಿಸುತ್ತಿದೆ. ಒಟ್ಟಾರೆ, ದೇಶದಾದ್ಯಂತ 1,100 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಕೊರೊನಾವೈರಸ್ ಸಂಕಷ್ಟ ಎದುರಾಗುತ್ತಿದ್ದಂತೆ ಮೇ ತಿಂಗಳಿನಲ್ಲಿ ಸಿಬ್ಬಂದಿ ಸಂಖ್ಯೆ ಕಡಿತದ ಬಗ್ಗೆ ಚರ್ಚಿಸಲಾಗಿತ್ತು. ಅದರಂತೆ ಸದ್ಯ ಸಂಸ್ಥೆಯು ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ, ಉದ್ಯೋಗ ಕಡಿತ ಅನಿವಾರ್ಯ, ಎಲ್ಲಾ ಉದ್ಯೋಗಿಗಳೀಗೂ ಮೂರು ತಿಂಗಳ ಸಂಬಳ, ಭತ್ಯೆ, ಡಿಸೆಂಬರ್ ತನಕ ಆರೋಗ್ಯ ವಿಮೆ ಒದಗಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಐಸಿಐಸಿಐ ಸಹಭಾಗಿತ್ವದಲ್ಲಿ 'ಸ್ವಿಗ್ಗಿ ಮನಿ' ಡಿಜಿಟಲ್ ವಾಲೆಟ್ಐಸಿಐಸಿಐ ಸಹಭಾಗಿತ್ವದಲ್ಲಿ 'ಸ್ವಿಗ್ಗಿ ಮನಿ' ಡಿಜಿಟಲ್ ವಾಲೆಟ್

ಪ್ರತಿಸ್ಪರ್ಧಿ ಝೊಮ್ಯಾಟೋ ಕೂಡಾ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇ 13ರಷ್ಟು ಕಡಿತಗೊಳಿಸಿದೆ, ಸಂಬಳವನ್ನು ತಗ್ಗಿಸಿತ್ತು. ಆದರೆ, ಈ ತಿಂಗಳಿನಿಂದ ಸಂಬಳ ಪೂರ್ತಿ ನೀಡಲಾಗುತ್ತಿದೆ.

Swiggy to lay off 350 employees due to COVID-19 impact

2014ರಲ್ಲಿ ಆರಂಭಗೊಂಡ ಆನ್ ಡಿಮ್ಯಾಂಡ್ ಡೆಲಿವರಿ ವೇದಿಕೆ ಸ್ವಿಗ್ಗಿ ಸುಮಾರು 1,60,000 ರೆಸ್ಟೋರೆಂಟ್ ಜೊತೆ ಪಾಲುದಾರಿಕೆ ಹೊಂದಿದೆ. ಸುಮಾರು 500 ಕ್ಕೂ ಅಧಿಕ ನಗರ, ಪಟ್ಟಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

"ಸಾಂಕ್ರಾಮಿಕ ಕಂಡು ಬಂದ ದಿನದಿಂದ ಸ್ವಿಗ್ಗಿ ನಿರಂತರವಾಗಿ ಗ್ರಾಹಕರ ನೋವನ್ನು ನೀಗಿಸುವತ್ತ ಕಾರ್ಯ ನಿರತವಾಗಿದೆ. ಸ್ಥಳೀಯ ಮಟ್ಟದ ಸರ್ಕಾರಗಳ ನೆರವಿನಿಂದ ಇದು ಸಾಧ್ಯವಾಗಿದೆ. ನಮ್ಮಲ್ಲಿ ಲಭ್ಯವಿರುವ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ಬಳಸಿಕೊಂಡು ಇಂತಹ ಸೇವೆಗಳನ್ನು ನೀಡುತ್ತಿದ್ದೇವೆ. ದಿನಸಿ ಪದಾರ್ಥಗಳು ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ನಾವು ಗ್ರಾಹಕರ ಮನೆ ಬಾಗಿಲಿಗೆ ಮದ್ಯವನ್ನು ಜವಾಬ್ದಾರಿಯುತವಾಗಿ ತಲುಪಿಸುತ್ತಿದ್ದೇವೆ. ಈ ಮೂಲಕ ನಾವು ರೀಟೇಲ್ ಔಟ್ ಲೆಟ್ ಗಳ ವ್ಯವಹಾರವನ್ನು ವೃದ್ಧಿಯಾಗಲು ನೆರವಾಗುತ್ತಿದ್ದೇವೆ. ಅಲ್ಲದೇ, ಈ ಔಟ್ ಲೆಟ್ ಗಳಲ್ಲಿ ಜನಸಂದಣಿ ಆಗುವುದನ್ನು ತಪ್ಪಿಸಲು ನೆರವಾಗುತ್ತಿದ್ದೇವೆ'' ಎಂದು ವಿಗ್ಗಿಯ ವಿಪಿ-ಪ್ರಾಡಕ್ಟ್ಸ್ ಅನುಜ್ ರಾತಿ ಅವರು ಕೊವಿಡ್ 19 ಸಂದರ್ಭದಲ್ಲಿ ಆನ್ ಲೈನ್ ಮದ್ಯ ಮಾರಾಟದ ಬಗ್ಗೆ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Food ordering and delivery platform Swiggy on Monday said it is laying off 350 employees as part of the realignment exercise it started in May on account of the impact of COVID-19 pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X