ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದಾಬಾದ್‌, ಮುಂಬೈ, ಬೆಂಗಳೂರಿನಲ್ಲಿ ತನ್ನ ಜೀನಿ ಸೇವೆ ಸ್ಥಗಿತಗೊಳಿಸಿದ ಸ್ವಿಗ್ಗಿ

|
Google Oneindia Kannada News

ಹೈದರಾಬಾದ್‌, ಮೇ 11: ಸ್ವಿಗ್ಗಿ ವಿತರಣಾ ಕಾರ್ಯಪಡೆಯನ್ನು ನೇಮಿಸಿಕೊಳ್ಳಲು ಮತ್ತು ಬೇಡಿಕೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಕಂಪನಿ ತನ್ನ ಪಿಕ್-ಅಪ್ ಮತ್ತು ಡ್ರಾಪ್-ಆಫ್ ಸೇವೆ ಜೀನಿ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಕೆಲವು ವರದಿಗಳ ಪ್ರಕಾರ ಹೈದರಾಬಾದ್‌, ಬೆಂಗಳೂರು ಮತ್ತು ಮುಂಬೈನಂತಹ ಮೆಟ್ರೋ ಸಿಟಿಗಳಲ್ಲಿ ಜೀನಿ ಸೇವೆ ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.

ತಮಾಷೆ ಹೊರಗುತ್ತಿಗೆ: Dunzo ಬಳಸಿ ಡೆಲಿವರಿ ಮಾಡಿದ Swiggy ಏಜೆಂಟ್ತಮಾಷೆ ಹೊರಗುತ್ತಿಗೆ: Dunzo ಬಳಸಿ ಡೆಲಿವರಿ ಮಾಡಿದ Swiggy ಏಜೆಂಟ್

ಅಪ್ಲಿಕೇಶನ್‌ ಪರಿಶೀಲಿಸಿದರೆ "ನಿಮ್ಮ ನಗರದಲ್ಲಿನ ಕಾರ್ಯಾಚರಣೆಯ ಒತ್ತಡದಿಂದಾಗಿ, ನಮ್ಮ ಸೇವೆ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ನಾವು ಶೀಘ್ರದಲ್ಲೇ ಹಿಂತಿರುಗುತ್ತೇವೆ," ಎಂದು ತೋರಿಸುತ್ತಿದೆ.

 Swiggy Temporarily Suspends Genie Services In Hyderabad, Mumbai and Bengaluru

"ಒಟ್ಟು 68 ನಗರಗಳ ಪೈಕಿ 3 ನಗರಗಳಲ್ಲಿ ಸ್ವಿಗ್ಗಿ ಜೀನಿ ತಾತ್ಕಾಲಿಕವಾಗಿ ಲಭ್ಯವಾಗುತ್ತಿಲ್ಲ. ಕ್ರಿಕೆಟ್ ಮತ್ತು ಹಬ್ಬದ ಸೀಸನ್‌ ಆಗಿರುವುದರಿಂದ ಆಹಾರ ವಿತರಣೆ ಮತ್ತು ಇನ್‌ಸ್ಟಾಮಾರ್ಟ್ ಸೇವೆಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಅವುಗಳ ಅಗತ್ಯತೆಯನ್ನು ಅನುಗಣವಾಗಿ ಸೇವೆ ಪೂರೈಸಬೇಕಿದೆ. ಹಾಗಾಗಿ ಪ್ರಸ್ತುತ ಸ್ವಿಗ್ಗಿ ಜೀನಿ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಈ ಪ್ರಮುಖ ನಗರಗಳಲ್ಲಿ ಶೀಘ್ರದಲ್ಲೇ ಸೇವೆಯನ್ನು ಪುನರಾರಂಭಿಸುತ್ತೇವೆ ಎಂಬ ವಿಶ್ವಾಸ ನಮಗಿದೆ" ಎಂದು ಸ್ವಿಗ್ಗಿ ವಕ್ತಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸ್ವಿಗ್ಗಿ ಜೀನಿ ಸೇವೆ ಬಂದ್ ಆಗಲು ಏನು ಕಾರಣ?

ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಹಣದುಬ್ಬರದಿಂದಾಗಿ, ಅನೇಕ ಆಹಾರ ಮತ್ತು ದಿನಸಿ ವಿತರಣಾ ಕಂಪನಿಗಳು ತಮ್ಮ ಸವಾರರ ವೇತನವನ್ನು ಹೆಚ್ಚಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಪೂರೈಕೆ ವಿಭಾಗದಲ್ಲಿ ಕೆಲಸಗಾರರ ಕೊರತೆಯನ್ನು ಉಲ್ಬಣಗೊಳಿಸಿದೆ, ವಿಶೇಷವಾಗಿ ಬೆಂಗಳೂರು, ಮುಂಬೈ ಮತ್ತು ನವದೆಹಲಿ ಅಂತಹ ನಗರಗಳಲ್ಲಿ ಡೆಲಿವರಿ ಬಾಯ್ಸ್‌ಗಳನ್ನು ನೇಮಿಸಿಕೊಳ್ಳುವುದು ತುಂಬಾ ಕಠಿಣವಾಗುತ್ತಿದೆ.

 Swiggy Temporarily Suspends Genie Services In Hyderabad, Mumbai and Bengaluru

ಸ್ವಿಗ್ಗಿ ಸಂಸ್ಥೆಯಿಂದ ಸ್ವಿಗ್ಗಿ ಗೋ ಎಂಬ ಪಿಕಪ್ ಮತ್ತು ಡ್ರಾಪ್ ಸೇವೆ
ಏಪ್ರಿಲ್ 25 ರಂದು ಸ್ವಿಗ್ಗಿ ಸ್ಟೆಪ್ ಅಹೆಡ್‌ ಎಂಬ ಹೆಸರಿನೊಂದಿಗೆ ಡೆಲಿವರಿ ಕಾರ್ಯನಿರ್ವಾಹಕರಿಗೆ ಸ್ಥಿರ ಸಂಬಳ ಮತ್ತು ಹೆಚ್ಚುವರಿ ಪ್ರಯೋಜನಗಳೊಂದಿಗೆ ಫುಲ್‌ ಟೈಮ್‌ ಮತ್ತು ನಿರ್ವಾಹಕ ಮಟ್ಟದ ಹುದ್ದೆಗಳನ್ನು ನೀಡುವ ಕಾರ್ಯಕ್ರಮವನ್ನು ಆರಂಭಿಸಿದೆ. ಸ್ಟೆಪ್‌ ಅಹೆಡ್‌ ಕಾರ್ಯಕ್ರಮದಲ್ಲಿ ಸ್ವಿಗ್ಗಿಯೊಂದಿಗೆ ತಮ್ಮ ಪ್ರಸ್ತುತ ಒಪ್ಪಂದಗಳಿಗೆ ಹೊಂದಿಕೊಂಡು ಹೋಗಲು ಬಯಸುವ ಕಾರ್ಯನಿರ್ವಾಹಕರಿಗೆ ಮೊದಲು ಅವಕಾಶ ನೀಡುವ ಗುರಿಯನ್ನು ಹೊಂದಿದೆ.

 Swiggy Temporarily Suspends Genie Services In Hyderabad, Mumbai and Bengaluru

Recommended Video

Umran Malik ಬೆಂಕಿ ಬೌಲಿಂಗ್ ಬಗ್ಗೆ ರವಿಶಾಸ್ತ್ರಿ ಕೊಟ್ರು ವಾರ್ನಿಂಗ್ | Oneindia Kannada

ಪ್ರಸ್ತುತ ಸ್ವಿಗ್ಗಿಯಲ್ಲಿ 2,70,00 ವಿತರಣಾ ಪಾಲುದಾರರನ್ನು ಸ್ವಿಗ್ಗಿ ಹೊಂದಿದ್ದು, ಕನಿಷ್ಠ 20ರಷ್ಟು ಪ್ರತಿಶತ ಕಾರ್ಯನಿರ್ವಾಹಕರಿಗೆ ಸ್ಟೆಪ್‌ ಅಹೆಡ್‌ ಕಾರ್ಯಕ್ರಮದ ಮೂಲಕ ಫ್ಲೀಟ್‌ ಮ್ಯಾನೇಜರ್‌ ಹುದ್ದೆಗಳನ್ನು ಕಾಯ್ದಿರಿಸುವ ಉದ್ದೇಶವನ್ನು ಹೊಂದಿದೆ.

English summary
Swiggy has temporarily shut its pick-up and drop-off service Genie, as the company reportedly struggles to hire a delivery workforce and keep up with the demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X