• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಿಗ್ಗಿಯಿಂದ ಮನೆ ಬಾಗಿಲಿಗೆ ಮದ್ಯ ಪೂರೈಕೆ

|

ಬೆಂಗಳೂರು, ಮೇ 21, 2020: ಭಾರತದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್ ಫಾರ್ಮ್ ಆಗಿರುವ ಸ್ವಿಗ್ಗಿ ತನ್ನ ಆಪ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಮದ್ಯವನ್ನು ತಲುಪಿಸುವ ಸೇವೆಯನ್ನು ಜಾರ್ಖಂಡ್ ರಾಜ್ಯದಲ್ಲಿ ಆರಂಭಿಸಿದೆ. ಸ್ವಿಗ್ಗಿ ಆಪ್ ನಲ್ಲಿನ ವೈನ್ ಶಾಪ್ ವಿಭಾಗದ ಮೂಲಕ ಈ ಸೇವೆಯನ್ನು ಜಾರ್ಖಂಡ್ ರಾಜ್ಯ ಸರ್ಕಾರದ ಅನುಮತಿ ಪಡೆದ ನಂತರ ಇಂದು ಅಲ್ಲಿನ ರಾಜಧಾನಿ ರಾಂಚಿಯಲ್ಲಿ ಸೇವೆಯನ್ನು ಆರಂಭಿಸಿದೆ. ಈ ವಾರದೊಳಗೆ ರಾಜ್ಯದ ಇನ್ನೂ ಕೆಲವು ನಗರಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗುತ್ತದೆ.

      ಭಾನುವಾರ ಎಣ್ಣೆ ಸಿಗುತ್ತಾ ಇಲ್ವಾ ಅನ್ನೋದೇ ಪ್ರಶ್ನೆ ! Liquor available on sunday

      ಮದ್ಯವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸಂಬಂಧ ಅನುಮತಿ ಪಡೆಯಲು ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಸ್ವಿಗ್ಗಿ ಮಾತುಕತೆ ನಡೆಸುತ್ತಿದೆ. ಸರ್ಕಾರಗಳಿಂದ ಅನುಮತಿ ದೊರೆತ ತಕ್ಷಣ ಅಲ್ಲಿಯೂ ಈ ಸೇವೆಯನ್ನು ಆರಂಭಿಸಲಾಗುತ್ತದೆ.

      ಆಹಾರ ಪದಾರ್ಥದ ರೀತಿ ಝೊಮ್ಯಾಟೊದಿಂದ ಮದ್ಯ ಡೆಲಿವರಿ

      ಮದ್ಯವನ್ನು ಸರಬರಾಜು ಮಾಡುವ ಸಂದರ್ಭದಲ್ಲಿ ಕಾನೂನುಗಳನ್ನು ಪಾಲಿಸಲಾಗುತ್ತದೆ. ಇದಕ್ಕಾಗಿ ಸ್ವಿಗ್ಗಿ ಮದ್ಯಕ್ಕೆ ಆರ್ಡರ್ ಮಾಡುವವರ ವಯಸ್ಸು, ಬಳಕೆದಾರರ ಅಧಿಕೃತತೆ ಪರಿಶೀಲನೆ ಸೇರಿದಂತೆ ಮತ್ತಿತರೆ ಮಾನದಂಡಗಳನ್ನು ಅನುಸರಿಸುತ್ತದೆ. ಮದ್ಯವನ್ನು ಆರ್ಡರ್ ಮಾಡುವ ಗ್ರಾಹಕರು ತಮ್ಮ ವಯಸ್ಸನ್ನು ದೃಢೀಕರಣ ಮಾಡುವ ಸರ್ಕಾರದ ಗುರುತಿನ ಚೀಟಿ ಮತ್ತು ತಮ್ಮ ಸೆಲ್ಫಿಯನ್ನು ಅಪ್ ಲೋಡ್ ಮಾಡಬೇಕು. ಎಲ್ಲಾ ಆರ್ಡರ್ ಗಳಿಗೆ ವಿನೂತನವಾದ ಒಟಿಪಿ ಇರಲಿದೆ. ಡೆಲಿವರಿ ಸಂದರ್ಭದಲ್ಲಿ ಈ ಒಟಿಪಿಯನ್ನು ನೀಡಬೇಕಾಗುತ್ತದೆ. ರಾಜ್ಯ ಸರ್ಕಾರದ ಮಿತಿಗಿಂತ ಹೆಚ್ಚು ಪ್ರಮಾಣದ ಮದ್ಯವನ್ನು ಗ್ರಾಹಕರು ಆರ್ಡರ್ ಮಾಡುವಂತಿಲ್ಲ.

      ಈ ಬಗ್ಗೆ ಮಾತನಾಡಿದ ಸ್ವಿಗ್ಗಿಯ ವಿಪಿ-ಪ್ರಾಡಕ್ಟ್ಸ್ ಅನುಜ್ ರಾತಿ ಅವರು, "ಸಾಂಕ್ರಾಮಿಕ ಕಂಡು ಬಂದ ದಿನದಿಂದ ಸ್ವಿಗ್ಗಿ ನಿರಂತರವಾಗಿ ಗ್ರಾಹಕರ ನೋವನ್ನು ನೀಗಿಸುವತ್ತ ಕಾರ್ಯ ನಿರತವಾಗಿದೆ. ಸ್ಥಳೀಯ ಮಟ್ಟದ ಸರ್ಕಾರಗಳ ನೆರವಿನಿಂದ ಇದು ಸಾಧ್ಯವಾಗಿದೆ. ನಮ್ಮಲ್ಲಿ ಲಭ್ಯವಿರುವ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ಬಳಸಿಕೊಂಡು ಇಂತಹ ಸೇವೆಗಳನ್ನು ನೀಡುತ್ತಿದ್ದೇವೆ. ದಿನಸಿ ಪದಾರ್ಥಗಳು ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ನಾವು ಗ್ರಾಹಕರ ಮನೆ ಬಾಗಿಲಿಗೆ ಮದ್ಯವನ್ನು ಜವಾಬ್ದಾರಿಯುತವಾಗಿ ತಲುಪಿಸುತ್ತಿದ್ದೇವೆ. ಈ ಮೂಲಕ ನಾವು ರೀಟೇಲ್ ಔಟ್ ಲೆಟ್ ಗಳ ವ್ಯವಹಾರವನ್ನು ವೃದ್ಧಿಯಾಗಲು ನೆರವಾಗುತ್ತಿದ್ದೇವೆ. ಅಲ್ಲದೇ, ಈ ಔಟ್ ಲೆಟ್ ಗಳಲ್ಲಿ ಜನಸಂದಣಿ ಆಗುವುದನ್ನು ತಪ್ಪಿಸಲು ನೆರವಾಗುತ್ತಿದ್ದೇವೆ'' ಎಂದು ತಿಳಿಸಿದರು.

      English summary
      Swiggy, India’s leading on-demand delivery platform, has enabled online processing and home delivery of alcohol through the ‘Wine Shops’ category on the Swiggy app.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
      X