ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಗ್ಗಿ ಸಂಸ್ಥೆಯಿಂದ ಸ್ವಿಗ್ಗಿ ಗೋ ಎಂಬ ಪಿಕಪ್ ಮತ್ತು ಡ್ರಾಪ್ ಸೇವೆ

|
Google Oneindia Kannada News

ಬೆಂಗಳೂರು, ಸೆ. 04: ವರ್ಷದ ಆರಂಭದಲ್ಲಿ ಸ್ವಿಗ್ಗಿ ಸ್ಟೋರ್ ಗಳನ್ನು ಆರಂಭಿಸಿದ ಬಳಿಕ ಭಾರತದ ಮುಂಚೂಣಿಯಲ್ಲಿರುವ ಬೇಡಿಕೆ ಆಧಾರಿತ ಡೆಲಿವರಿ ಪ್ಲಾಟ್‍ಫಾರಂ ಆಗಿರುವ ಸ್ವಿಗ್ಗಿ ಇದೀಗ, 'ಸ್ವಿಗ್ಗಿ ಗೋ' ಎಂಬ ಹೊಸ ಸೌಲಭ್ಯವನ್ನು ಆರಂಭಿಸುವ ಮೂಲಕ ಗ್ರಾಹಕರಿಗೆ ಹೋಲಿಕೆಗೂ ನಿಲುಕದ ಆರಾಮದಾಯಕತೆಯನ್ನು ಒದಗಿಸುವ ತನ್ನ ಧ್ಯೇಯದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಬೆಂಗಳೂರಿನಾದ್ಯಂತ ಈ ಸೇವೆ ಆರಂಭವಾಗಿದ್ದು, ಸ್ವಿಗ್ಗಿ ಗೋ ಎಂಬುದು ನಗರದ ಯಾವುದೇ ಮೂಲೆಗೂ ಪ್ಯಾಕೇಜ್‍ಗಳನ್ನು ತಲುಪಿಸುವಂಥ ತತ್‍ಕ್ಷಣದ ಪಿಕಪ್ ಮತ್ತು ಡ್ರಾಪ್ ಸೇವೆ ಆಗಿದೆ. ಸ್ವಿಗ್ಗಿ ಸ್ಟೋರ್ ಗಳಂತೆಯೇ ಸ್ವಿಗ್ಗಿ ಗೋ ಎನ್ನುವುದು ಕೂಡ ಸ್ವಿಗ್ಗಿ ಅಪ್ಲಿಕೇಷನ್‍ನ ಭಾಗವೇ ಆಗಿದೆ.

Recommended Video

ದನ ಹಾಗು ಹಂದಿ ಮಾಂಸಾಹಾರವನ್ನ ಡೆಲಿವರಿ ಮಾಡುವುದಿಲ್ಲ ಎಂದ Zomato ಸಿಬ್ಬಂದಿ | Oneindia Kannada

ಯುವತಿಯೊಡನೆ ಅಸಭ್ಯ ವರ್ತನೆ: ಗ್ರಾಹಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದ ಸ್ವಿಗ್ಗಿಯುವತಿಯೊಡನೆ ಅಸಭ್ಯ ವರ್ತನೆ: ಗ್ರಾಹಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದ ಸ್ವಿಗ್ಗಿ

ನಗರದಲ್ಲಿರುವ ಪ್ರತಿಯೊಬ್ಬ ಗ್ರಾಹಕನಿಗೂ ಡೆಲಿವರಿಯನ್ನು ಸುಲಭವಾಗಿಸುವ ಭರವಸೆಯ ಮೂಲಕ, ಸ್ವಿಗ್ಗಿ ಗೋ ಸೇವೆಯನ್ನು ಲಾಂಡ್ರಿಯನ್ನು ಒಯ್ಯಲು, ರವಾನಿಸಲು, ಮರೆತುಹೋಗಿರುವ ಕೀಲಿಕೈಗಳನ್ನು ಸೂಕ್ತ ಮಾಲೀಕನಿಗೆ ತಲುಪಿಸಲು, ಮನೆಯಿಂದ ಕಚೇರಿಗೆ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗಲು ಅಥವಾ ಕ್ಲೈಂಟ್‍ಗಳಿಗೆ ಕಡತಗಳು ಅಥವಾ ಪಾರ್ಸೆಲ್‍ಗಳನ್ನು ತಲುಪಿಸಲು ಹೀಗೆ ನಾನಾ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಗ್ರಾಹಕರಿಗೆ ಆರಾಮದಾಯಕತೆ ಒದಗಿಸಲು ಮತ್ತು ಅವರ ಸಮಯವನ್ನು ಉಳಿಸುವತ್ತ ಸ್ವಿಗ್ಗಿ ಗಮನ ನೆಟ್ಟಿದೆ, ಬಲಿಷ್ಠವಾದ ಇನ್-ಹೌಸ್ ತಂತ್ರಜ್ಞಾನ ಮತ್ತು ದೇಶದ ಅತಿದೊಡ್ಡ ಸಕ್ರಿಯ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ ಸಹಜವಾಗಿಯೇ ಅತ್ಯಂತ ಅಗ್ಗದ ದರದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದೆ.

ತನ್ನೊಂದಿಗೆ ಮಲಗು ಎಂದ ಸ್ವಿಗ್ಗಿ ಬಾಯ್, ದೂರು ನೀಡಿದ್ದಕ್ಕೆ ಸ್ವಿಗ್ಗಿ ಸಂಸ್ಥೆ ಮಾಡಿದ್ದೇನು?ತನ್ನೊಂದಿಗೆ ಮಲಗು ಎಂದ ಸ್ವಿಗ್ಗಿ ಬಾಯ್, ದೂರು ನೀಡಿದ್ದಕ್ಕೆ ಸ್ವಿಗ್ಗಿ ಸಂಸ್ಥೆ ಮಾಡಿದ್ದೇನು?

ಸ್ವಿಗ್ಗಿ ಗೋ ಸೇವೆಗೆ ಚಾಲನೆ ಮತ್ತು ಸ್ವಿಗ್ಗಿ ಸ್ಟೋರ್‍ಗಳ ವಿಸ್ತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಿಗ್ಗಿ ಸಿಇಒ ಶ್ರೀಹರ್ಷ ಮೆಜೆಟಿ, ನಗರದ ಗ್ರಾಹಕರಿಗೆ ಅತ್ಯುತ್ತಮವಾದ ಆರಾಮದಾಯಕತೆಯನ್ನು ಒದಗಿಸುವ ಮೂಲಕ ಅವರ ಜೀವನ ಗುಣಮಟ್ಟವನ್ನು ಎತ್ತರಕ್ಕೇರಿಸುವುದೇ ಸ್ವಿಗ್ಗಿಯ ಧ್ಯೇಯವಾಗಿದೆ. ಕಳೆದ ಐದು ವರ್ಷಗಳಿಂದ ಆಹಾರದ ಪೂರೈಕೆಯ ಮೂಲಕ ಮತ್ತು ನಗರದಾದ್ಯಂತ ಮಳಿಗೆಗಳನ್ನು ತೆರೆಯುವ ಮೂಲಕ ಈ ಧ್ಯೇಯವನ್ನು ಸಾಧಿಸಿರುವ ಸಂಸ್ಥೆ, ಈಗ ಸ್ವಿಗ್ಗಿ ಗೋ ಮೂಲಕ ನಗರದ ಎಲ್ಲ ಗ್ರಾಹಕರಿಗೂ ಸ್ವಿಗ್ಗಿ ಡೆಲಿವರಿ ಸೂಪರ್‍ಪವರ್ ಅನ್ನು ವಿಸ್ತರಿಸಲಿದೆ '' ಎಂದು ಹೇಳಿದರು.

ಸ್ವಿಗ್ಗಿಯ ಸೇವೆಗೆ ಸಾಕ್ಷಿಯಾದ ಮೊದಲ ನಗರ ಬೆಂಗಳೂರು

ಸ್ವಿಗ್ಗಿಯ ಸೇವೆಗೆ ಸಾಕ್ಷಿಯಾದ ಮೊದಲ ನಗರ ಬೆಂಗಳೂರು

"ಕೇವಲ ಆಹಾರ ಮಾತ್ರವಲ್ಲದೆ, ಇತರೆ ವಸ್ತುಗಳನ್ನೂ ತಲುಪಬೇಕಾದವರಿಗೆ ತಲುಪಿಸುವಂಥ ಸ್ವಿಗ್ಗಿಯ ಸೇವೆಗೆ ಸಾಕ್ಷಿಯಾದ ದೇಶದ ಮೊದಲ ನಗರವೆಂದರೆ ಅದು ಬೆಂಗಳೂರು. 2020ರೊಳಗಾಗಿ ನಾವು ಸ್ವಿಗ್ಗಿ ಗೋ ಸೇವೆಯನ್ನು ಸುಮಾರು 300 ನಗರಗಳಿಗೆ ವಿಸ್ತರಿಸುತ್ತಿದ್ದು, ಸ್ವಿಗ್ಗಿ ಸ್ಟೋರ್‍ಗಳನ್ನು ಎಲ್ಲ ಪ್ರಮುಖ ಮೆಟ್ರೋಗಳಲ್ಲಿ ವಿಸ್ತರಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಭಾರತದಾದ್ಯಂತದ ಗ್ರಾಹಕರಿಗೆ ಆರಾಮದಾಯಕತೆಯ ಹೊಸ ಯುಗವನ್ನು ಸೃಷ್ಟಿಸಲಿದ್ದೇವೆ,'' ಎಂದು ಸಿಇಒ ಶ್ರೀಹರ್ಷ ಹೇಳಿದರು.

ಸ್ವಿಗ್ಗಿ ಸಂಸ್ಥೆಯು ತನ್ನ ಬೇಡಿಕೆ-ಆಧರಿತ ಡೆಲಿವರಿ ಸೇವೆಯಾದ ಸ್ವಿಗ್ಗಿ ಸ್ಟೋರ್‍ಗಳನ್ನು ಬೆಂಗಳೂರು ಮತ್ತು ಹೈದರಾಬಾದ್‍ಗೂ ವಿಸ್ತರಿಸಿದ್ದು, ಈ ನಗರಗಳಲ್ಲಿ ಗ್ರಾಹಕರು ಪ್ರತಿಯೊಂದು ಮಳಿಗೆಯಿಂದಲೂ ಆರ್ಡರ್ ಗಳನ್ನು ಮಾಡಬಹುದಾಗಿದೆ.

ಗುರುಗ್ರಾಮದಲ್ಲಿ ಆರಂಭಗೊಂಡ ಸೇವೆ

ಗುರುಗ್ರಾಮದಲ್ಲಿ ಆರಂಭಗೊಂಡ ಸೇವೆ

ಗುರುಗ್ರಾಮದಲ್ಲಿ ಆರಂಭಗೊಂಡ ಕೇವಲ ಆರು ತಿಂಗಳುಗಳಲ್ಲಿ, ಸ್ವಿಗ್ಗಿ ಸ್ಟೋರ್ ಗಳು ಈಗಾಗಲೇ ಗಣನೀಯ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಿಗ್ಗಿಯ ಆಹಾರ ಡೆಲಿವರಿಯ ಪ್ರಮಾಣಕ್ಕೆ ಹೋಲಿಸಿದರೆ, ಸ್ಟೋರ್ ಗಳೇ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಮೂಲಕ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಪ್ರತಿ ದಿನವೂ ಹೊಸ ಹೊಸ ಸ್ಟೋರ್ ಗಳು ಆರಂಭವಾಗುತ್ತಿದ್ದು, ತನ್ನ ಪಾಲುದಾರರ ಆದಾಯದ ಹರಿವನ್ನೂ ಸ್ವಿಗ್ಗಿ ಹೆಚ್ಚಿಸುತ್ತಿದೆ. ಸ್ವಿಗ್ಗಿ ಸ್ಟೋರ್ ಗಳಿಂದಾಗಿ ಅಭಿವೃದ್ಧಿ ಕಾಣುತ್ತಿರುವ ಅನೇಕರು ತಮ್ಮ ತಮ್ಮ ಉದ್ದಿಮೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.

ಗುರುಗ್ರಾಮದಲ್ಲಿ ಅಭೂತಪೂರ್ವ ಯಶಸ್ಸು ಕಂಡ ಸ್ವಿಗ್ಗಿ ಸ್ಟೋರ್ ಗಳು ಈಗ ಹತ್ತು ವಿಭಾಗಗಳಲ್ಲಿ ತನ್ನ ಮಳಿಗೆಗಳಿಂದ ಡೆಲಿವರಿ ಮಾಡಲಿದೆ. ಬೆಂಗಳೂರು ಮತ್ತು ಹೈದರಾಬಾದ್‍ನಲ್ಲಿ ಹಣ್ಣುಗಳು ಮತ್ತು ತರಕಾರಿಗಳು, ಕಿರಾಣಿಗಳು ಮತ್ತು ಸೂಪರ್ ಮಾರ್ಕೆಟ್‍ಗಳು, ಮಾಂಸದ ಅಂಗಡಿಗಳು ಮತ್ತು ಫಾರ್ಮಸಿಗಳು ಹೀಗೆ ಹತ್ತು ಕೆಟಗರಿಗಳಲ್ಲಿ ಡೆಲಿವರಿ ಕೈಗೊಳ್ಳಲಿದೆ.

300ಕ್ಕೂ ಅಧಿಕ ಪಾಲುದಾರ ಸಂಸ್ಥೆಗಳು

300ಕ್ಕೂ ಅಧಿಕ ಪಾಲುದಾರ ಸಂಸ್ಥೆಗಳು

ಬೆಂಗಳೂರಿನಲ್ಲಿ, ಸ್ವಿಗ್ಗಿ ಸಂಸ್ಥೆಗೆ ಗೋದ್ರೇಜ್ ನೇಚರ್ಸ್ ಬಾಸ್ಕೆಟ್, ನೀಲಗಿರೀಸ್, ಆರ್ಗಾನಿಕ್ ವರ್ಲ್ಡ್, ಹೆಡ್ ಅಪ್ ಫಾರ್ ಟೈಲ್ಸ್, ನಂದೂಸ್ ಚಿಕನ್ ಸೇರಿದಂತೆ 300 ಕ್ಕೂ ಅಧಿಕ ವ್ಯಾಪಾರಿ ಪಾಲುದಾರರಿದ್ದು, ಈ ಪೈಕಿ ಯಾವುದೇ ಮಳಿಗೆಯಿಂದಲಾದರೂ ಸ್ವಿಗ್ಗಿ ಡೆಲಿವರಿ ಮಾಡಲಿದೆ. ಹೈದರಾಬಾದ್‍ನಲ್ಲಿ ಇದು ಮುಂದಿನ ಎರಡು ವಾರಗಳಲ್ಲೇ ಆರಂಭವಾಗಲಿದೆ. ಆದರೂ, ಸ್ವಿಗ್ಗಿಯು ರತ್ನದೀಪ್, ಘನಶ್ಯಾಮ್, ಸ್ನೇಹಾ ಚಿಕನ್, ಯೆಲ್ಲೋ ಆಂಡ್ ಗ್ರೀನ್ಸ್, 24 ಆರ್ಗ್ಯಾನಿಕ್ ಮಂತ್ರ ಸೇರಿದಂತೆ ಸುಮಾರು 200ರಷ್ಟು ವ್ಯಾಪಾರಿ ಪಾಲುದಾರರ ಜತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ನಗರದಲ್ಲಿ ಗ್ರಾಹಕನು ಆಯ್ಕೆ ಮಾಡುವ ಯಾವುದೇ ಮಳಿಗೆಯಿಂದಾದಲೂ ಡೆಲಿವರಿ ಸೇವೆ ಕೈಗೊಳ್ಳಲಿದೆ.

 ಫ್ರೆಶ್ ಟು ಹೋಮ್‍ಗಳಿಂದ ಡೆಲಿವರಿ

ಫ್ರೆಶ್ ಟು ಹೋಮ್‍ಗಳಿಂದ ಡೆಲಿವರಿ

ಎರಡೂ ನಗರಗಳಲ್ಲಿ ರಾಷ್ಟ್ರೀಯ ಪಾಲುದಾರರಾದ ಈಸಿಡೇ, ಹೆರಿಟೇಜ್ ಫ್ರೆಷ್, ಸ್ಪಾರ್, ಅಪೊಲೋ ಫಾರ್ಮಸಿ, ಹೆಲ್ತ್ ಕಾರ್ಟ್, ಫೆರ್ನ್ಸ್ ಎನ್ ಪೆಟಲ್ಸ್, ಲಿಷಿಯಸ್ ಮತ್ತು ಫ್ರೆಶ್ ಟು ಹೋಮ್‍ಗಳಿಂದ ಡೆಲಿವರಿ ಮಾಡಲಾಗುತ್ತದೆ.

ಸ್ವಿಗ್ಗಿ ಗೋ ಮತ್ತು ಸ್ಟೋರ್‍ಗಳಿಗೆ ಎಲ್ಲ ಡೆಲಿವರಿಗಳನ್ನೂ ಸ್ವಿಗ್ಗಿಯ ಬದ್ಧತೆಯುಳ್ಳ ಫ್ಲೀಟ್ ಮೂಲಕವೇ ನಡೆಸಲಾಗುತ್ತದೆ. ಇದರಿಂದಾಗಿ ಸ್ವಿಗ್ಗಿಯ ಡೆಲಿವರಿ ಪಾಲುದಾರರಿಗೆ ಹೆಚ್ಚುವರಿ ಆದಾಯವೂ ಲಭ್ಯವಾಗಲಿದೆ. ಎಲ್ಲ ಡೆಲಿವರಿ ಪಾಲುದಾರರೂ ತತ್ವಾಧಾರಿತವಾಗಿ ಸ್ವಿಗ್ಗಿಯೊಂದಿಗೆ ಸಂಬಂಧ ಹೊಂದಿದ್ದು, ಜೀವವಿಮೆ, ವೈದ್ಯಕೀಯ ಮತ್ತು ಅಪಘಾತದ ಕವರೇಜ್ ಅನ್ನೂ ಪಡೆಯುತ್ತಾರೆ. ಸೂಚನೆ: ಫಾರ್ಮಸಿ ಡೆಲಿವರಿಗಳು ಕೇವಲ ಓವರ್ ದಿ ಕೌಂಟರ್(ವೈದ್ಯರ ಲಿಖಿತ ಟಿಪ್ಪಣಿಯಿಲ್ಲದೇ ನೇರವಾಗಿ ಗ್ರಾಹಕರಿಗೆ ನೀಡುವಂಥ ಔಷಧಗಳು) ಔಷಧಗಳನ್ನು ಮಾತ್ರವೇ ಪೂರೈಸುತ್ತದೆ.

English summary
Food ordering and delivery platform Swiggy on Wednesday(Sept 04) said it has launched pick-up and drop service 'Swiggy Go' in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X