ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ ಸಹಭಾಗಿತ್ವದಲ್ಲಿ 'ಸ್ವಿಗ್ಗಿ ಮನಿ' ಡಿಜಿಟಲ್ ವಾಲೆಟ್

|
Google Oneindia Kannada News

ಬೆಂಗಳೂರು, ಜೂನ್ 30: ಭಾರತದಲ್ಲಿ ಮುಂಚೂಣಿಯಲ್ಲಿರುವ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್ ಫಾರ್ಮ್ ಸ್ವಿಗ್ಗಿ ತನ್ನದೇ ಆದ ಡಿಜಿಟಲ್ ವಾಲೆಟ್ 'ಸ್ವಿಗ್ಗಿ ಮನಿ'' ಪರಿಚಯಿಸಿದೆ. ಈ ಮೂಲಕ 'ಒಂದು ಕ್ಲಿಕ್ ಚೆಕೌಟ್ ಅನುಭವ'ವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ ಸಹಯೋಗದೊಂದಿಗೆ ಈ ಸ್ವಿಗ್ಗಿ ಮನಿಯನ್ನು ಪರಿಚಯಿಸಲಾಗಿದ್ದು, ಸ್ವಿಗ್ಗಿಯ ಗ್ರಾಹಕರು ತಮ್ಮ ಹಣವನ್ನು ಈ ಪ್ಲಾಟ್ ಫಾರ್ಮ್ ನಲ್ಲಿ ಸಂಗ್ರಹಿಸಿಟ್ಟುಕೊಂಡು ಸ್ವಿಗ್ಗಿಯಲ್ಲಿನ ಎಲ್ಲಾ ಆಹಾರ ಪದಾರ್ಥಗಳ ಆರ್ಡರ್ ಗಳಿಗೆ ಬಳಸಿಕೊಳ್ಳಬಹುದಾಗಿದೆ.

ಐಸಿಐಸಿಐ ಬ್ಯಾಂಕಿನ ಇನ್ ಸ್ಟಾ ವಾಲೆಟ್ ಸರ್ವೀಸ್ ನಿಂದ ರಚಿಸಲಾಗಿರುವ ಈ ''ಸ್ವಿಗ್ಗಿ ಮನಿ''ಯನ್ನು ಎಪಿಐ ಇಂಟಗ್ರೇಷನ್ ನೊಂದಿಗೆ ಕ್ಲೌಡ್ ಪ್ಲಾಟ್ ಫಾರ್ಮ್ ನಲ್ಲಿ ರೂಪಿಸಲಾಗಿದೆ. ಇದು ಸ್ವಿಗ್ಗಿಯು ತನ್ನ ಗ್ರಾಹಕರಿಗೆ ಡಿಜಿಟಲ್ ವಾಲೆಟ್ ಅನ್ನು ತಕ್ಷಣವೇ ಸೃಷ್ಟಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಸ್ವಿಗ್ಗಿಯ ಗ್ರಾಹಕರು ಈಗಾಗಲೇ ಐಸಿಐಸಿಐ ಬ್ಯಾಂಕ್ ಗ್ರಾಹಕರಾಗಿದ್ದರೆ ಅವರು ತಕ್ಷಣವೇ ಈ ವಾಲೆಟ್ ಅನ್ನು ಬಳಸಬಹುದಾಗಿದೆ.

ಐಸಿಐಸಿಐ ಬ್ಯಾಂಕ್ ಗ್ರಾಹಕರಲ್ಲದವರು ಐಸಿಐಸಿಐ ಬ್ಯಾಂಕಿಗೆ ಸರ್ಕಾರ ನೀಡಿರುವ ಗುರುತಿನ ಚೀಟಿ ಮತ್ತು ಇತರೆ ವಿವರಗಳನ್ನು ನೀಡುವುದರೊಂದಿಗೆ ತಕ್ಷಣ ವಾಲೆಟ್ ಬಳಸಲು ಆರಂಭಿಸಬಹುದಾಗಿದೆ. ಅತ್ಯುತ್ತಮ ಕಾರ್ಯದಕ್ಷತೆ, ತ್ವರಿತವಾಗಿ ವ್ಯವಹಾರ ನಡೆಸಬಹುದು ಮತ್ತು ಇತರರಿಗಿಂತ ಅತ್ಯಂತ ವೇಗದಲ್ಲಿ ಕಾರ್ಯನಿರ್ವಹಣೆ ಮಾಡುವುದು ಸೇರಿದಂತೆ ಇನ್ನಿತರೆ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ.

Swiggy Launches Digital Wallet ‘Swiggy Money’ In Partnership With Icici

ಸ್ವಿಗ್ಗಿ ಮನಿ' ಆಯ್ಕೆ ಮಾಡಿಕೊಳ್ಳುವ ಬಳಕೆದಾರರಿಗೆ ಇನ್ ಸ್ಟಂಟ್ ರೀಫಂಡ್ಸ್ ಮತ್ತು ಸುಲಭದ ಚೆಕೌಟ್ ಗಳು ಹಾಗೂ ಭವಿಷ್ಯದ ಫುಡ್ ಆರ್ಡರ್ ಗಳಿಗೆ ತಡೆರಹಿತವಾದ ಪಾವತಿ ಪ್ರಕ್ರಿಯೆಗಳನ್ನು ಪಡೆಯಬಹುದಾಗಿದೆ. ಸ್ವಿಗ್ಗಿ ಮನಿ' ಬಳಕೆದಾರರು ವಿವಿಧ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ತಮ್ಮ ವಾಲೆಟ್ ಅನ್ನು ಟಾಪ್ ಅಪ್ ಮಾಡಿಕೊಳ್ಳಬಹುದಾಗಿದೆ ಹಾಗೂ ಯಾವುದೇ ಬಹು ದೃಢೀಕರಣಗಳು ಇಲ್ಲದೇ ಒಂದೇ ಕ್ಲಿಕ್ ನಲ್ಲಿ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. ಒಂದು ವೇಳೆ ವಾಲೆಟ್ ನಲ್ಲಿರುವ ಬ್ಯಾಲೆನ್ಸ್ ಗಿಂತ ಆರ್ಡರ್ ಮಾಡಿದ ಮೊತ್ತ ಹೆಚ್ಚಾದರೆ ಬಳಕೆದಾರರಿಗೆ ಸ್ಪ್ಲಿಟ್-ಪೇ' ಆಯ್ಕೆಯನ್ನು ನೀಡಲಾಗುತ್ತದೆ.

English summary
The food delivery platform Swiggy has partnered with ICICI Bank has launched Swiggy Money similar to Amazon Pay and Paytm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X