ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

125 ನಗರಗಳಲ್ಲಿ ಸ್ವಿಗ್ಗಿಯಿಂದ ದಿನಸಿ ಉತ್ಪನ್ನಗಳ ವಿತರಣೆ

|
Google Oneindia Kannada News

ಬೆಂಗಳೂರು, 13 ಏಪ್ರಿಲ್ 2020: ದೇಶದ ಅತಿ ದೊಡ್ಡ ಆನ್-ಡಿಮ್ಯಾಂಡ್ ಡೆಲಿವರಿ ವೇದಿಕೆಯಾಗಿರುವ ಸ್ವಿಗ್ಗಿ ಗ್ರಾಹಕರ ಅನುಕೂಲಕ್ಕಾಗಿ ದೇಶಾದ್ಯಂತ 125 ಕ್ಕೂ ಹೆಚ್ಚು ನಗರಗಳಲ್ಲಿ ದಿನಸಿ ಮತ್ತು ಇತರೆ ಗೃಹಬಳಕೆ ಉತ್ಪನ್ನಗಳನ್ನು ವಿತರಣೆ ಆರಂಭಿಸಿದೆ. ಗ್ರಾಹಕರ ಮನೆಯ ಸನಿಹದಲ್ಲಿರುವ ಸ್ಟೋರ್ ಗಳು ಮತ್ತು ವಿತರಣಾ ಕೇಂದ್ರಗಳಿಂದ ಸ್ವಿಗ್ಗಿ ಈ ಉತ್ಪನ್ನಗಳನ್ನು ಪೂರೈಸಲಿದೆ. ಸ್ವಿಗ್ಗಿಯ ಆ್ಯಪ್ ನಲ್ಲಿ ಗ್ರಾಸರಿ ಟ್ಯಾಬ್ ನಲ್ಲಿ ಈ ಸೇವೆ ಲಭ್ಯವಿದೆ. ಈ ಆ್ಯಪ್ ಮೂಲಕ ಆರ್ಡರ್ ಮಾಡಿದ ಗ್ರಾಹಕರಿಗೆ ಸ್ವಿಗ್ಗಿ ದಿನಸಿ ಸಾಮಾನುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ.

ದೇಶಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಅವರಿಗೆ ಹೊರ ಹೋಗಲು ಸಾಧ್ಯವಾಗದೇ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ.

ಪ್ರತಿ ನಿತ್ಯ 5 ಲಕ್ಷ ನಿರಾಶ್ರಿತರಿಗೆ ಉಚಿತ ಆಹಾರ ಪೂರೈಕೆ ಸ್ವಿಗ್ಗಿ ಗುರಿಪ್ರತಿ ನಿತ್ಯ 5 ಲಕ್ಷ ನಿರಾಶ್ರಿತರಿಗೆ ಉಚಿತ ಆಹಾರ ಪೂರೈಕೆ ಸ್ವಿಗ್ಗಿ ಗುರಿ

ಈ ಸಂಕಷ್ಟವನ್ನು ಅರಿತಿರುವ ಸ್ವಿಗ್ಗಿಯು ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದಿನಸಿ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ. ಗ್ರಾಸರಿ' ವಿಭಾಗದಲ್ಲಿ ಗ್ರಾಹಕರು ತಮ್ಮ ಸುತ್ತಮುತ್ತಲಿನ ಸ್ಟೋರ್ ಗಳನ್ನು ಪತ್ತೆ ಮಾಡಿ ಅದರ ಮೂಲಕ ಉತ್ಪನ್ನಗಳನ್ನು ನೇರವಾಗಿ ಕಾರ್ಟ್ ಮಾಡಬಹುದಾಗಿದೆ. ಅದೇ ರೀತಿ ಪ್ರೀಪೇಯ್ಡ್ ಸಹ ಮಾಡಬಹುದಾಗಿದೆ. ಈ ಸೇವೆಯನ್ನು ಒದಗಿಸಲು ಸ್ವಿಗ್ಗಿಯು ಎಚ್ ಯುಎಲ್, ಅದಾನಿ ವಿಲ್ಮರ್ಸ್, ಸಿಪ್ಲಾ, ಪಿ&ಜಿ, ಗೋದ್ರೇಜ್, ಡಾಬರ್, ಮ್ಯಾರಿಕೊ, ವಿಶಾಲ್ ಮೆಗಾ ಮಾರ್ಟ್ ಸೇರಿದಂತೆ ಹಲವಾರು ರಾಷ್ಟ್ರೀಯ ಬ್ರ್ಯಾಂಡ್ ಗಳ ಜತೆ ಒಪ್ಪಂದ ಮಾಡಿಕೊಂಡಿದೆ.

ಸ್ವಿಗ್ಗಿಯ ಸಿಒಒ ವಿವೇಕ್ ಸುಂದರ್

ಸ್ವಿಗ್ಗಿಯ ಸಿಒಒ ವಿವೇಕ್ ಸುಂದರ್

ಸ್ವಿಗ್ಗಿಯ ಸಿಒಒ ವಿವೇಕ್ ಸುಂದರ್ ಅವರು ಈ ಸೇವೆ ಬಗ್ಗೆ ಮಾತನಾಡಿ, ''ದಿನಸಿ ಮತ್ತು ಇನ್ನಿತರೆ ಅಗತ್ಯ ಉತ್ಪನ್ನಗಳ ವಿಭಾಗವು ನಮ್ಮ ದೀರ್ಘಕಾಲೀನ ಸೇವೆಯ ಭಾಗವಾಗಿದೆ. ಗ್ರಾಹಕರಿಗೆ ಅತ್ಯಂತ ವೇಗವಾಗಿ ಅಗತ್ಯ ವಸ್ತುಗಳನ್ನು ನಾವು ತಲುಪಿಸುವ ಮೂಲಕ ಅವರಿಗೆ ನೆರವಾಗುತ್ತಿದ್ದೇವೆ. ನಮ್ಮ ಹೈಪರ್ ಲೋಕಲ್ ವಿತರಣೆ ಸೇವೆಯನ್ನು ವಿಸ್ತರಣೆ ಮಾಡುವ ಮೂಲಕ ನಾವು ನಮ್ಮ ಗ್ರಾಹಕರಿಗೆ ಅನುಕೂಲ ಮತ್ತು ಸುರಕ್ಷತೆಯನ್ನು ನೀಡುತ್ತಿದ್ದೇವೆ. ಇದೇ ವೇಳೆ, ಲಾಕ್ ಡೌನ್ ಆಗಿರುವ ಈ ಸಂದರ್ಭದಲ್ಲಿ ನಮ್ಮ ಪಾಲುದಾರರಿಗೆ ಆದಾಯವನ್ನೂ ತಂದುಕೊಡುತ್ತಿದ್ದೇವೆ. ಈ ವಿಭಾಗದಲ್ಲಿ ನಾವು ಮುಂದುವರಿಯಲಿದ್ದು, ಮನೆಯಲ್ಲೇ ಇರುವ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಅವರ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.

ಸ್ವಿಗ್ಗಿ ಈಗ `ಜೀನಿ’ ಆಗಿದೆ

ಸ್ವಿಗ್ಗಿ ಈಗ `ಜೀನಿ’ ಆಗಿದೆ

ಸ್ವಿಗ್ಗಿಯು ತನ್ನ `ಸ್ವಿಗ್ಗಿ ಗೋ' ಕೊಡುಗೆಯನ್ನು ಪುನರ್ ನವೀಕರಣ ಮಾಡಿದ್ದು, ಇದಕ್ಕೆ `ಜೀನಿ' ಎಂದು ಹೆಸರಿಸಿದೆ. ದೇಶದ 15 ನಗರಗಳಲ್ಲಿ ಈ ಜೀನಿ ಸೇವೆ ಲಭ್ಯವಿದೆ. ಇದರನ್ವಯ ನಗರದ ಯಾವುದೇ ಮೂಲೆಯಿಂದಲೂ ಉತ್ಪನ್ನಗಳನ್ನು ಪಡೆದು ಗ್ರಾಹಕರಿಗೆ ತಲುಪಿಸುವ ವೇದಿಕೆ ಇದಾಗಿದೆ. ಇದರಲ್ಲಿ ಇನ್ ಸ್ಟಂಟ್ ಪಿಕಪ್ ಮತ್ತು ಡ್ರಾಪ್ ಇರುತ್ತದೆ. ನಗರದಾದ್ಯಂತ ನಿರ್ದಿಷ್ಟ ಸ್ಟೋರ್ ನಿಂದ ಪ್ಯಾಕೇಜ್ ಗಳನ್ನು ಕಳುಹಿಸಲು ಅಥವಾ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಇದು ನೆರವಾಗುತ್ತದೆ. ಆದರೆ, ಈ ಸೇವೆ ಸೀಮಿತವಾಗಿದ್ದು, ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳು ಮತ್ತು ಔಷಧಿಗಳಿಗೆ ಮಾತ್ರ ಸೀಮಿತವಾಗಿದೆ.

ಆನ್‍ಲೈನ್ ಶಾಪಿಂಗ್‍ಗೆ ಮಾರು ಹೋದ ಶೇ.87 ರಷ್ಟು ಬೆಂಗಳೂರಿಗರು!ಆನ್‍ಲೈನ್ ಶಾಪಿಂಗ್‍ಗೆ ಮಾರು ಹೋದ ಶೇ.87 ರಷ್ಟು ಬೆಂಗಳೂರಿಗರು!

ಗ್ರಾಸರಿ ಮತ್ತು ಜೀನಿ ಮೂಲಕ ಸ್ವಿಗ್ಗಿ ಗ್ರಾಹಕರು ಅನುಭವಿಸುತ್ತಿರುವ ನೋವನ್ನು ನಿವಾರಣೆ ಮಾಡುವುದಷ್ಟೇ ಅಲ್ಲ, ರೀಟೇಲರ್ ಗಳು ಹಾಗೂ ಡೆಲಿವರಿ ಪಾರ್ಟ್ನರ್ ಗಳು ತಮ್ಮ ಸೇವೆಗಳನ್ನು ಉನ್ನತೀಕರಿಸಿಕೊಂಡು ಹೆಚ್ಚುವರಿ ಆದಾಯವನ್ನು ಗಳಿಸಲು ನೆರವಾಗುತ್ತದೆ.

ಕೊವಿಡ್-19 ವಿರುದ್ಧದ ಹೋರಾಟ

ಕೊವಿಡ್-19 ವಿರುದ್ಧದ ಹೋರಾಟ

ಜಾಗತಿಕ ಸಾಂಕ್ರಾಮಿಕವಾಗಿರುವ ಕೊವಿಡ್-19 ವಿರುದ್ಧದ ಹೋರಾಟದಲ್ಲಿ ಸ್ವಿಗ್ಗಿ ಕೈಜೋಡಿಸಿದೆ. ಇದು ತನ್ನ ರೆಸ್ಟೋರೆಂಟ್ ಗಳು ಮತ್ತು ಡೆಲಿವರಿ ಪಾಲುದಾರರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ವಯ ನೈರ್ಮಲ್ಯದ ಬಗ್ಗೆ ತಿಳಿ ಹೇಳುತ್ತಿದೆ. `ನೋ-ಕಾಂಟ್ಯಾಕ್ಟ್' ಡೆಲಿವರಿ ವ್ಯವಸ್ಥೆಯನ್ನು ಮಾಡುತ್ತಿದ್ದು, ಇದರಿಂದ ಗ್ರಾಹಕರು ಮತ್ತು ವಿತರಣಾ ಪಾಲುದಾರರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬಹುದಾಗಿದೆ.

ಸ್ವಿಗ್ಗಿ ಜೊತೆ ನೀವು ಕೈಜೋಡಿಸಿ

ಸ್ವಿಗ್ಗಿ ಜೊತೆ ನೀವು ಕೈಜೋಡಿಸಿ

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಿತರಣಾ ಪಾಲುದಾರರು ಮತ್ತು ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ಸ್ವಿಗ್ಗಿಯು ‘Swiggy Hunger SaviorCovid Relief Fund' ಅನ್ನು ಆರಂಭಿಸಿದೆ. ಈ ನಿಧಿಗೆ ಸ್ವಿಗ್ಗಿ ನಾಯಕರು, ಪಾಲುದಾರರು, ಹೂಡಿಕೆದಾರರು ಮತ್ತು ಸಿಬ್ಬಂದಿ ನೆರವು ನೀಡುತ್ತಿದ್ದಾರೆ. ಇದೇ ವೇಳೆ, ಸಾವಿರಾರು ನಿರ್ಗತಿಕರಿಗೆ, ದಿನಗೂಲಿ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ ಆಹಾರವನ್ನು ಪೂರೈಸುವ ನಿಟ್ಟಿನಲ್ಲಿ ಕಂಪನಿಯು ‘Hope, not Hunger' ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮದಡಿ ಇದುವರೆಗೆ 19 ಲಕ್ಷಕ್ಕೂ ಅಧಿಕ ಊಟವನ್ನು ನೀಡಲು ವಿವಿಧ ಸರ್ಕಾರಗಳು, ಪಾಲುದಾರರು ಮತ್ತು ಸ್ಥಳೀಯ ದಾನಿಗಳಿಗೆ ನೆರವಾಗಿದೆ.

English summary
Food ordering and delivery platform Swiggy on Monday said it has expanded delivery of groceries and household essential services to over 125 cities and has also tied up with a number of national brands and retailers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X