ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಗ್ಗಿ ಉದ್ಯೋಗಿಗಳಿಗೆ ಖಾಯಂ ವರ್ಕ್ ಫ್ರಂ ಹೋಂ ಭಾಗ್ಯ!

|
Google Oneindia Kannada News

ನವದೆಹಲಿ, ಜುಲೈ 29: ಆಹಾರ ಮತ್ತು ದಿನಸಿ ವಿತರಣಾ ವೇದಿಕೆ ಸ್ವಿಗ್ಗಿ ತನ್ನ ಕೆಲಸದ ಭವಿಷ್ಯದ ನೀತಿಯನ್ನು ವಿಸ್ತರಿಸಿದ್ದು, ತನ್ನ ಉದ್ಯೋಗಿಗಳಿಗೆ ಎಲ್ಲಿಂದಲಾದರೂ ಕೆಲಸ ಮಾಡುವಂತೆ ಘೋಷಿಸಿದೆ.

ಈ ನೀತಿಯ ಅಡಿಯಲ್ಲಿ ಕಾರ್ಪೊರೇಟ್, ಕೇಂದ್ರ ವ್ಯಾಪಾರ ಕಾರ್ಯ ಮತ್ತು ತಂತ್ರಜ್ಞಾನದಂತಹ ತಂಡಗಳು ದೂರದಿಂದಲೇ ಕೆಲಸ ಮಾಡಬಹುದು ಎಂದು ಅದು ತಿಳಿಸಿದೆ. ಒಂದು ವಾರದವರೆಗೆ ಮೂಲ ಸ್ಥಳಗಳಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಭೇಟಿಯಾಗುವಂತೆ ಎಂದು ಕಂಪನಿಯು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

2014 ರಲ್ಲಿ ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾಗಿ ಆರಂಭವಾದ ಸ್ವಿಗ್ಗಿ ಪ್ರಸ್ತುತ 27 ರಾಜ್ಯಗಳ 487 ನಗರಗಳು ಮತ್ತು ದೇಶಾದ 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಕಂಪನಿ ಹೇಳಿದೆ. ತಂಡದ ಅಗತ್ಯತೆಗಳು ಮತ್ತು ಹಲವಾರು ವ್ಯವಸ್ಥಾಪಕರು ಮತ್ತು ಉದ್ಯೋಗಿಗಳ ಪ್ರತಿಕ್ರಿಯೆಯನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಅವರು ಕಳೆದ ಎರಡು ವರ್ಷಗಳಲ್ಲಿ ಮನೆಯಿಂದಲೇ ಕೆಲಸ ಮಾಡಲು ಹೊಂದಿಕೊಂಡು ಉತ್ಪಾದಕತೆಯನ್ನು ಹೆಚ್ಚಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

Swiggy Announces Permanent Work From Home For Its Employees

ಹೊಂದಿಕೊಳ್ಳುವುದೇ ನಮ್ಮ ಕೆಲಸದ ಭವಿಷ್ಯದ ತಿರುಳಾಗಿದೆ. ನಾವು ಜಾಗತಿಕ ಮತ್ತು ಸ್ಥಳೀಯ ಪ್ರತಿಭೆಯ ಪ್ರವೃತ್ತಿಗಳನ್ನು ಗಮನಿಸಿದ್ದೇವೆ. ನಮ್ಮ ಉದ್ಯೋಗಿಗಳು, ವ್ಯವಸ್ಥಾಪಕರು ಮತ್ತು ನಾಯಕರ ನಾಡಿಮಿಡಿತವನ್ನು ಅರಿಯುತ್ತೇವೆ. ಇದು ಉದ್ಯೋಗಿಗಳಿಗೆ ಶಾಶ್ವತ ಆಯ್ಕೆಯಾಗಿದೆ. ಅವರು ಎಲ್ಲಿಂದಾದರೂ ಕೆಲಸವನ್ನು ಮಾಡಲು ಅನುಕೂಲ ಮಾಡಿಕೊಡುತ್ತೇವೆ. ಇದು ಎಲ್ಲೇ ಇದ್ದರೂ ಅವರಿಗೆ ಕೆಲಸ ಮತ್ತು ವಿರಾಮದ ಅನುಕೂಲವನ್ನು ನೀಡುತ್ತದೆ ಎಂದು ಸ್ವಿಗ್ಗಿಯ ಮಾನವ ಸಂಪನ್ಮೂಲ ಮುಖ್ಯಸ್ಥ ಗಿರೀಶ್ ಮೆನನ್ ಹೇಳಿದ್ದಾರೆ.

Swiggy Announces Permanent Work From Home For Its Employees

ಅನೇಕ ಕಂಪನಿಗಳು ಈಗಾಗಲೇ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ತನ್ನ ಉದ್ಯೋಗಿಗಳಿಗೆ ನೀಡಿದೆ. ಉತ್ಪಾದಕತೆಯ ಹೆಚ್ಚಳ ಮತ್ತು ಮನೆಯಿಂದಲೇ ಕೆಲಸ ಮಾಡಿಸುವ ಮೂಲಕ ತಮ್ಮ ಕಂಪೆನಿಯ ಉದ್ಯೋಗಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡುವುದು ಇತರೆ ಕಾರಣಗಳಿಂದಾಗಿ ಈ ನೀತಿಯನ್ನು ಮುಂದುವರಿಸಲು ಬಯಸುತ್ತವೆ. ಕೋವಿಡ್‌ ಸಾಂಕ್ರಮಿಕ ಮುಗಿದ ಬಳಿಕ ವಾತಾವರಣ ತಿಳಿಯಾದ ನಂತರ ಐಟಿ ಉದ್ಯೋಗಿಗಳನ್ನು ಕಂಪೆನಿಯು ಕಚೇರಿ ಕೆಲಸಕ್ಕೆ ಕರೆಯಲು ಹೆಣಗಾಡಬೇಕಾಯಿತು. ಬಳಿಕ ಕೆಲವು ಕಂಪೆನಿಗಳು ಮತ್ತೆ ವರ್ಕ್‌ ಪ್ರಮ್‌ ಹೋಮ್‌ ಘೋಷಿಸಿದವು.

Recommended Video

Rishikumar Swamiji ಮಂಗಳೂರಿನ ಘಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ | *Politics | OneIndia Kannada

English summary
Food and grocery delivery platform Swiggy has extended its future of work policy and announced that it will allow its employees to work from anywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X