ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

92,000 ಕೋಟಿ ರೂ ಪಾವತಿಸಿ: ಏರ್ಟೆಲ್, ವೊಡಾಫೋನ್‌ಗೆ ಸುಪ್ರೀಂಕೋರ್ಟ್ ಸೂಚನೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 24: ತೆರಿಗೆ, ದಂಡ ಮತ್ತು ಬಡ್ಡಿ ಸೇರಿದಂತೆ 92,000 ಕೋಟಿ ರೂಪಾಯಿ ಬಾಕಿ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡುವಂತೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳಿಗೆ ಸುಪ್ರೀಂಕೋರ್ಟ್ ಗುರುವಾರ ಸೂಚನೆ ನೀಡಿದೆ.

ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಕುರಿತಂತೆ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಈ ದೂರಸಂಪರ್ಕ ಸಂಸ್ಥೆಗಳು ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ಸೂಚಿಸಿತು. ದೂರಸಂಪರ್ಕ ಇಲಾಖೆಯು ಈ ಬಾಕಿ ಮೊತ್ತವನ್ನು ಸುಮಾರು 92,000 ಕೋಟಿ ರೂ ಎಂದು ಅಂದಾಜಿಸಿದೆ.

ಜಿಯೋ ಜತೆ ಪೈಪೋಟಿ: ಏರ್‌ಟೆಲ್, ವೊಡಾಫೋನ್ ಹೊಸ ನಿರ್ಣಯ, ಗ್ರಾಹಕರ ಮೇಲೆ ಪರಿಣಾಮಜಿಯೋ ಜತೆ ಪೈಪೋಟಿ: ಏರ್‌ಟೆಲ್, ವೊಡಾಫೋನ್ ಹೊಸ ನಿರ್ಣಯ, ಗ್ರಾಹಕರ ಮೇಲೆ ಪರಿಣಾಮ

ಎರಡು ಪ್ರಮುಖ ದೂರಸಂಪರ್ಕ ಕಂಪೆನಿಗಳಾದ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ವಿರುದ್ಧದ ದೂರಸಂಪರ್ಕ ಇಲಾಖೆಯ ಮನವಿಯನ್ನು ಪುರಸ್ಕರಿಸಲಾಗಿದೆ. ಈ ಬಾಕಿ ಮೊತ್ತದ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಮುಂದೆ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ದೂರಸಂಪರ್ಕ ಸಂಸ್ಥೆಗಳು ತಮ್ಮ ಬಾಕಿ ಮೊತ್ತವನ್ನು ಪಾವತಿಸಲು ನಿರ್ದಿಷ್ಟ ಕಾಲಮಿತಿ ವಿಧಿಸುವುದಕ್ಕೆ ನ್ಯಾಯಪೀಠ ಪ್ರತ್ಯೇಕ ಆದೇಶ ಹೊರಡಿಸಲಿದೆ.

ಮತ್ತೆ ದಾವೆ ನಡೆಯುವುದಿಲ್ಲ

ಮತ್ತೆ ದಾವೆ ನಡೆಯುವುದಿಲ್ಲ

ಬಾಕಿ ಮೊತ್ತವನ್ನು ಪಾವತಿಸಲು ಕಂಪೆನಿಗಳ ಪರ ವಕೀಲರು ಆರು ತಿಂಗಳ ಕಾಲಾವಕಾಶ ಕೇಳಿದರು. ಇದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಲೆಕ್ಕಾಚಾರಗಳನ್ನು ಪ್ರಶ್ನಿಸಿ ಮೂರನೇ ಸುತ್ತಿನ ದಾವೆ ನಡೆಯುವ ಸಾಧ್ಯತೆ ಇರುವುದರಿಂದ ಸಕಾರಣ ಸಮಯಮಿತಿ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಈ ಪ್ರಕರಣದಲ್ಲಿ ಮತ್ತೆ ಯಾವುದೇ ದಾವೆ ನಡೆಯುವುದಿಲ್ಲ ಎಂದು ಹೇಳಿತು.

ಎಡಿಆರ್ ವ್ಯಾಖ್ಯಾನಕ್ಕೆ ಆಕ್ಷೇಪ

ಎಡಿಆರ್ ವ್ಯಾಖ್ಯಾನಕ್ಕೆ ಆಕ್ಷೇಪ

ಸರ್ಕಾರಕ್ಕೆ ಸಲ್ಲಿಸುವ ತರಂಗಾಂತರ ಶುಲ್ಕ ಮತ್ತು ಪರವಾನಗಿ ಶುಲ್ಕ ಎರಡಕ್ಕೂ ಮೂಲ ನಿಗದಿ ಮಾಡುವ ಹೊಂದಾಣಿಕೆಯ ಒಟ್ಟು ಆದಾಯ (ಎಡಿಆರ್) ವ್ಯಾಖ್ಯಾನಕ್ಕೆ ದೂರಸಂಪರ್ಕ ಕಂಪೆನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಸೇವೆಯಿಂದ ದೊರಕುವ ಆದಾಯಗಳಾಚೆ ಡಿವಿಡೆಂಟ್, ಹ್ಯಾಂಡ್‌ಸೆಟ್ ಮಾರಾಟ, ಬಾಡಿಗೆ ಮತ್ತು ಚಿಂದಿಗಳ ಮಾರಾಟವನ್ನು ಕೂಡ ಎಡಿಆರ್ ಒಳಗೊಂಡಿರಬೇಕು ಎಂದು ಇಲಾಖೆ ವಾದಿಸಿತ್ತು.

ಇಲಾಖೆ ಪ್ರಸ್ತಾಪಿಸಿರುವ ಹೆಚ್ಚಿನ ವಸ್ತುಗಳು ಸರ್ಕಾರದ ಎಡಿಆರ್ ವ್ಯಾಖ್ಯಾನದ ಅಡಿಯೇ ಬರುವುದರಿಂದ ಕಂಪೆನಿಗಳು ಈ ಮೊತ್ತ ಪಾವತಿ ಮಾಡಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ರಿಲಯನ್ಸ್ ಜಿಯೋ ಗ್ರಾಹಕರಿಗೆ ಹೊಸ 'ಆಲ್​ ಇನ್​ ಒನ್​ ' ಯೋಜನೆರಿಲಯನ್ಸ್ ಜಿಯೋ ಗ್ರಾಹಕರಿಗೆ ಹೊಸ 'ಆಲ್​ ಇನ್​ ಒನ್​ ' ಯೋಜನೆ

ಎಷ್ಟೆಷ್ಟು ಹಣ ನೀಡಬೇಕು?

ಎಷ್ಟೆಷ್ಟು ಹಣ ನೀಡಬೇಕು?

ದೂರಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೂರಸಂಪರ್ಕ ಕಂಪೆನಿಗಳಾದ ಭಾರ್ತಿ ಏರ್‌ಟೆಲ್ 21,682.13 ಕೋಟಿ ರೂ., ವೊಡಾಫೋನ್ ಐಡಿಯಾ 19,823.71, ಕೋಟಿ ರೂ. ಮತ್ತು ರಿಲಯನ್ಸ್ ಕಮ್ಯುನಿಕೇಷನ್ 16,456.47 ಕೋಟಿ ರೂ. ಪಾವತಿ ಮಾಡಬೇಕಿದೆ.

ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?

ಕಂಪೆನಿಗಳ ಷೇರು ಮೌಲ್ಯ ಕುಸಿತ

ಕಂಪೆನಿಗಳ ಷೇರು ಮೌಲ್ಯ ಕುಸಿತ

ನ್ಯಾಯಾಲಯದ ಈ ಆದೇಶ ಹೊರಬೀಳುತ್ತಿದ್ದಂತೆಯೇ ವೊಡಾಫೋನ್ ಐಡಿಯಾದ ಷೇರುಗಳು ಶೇ 18.40ರಷ್ಟು ಕಡಿಮೆಯಾಗಿದ್ದು, 4.61 ರೂಗೆ ಕಡಿಮೆಯಾಗಿದೆ. ಭಾರ್ತಿ ಏರ್‌ಟೆಲ್ ಶೇ 8.39ರಷ್ಟು ಕುಸಿತ ಕಂಡಿದ್ದರೆ, ಆರ್‌ಕಾಂ ಶೇ 2.86 ಮೌಲ್ಯ ಕಳೆದುಕೊಂಡಿದೆ.

English summary
Supreme Court on Thursday orders Bharti Airtel and Vodafone Idea telecom companies to pay Rs 92,000 Crore dues to government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X