ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್, ಫ್ಲಿಪ್ ಕಾರ್ಟ್ ಓಪನ್, ಸದ್ಯಕ್ಕೆ ಅಗತ್ಯ ವಸ್ತು ಮಾತ್ರ ಲಭ್ಯ

|
Google Oneindia Kannada News

ನವದೆಹಲಿ, ಏಪ್ರಿಲ್ 20: ಕೊರೊನಾವೈರಸ್ ನಿಂದಾಗಿ ಲಾಕ್ಡೌನ್ ಎರಡನೇ ಅವಧಿಯಲ್ಲಿ ಏಪ್ರಿಲ್ 20ರ ನಂತರ ಇ ಕಾಮರ್ಸ್ ಸಂಸ್ಥೆಗಳಿಗೆ ವಿನಾಯತಿ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯವು ಮಾರ್ಗಸೂಚಿಯಲ್ಲಿ ಹೇಳಿದೆ. ಅಮೆಜಾನ್, ಫ್ಲಿಪ್ ಕಾರ್ಟ್ ನಂಥ ಆನ್ ಲೈನ್ ಸೇವಾ ಸಂಸ್ಥೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಹೇಳಿದ್ದಾರೆ. ಆದರೆ, ಮೇ 3ರ ತನಕ ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ.

ಏಪ್ರಿಲ್ 20ರ ನಂತರ ಇ ಕಾಮರ್ಸ್ ವೆಬ್ ತಾಣಗಳ ಸೇವೆ ರೆಡ್ ಅಲರ್ಟ್ ಇರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಆನ್ ಲೈನ್ ಶಾಪಿಂಗ್ ತಾಣಗಳದ ಅಮೆಜಾನ್, ಫ್ಲಿಪ್ ಕಾರ್ಟ್ ಮುಂತಾದ ತಾಣಗಳ ಸೇವೆ ಲಭ್ಯವಿರುವುದಿಲ್ಲ ಹಾಗೂ ಎಲೆಕ್ಟ್ರಾನಿಕ್ ಸಾಮಾಗ್ರಿಗಳಾದ ಮೊಬೈಲ್ ಫೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಮುಂತಾದವು ಏಪ್ರಿಲ್ 20ರ ನಂತರ ಆನ್ ಲೈನ್ ನಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ ಎಂಬ ಆದೇಶವನ್ನು ಬದಲಾಯಿಸಲಾಗಿದ್ದು, ಮೇ 3 ರ ತನಕ ಈ ರೀತಿ non -essentials ಸಾಮಾಗ್ರಿಗಳನ್ನು ಮಾರುವಂತಿಲ್ಲ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

Supply of non-essentials by e-commerce companies to remain suspended until May 3

ವಿನಾಯತಿ ಪಡೆದ ಸೇವೆಗಳು, ಸಂಸ್ಥೆಗಳು:

* ಆಸ್ಪತ್ರೆಗಳು, ಪಶು ವೈದ್ಯಕೀಯ ಆಸ್ಪತ್ರೆಗಳು, ಔ‍ಷಧಾಲಯಗಳು, ಜನ ಔಷಧಿ ಕೇಂದ್ರ, ಆಯುಷ್, ಪ್ರಯೋಗಾಲಯಗಳು, ಆಂಬ್ಯುಲೆನ್ಸ್ ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರೆಯಲಿದೆ.

* ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳು, ಎಂ.ಎಸ್.ಪಿ ಸೇರಿದಂತೆ ಕೃಷಿ ಉತ್ಪನ್ನಗಳ ಸಂಗ್ರಹದಲ್ಲಿ ತೊಡಗಿರುವ ಏಜೆನ್ಸಿಗಳು, ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಕಸ್ಟಮ್ ನೇಮಕಾತಿ ಕೇಂದ್ರಗಳು, ಎಪಿಎಂಸಿ ಮತ್ತು ಮಂಡಿಗಳು, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳು ಕಾರ್ಯನಿರ್ವಹಿಸಲಿದೆ.
* ಮೀನುಗಾರಿಕೆ, ಜಲಚರ ಸಾಕಣೆ ಉದ್ಯಮ, ಮೊಟ್ಟೆ ಕೇಂದ್ರ, ಫೀಡ್ ಸಸ್ಯಗಳು, ವಾಣಿಜ್ಯ ಅಕ್ವೇರಿಯಾ ಕಾರ್ಯಗಳಿಗೆ ವಿನಾಯತಿ ನೀಡಲಾಗಿದೆ. * ಶೇ. 50 ರಷ್ಟು ಕೆಲಸಗಾರರನ್ನು ಬಳಸಿಕೊಂಡು ಕಾಫಿ, ಟೀ ಮತ್ತು ರಬ್ಬರ್ ತೋಟದ ಕೆಲಸಗಳನ್ನು ನಿರ್ವಹಿಸಬಹುದು.
* ಪಶು ಸಂಗೋಪನೆ, ಪೌಲ್ಟ್ರಿ, ಗೋಶಾಲೆಗಳು ಕಾರ್ಯ ನಿರ್ವಹಿಸಲಿವೆ.
* ಬ್ಯಾಂಕುಗಳು, ವಿಮಾ ಕಚೇರಿಗಳು, ಅಂಚೆ ಕಚೇರಿಗಳು, ಪಿಂಚಣಿ, ಇ.ಪಿ.ಎಫ್.ಎ ಸೇವೆಗಳು ಲಭ್ಯವಿರಲಿದೆ.
* ಅಂಗನವಾಡಿಯಿಂದ 15 ದಿನಗಳಿಗೊಮ್ಮ ಆಹಾರ ವಿತರಣೆ ಆಗಲಿದೆ.
* ಆನ್ ಲೈನ್ ಕಲಿಕೆ ಮತ್ತು ದೂರ ಶಿಕ್ಷಣಕ್ಕೆ ಮಾತ್ರ ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡಬೇಕಿದೆ.
* ಪೆಟ್ರೋಲ್ ಪಂಪ್ ಗಳು, ಎಲ್‌ಪಿಜಿ, ಪೆಟ್ರೋಲಿಯಂ ಮತ್ತು ಅನಿಲ ಚಿಲ್ಲರೆ ಮತ್ತು ಶೇಖರಣಾ ಮಳಿಗೆಗಳಿಗೆ ವಿನಾಯಿತಿ ನೀಡಲಾಗಿದೆ.

* ಸರ್ಕಾರಿ ಚಟುವಟಿಕೆಗೆ ಮಾತ್ರ ಡೇಟಾ ಮತ್ತು ಕಾಲ್ ಸೆಂಟರ್ ಕೆಲಸ ಮಾಡಲಿವೆ.
* ಇ-ಕಾಮರ್ಸ್ ಕಂಪನಿ, ಕೊರಿಯರ್ ಸೇವೆಗಳಿಗೂ ವಿನಾಯಿತಿ ನೀಡಲಾಗಿದೆ.
* ಎಲೆಕ್ಟ್ರೀಷಿಯನ್, ಪ್ಲಂಬರ್, ಮೋಟಾರು ಮೆಕ್ಯಾನಿಕ್, ಕಾರ್ಪೆಂಟರ್ ಕೆಲಸ ಮಾಡಬಹುದು.

English summary
Supply of non-essential goods by e-commerce companies will not be allowed during the lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X