ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದಲ್ಲ, ಎರಡಲ್ಲ..! ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿ ದಂಡ..!

|
Google Oneindia Kannada News

ಸೂಯೆಜ್ ಕಾಲುವೆಯಲ್ಲಿ ಮುಳುಗುತ್ತಿದ್ದ ಹಡಗನ್ನು ಹೇಗೋ ತೇಲಿಸಿದ್ದರೂ 'ಎವರ್ ಗಿವನ್‌'ಗೆ ಸಂಕಷ್ಟಗಳು ಮಾತ್ರ ತಪ್ಪುತ್ತಿಲ್ಲ. ಹೌದು ಸುಮಾರು 6 ದಿನಗಳ ಕಾಲ ಸೂಯೆಜ್ ಕಾಲುವೆ ಓಡಾಟವನ್ನೇ ಬಂದ್ ಮಾಡಿದ್ದ ತಪ್ಪಿಗೆ 'ಎವರ್ ಗಿವನ್‌'ಗೆ 7 ಸಾವಿರ ಕೋಟಿ ದಂಡ ಕಟ್ಟಲು 'ಸೂಯೆಜ್ ಕಾಲುವೆ ಪ್ರಾಧಿಕಾರ' ಆದೇಶವನ್ನು ನೀಡಿದೆ.

2 ಲಕ್ಷ 24 ಸಾವಿರ ಟನ್ ಭಾರ ಹೊತ್ತಿದ್ದ 'ಎವರ್ ಗಿವನ್‌' ಹಡಗು, ಸೂಯೆಜ್ ಕಾಲುವೆ ಮೇಲೆ ಸಂಚರಿಸುವಾಗ ಭೀಕರ ಮರಳು ಮಿಶ್ರಿತ ಬಿರುಗಾಳಿ ಎದ್ದಿತ್ತು. ಈಜಿಪ್ಟ್ ಮರುಭೂಮಿ ಪ್ರದೇಶ, ಹೀಗಾಗಿಯೇ ಮರಳಿನ ಚಂಡಮಾರುತ ಇಲ್ಲಿ ಸಾಮಾನ್ಯ.

ಆದರೆ ಈ ಬಾರಿ ಗಾಳಿ ಭೀಕರವಾಗಿತ್ತು ಇದೇ ಕಾರಣಕ್ಕೆ ನಾವಿಕ ಹಡಗನ್ನ ಸೀದಾ ಕಾಲುವೆ ಬದಿಗೆ ಹೊರಳಿಸಿದ್ದ. ಹಡಗು ಮರಳಿನ ಮೇಲೆ ನಿಂತುಬಿಟ್ಟಿತ್ತು. ಹೀಗಾಗಿ ಸುಮಾರು 1 ವಾರಗಳ ಕಾಲ 400ಕ್ಕೂ ಹೆಚ್ಚು ಹಡಗುಗಳು ಸೂಯೆಜ್ ಕಾಲುವೆಯ ಒಳಗೆ ಮತ್ತು ಹೊರಗೆ ಕಾಯುತ್ತಾ ನಿಂತಿದ್ದವು. ಇದರಿಂದ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿದ್ದು, ಇದೇ ಕಾರಣಕ್ಕೆ 'ಎವರ್ ಗಿವನ್‌'ಗೆ 7 ಸಾವಿರ ಕೋಟಿ ದಂಡ ವಿಧಿಸಲಾಗಿದೆ.

ಈಗಲೂ ಟ್ರಾಫಿಕ್, ಟ್ರಾಫಿಕ್..!

ಈಗಲೂ ಟ್ರಾಫಿಕ್, ಟ್ರಾಫಿಕ್..!

'ಎವರ್ ಗಿವನ್‌' ಮಾಡಿದ ಅವಾಂತರದ ಬಳಿಕ ಉಂಟಾದ ಟ್ರಾಫಿಕ್ ಜಾಮ್ ಕ್ಲಿಯರ್ ಆಗಿಲ್ಲ. ಈಗಲೂ ನೂರಾರು ಹಡಗುಗಳು ಸೂಯೆಜ್ ಕಾಲುವೆಯಲ್ಲಿ ಕಾಯುತ್ತಿವೆ. ಹೀಗಾಗಿ ಅಗತ್ಯ ವಸ್ತುಗಳು ಏಷ್ಯಾ ಹಾಗೂ ಮತ್ತಿತರ ಭಾಗಗಳಿಗೆ ತಲುಪುತ್ತಿಲ್ಲ. ಸುತ್ತಿ ಬಳಸಿ ಹೋಗಬೇಕಾದರೆ ಸುಮಾರು 10 ಸಾವಿರ ಕಿಲೋ ಮೀಟರ್ ಹೆಚ್ಚು ದೂರ ಕ್ರಮಿಸಬೇಕು. ಅನಿವಾರ್ಯವಾಗಿ ಸರಕು ಸಾಗಾಣಿಕೆ ಹಡಗುಗಳು ಕಾಯುತ್ತಾ ನಿಂತಿವೆ. ಆದರೆ ಸದ್ಯಕ್ಕೆ ಟ್ರಾಫಿಕ್ ಪೂರ್ತಿ ಕ್ಲಿಯರ್ ಆಗುವ ಸಾಧ್ಯತೆ ಕಡಿಮೆ ಇದ್ದು, ಇನ್ನೂ ಒಂದು ವಾರ ಅಗತ್ಯ ಎನ್ನುತ್ತಾರೆ ಕಾಲುವೆ ಪ್ರಾಧಿಕಾರದ ಅಧಿಕಾರಿಗಳು.

‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು

‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು

ಇಡೀ ಜಗತ್ತು ನೆಪೋಲಿಯನ್‌ನ ನೆನಪಿನಲ್ಲಿ ಇಡುವುದು ಕೇವಲ ಆತನ ಯುದ್ಧಗಳಿಂದ ಅಲ್ಲ. ಬದಲಾಗಿ ಆತ ತಂದ ಕ್ರಾಂತಿಕಾರಿ ಬದಲಾವಣೆಗಳಿಂದ. ಯುರೋಪ್ ಹಾಗೂ ಆಫ್ರಿಕಾ ಅಭಿವೃದ್ಧಿಗೆ ನೆಪೋಲಿಯನ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. 1799ರಲ್ಲಿ ಈಜಿಪ್ಟ್ ವಶಪಡಿಸಿಕೊಂಡ ನೆಪೋಲಿಯನ್ ಸೂಯೆಜ್ ಕಾಲುವೆಯ ಅಧ್ಯಯನಕ್ಕೆ ಆದೇಶ ನೀಡಿದ್ದ. ಆದರೆ ಅತಿಯಾದ ವೆಚ್ಚದ ಹಿನ್ನೆಲೆ ಯೋಜನೆ ಕೈಬಿಡಲಾಯಿತು. 1840ರಲ್ಲಿ 2ನೇ ಬಾರಿ ಸಮೀಕ್ಷೆ ನಡೆಸಲಾಯಿತು. ಮೊದಲಿಗೆ ಕೈಗೊಂಡಿದ್ದ ಸಮೀಕ್ಷೆ ತಪ್ಪಾಗಿರುವುದನ್ನು ಅರಿತುಕೊಂಡು, ಮೆಡಿಟೆರಿಯನ್-ಕೆಂಪು ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಸೆಪ್ಟೆಂಬರ್ 25, 1859ರಲ್ಲಿ ಕಾಲುವೆ ನಿರ್ಮಾಣ ಆರಂಭವಾಗಿ-ನವೆಂಬರ್ 17, 1869ರಲ್ಲಿ ಕಾಲುವೆ ಕೆಲಸ ಪೂರ್ಣವಾಯಿತು. ಅಂದಿನಿಂದಲೂ ಈ ಕಾಲುವೆ ಅಸ್ತಿತ್ವದಲ್ಲಿ ಇದೆ.

1869ರಲ್ಲಿ ಕಾಲುವೆ ನಿರ್ಮಾಣ..!

‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!

‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!

ಜಗತ್ತಿನಲ್ಲಿ ಜಾಗದ ಮೇಲಿನ ಹಿಡಿತಕ್ಕಾಗಿ ಎಷ್ಟೋ ಯುದ್ಧಗಳು ನಡೆದಿವೆ. ಆದರೆ ಒಂದು ಕಾಲುವೆ ವಿಚಾರಕ್ಕೆ ನಡೆದ ಹೊಡೆದಾಟವನ್ನು 'ಸೂಯೆಜ್ ಕಾಲುವೆ' ಮೊದಲ ಸ್ಥಾನದಲ್ಲಿ ಪ್ರತಿನಿಧಿಸುತ್ತದೆ. 20 ಮೇ 1882ರಲ್ಲಿ ಈಜಿಪ್ಟ್ ಮೇಲೆ ಬ್ರಿಟನ್ ದಾಳಿ ನಡೆಸಿದ್ದು ಸೇರಿದಂತೆ ಅನೇಕ ಯುದ್ಧಗಳನ್ನ ಈ ಕಾಲುವೆ ಕಂಡಿದೆ. ಹಲವು ಸಂದರ್ಭದಲ್ಲಿ ಈ ಕಾಲುವೆಯನ್ನು ಬಂದ್ ಮಾಡಲಾಗಿದೆ. ಆದರೆ ಇದೀಗ ಹಡಗು ಅಡ್ಡನಿಂತ ಪರಿಣಾಮ ಈ ಕಾಲುವೆ ಬಂದ್ ಆಗಿದೆ. ಸಾವಿರಾರು ಕೋಟಿ ವ್ಯಾಪಾರ, ವಹಿವಾಟಿಗೆ ದೊಡ್ಡ ಕಂಟಕ ಇದೀಗ ಎದುರಾಗಿದೆ.

English summary
Suez Canal Authority will seek over $1 billion from Ever Given Ship in compensation for blocking the Suez Canal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X