ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಬಾಷ್ ಘಟಕದಲ್ಲಿ ಮುಷ್ಕರ

By Mahesh
|
Google Oneindia Kannada News

ಬೆಂಗಳೂರು, ಸೆ.16: ಅಟೋಮೋಟಿವ್ ಹಾಗೂ ಕೈಗಾರಿಕಾ ಉತ್ಪನ್ನ ಸೇವಾ ಸಂಸ್ಥೆ ಬಾಷ್ ನ ಬೆಂಗಳೂರು ಘಟಕದ ಕಾರ್ಮಿಕರು ಮುಷ್ಕರ ಹೂಡಿದ್ದಾರೆ. ಈ ಬಗ್ಗೆ ಬಾಂಬೆ ಷೇರು ವಿನಿಮಯ ಕೇಂದ್ರಕ್ಕೆ ಬಾಷ್ ಸಂಸ್ಥೆ ಮಾಹಿತಿ ನೀಡಿದೆ.

ಸೆ.16ರಿಂದ ಮುಷ್ಕರ ಹೂಡಲು ಯೂನಿಯನ್ ನಿರ್ಧರಿಸಿದೆ. ಅದರೆ, ಕಾರ್ಮಿಕರ ಒಕ್ಕೂಟ ಮುಂದಿಟ್ಟಿರುವ ಬೇಡಿಕೆಗಳು ಈಡೇರಿಸಲು ಕಷ್ಟಸಾಧ್ಯ. ಹಾಗೂ ಮುಷ್ಕರ ಕೂಡಾ ಅಕ್ರಮವಾಗಿದೆ ಎಂದು ಬಾಷ್ ಸಂಸ್ಥೆ ವಕ್ತಾರರು ಹೇಳಿದ್ದಾರೆ. ಕಾರ್ಮಿಕರ ಒಕ್ಕೂಟದ ಜೊತೆ ಮಾತುಕತೆ ಜಾರಿಯಲ್ಲಿದೆ. ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತರ ಮಧ್ಯಸ್ಥಿಕೆಯಲ್ಲಿ ಕಾರ್ಮಿಕರನ್ನು ಒಲಿಸಿಕೊಳ್ಳಲು ಬಾಷ್ ಸಂಸ್ಥೆ ಯತ್ನಿಸುತ್ತಿದೆ.

ಬಿಎಸ್ಇನಲ್ಲಿ ಮಂಗಳವಾರ ಮಧ್ಯಾಹ್ನ 12.56ರ ವೇಳೆಗೆ ಬಾಷ್ ಸಂಸ್ಥೆ ಷೇರುಗಳು 15074.00 ಮುಖಬೆಲೆಯಂತೆ ಶೇ 1.73 ರಷ್ಟು ಜಿಗಿತ ಕಂಡಿತ್ತು. ಇದೇ ಸಮಯಕ್ಕೆ ಎನ್ಎಸ್ಇಯಲ್ಲಿ 15050.00 ರು ನಂತೆ ಶೇ 1.09ರಷ್ಟು ಏರಿಕೆ ಕಂಡಿತ್ತು. ಬೆಂಗಳೂರು ಘಟಕದ ಮುಷ್ಕರದ ಬಿಸಿ ಷೇರುಗಳಿಗೆ ತಟ್ಟಿದ್ದಂತೆ ಕಾಣುತ್ತಿಲ್ಲ.

Strike at Bosch Bangalore plant

ಐಟಿ ಬಿಟಿ ಕ್ಷೇತ್ರಕ್ಕೆ ಸೀಮಿತವಾಗಿದ್ದ ಹೊರಗುತ್ತಿಗೆ ಜಾಡ್ಯವನ್ನು ಆಟೋಮೊಬೈಲ್ ಕ್ಷೇತ್ರದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿರುವ ಬಾಷ್ ಕಂಪನಿ ಮ್ಯಾನೇಜ್ಮೆಂಟ್ ವಿರುದ್ಧ ನೌಕರರು ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಆದರೆ, 1992ರಲ್ಲಿ ನೌಕರರ ಯೂನಿಯನ್ ಜೊತೆ ಮ್ಯಾನೇಜ್ಮೆಂಟ್ ಮಾಡಿಕೊಂಡ ಒಪ್ಪಂದವನ್ನು ಮೀರಿಲ್ಲ ಎಂದು ಸಂಸ್ಥೆ ಹೇಳಿದೆ.

ಬಾಷ್ ಸಮೂಹದಲ್ಲಿ ರಾಬರ್ಟ್ ಬಾಷ್ GmbH ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. 60 ದೇಶಗಳಲ್ಲಿ ಸುಮಾರು 300,000 ಉದ್ಯೋಗಿಗಳನ್ನು ಸಂಸ್ಥೆ ಹೊಂದಿದೆ. ಅದರೆ, ಬಾಷ್ ಸಂಸ್ಥೆಯ ಹೂಡಿಕೆ, ವಿಸ್ತರಣಾ ಯೋಜನೆಯ ಲಾಭ ಮಹಾರಾಷ್ಟ್ರದ ನಾಸಿಕ್ ಘಟಕಕ್ಕೆ ಸಿಕ್ಕಿದೆ. ಬದಲಿಗೆ ಬೆಂಗಳೂರಿನ ಘಟಕ ಕಡೆಗಣಿಸಲಾಗಿದೆ ಎಂದು ತಿಳಿದು ಬಂದಿದೆ.

ಜರ್ಮನಿ ಮೂಲದ ಬಾಷ್ ಕಂಪನಿ ಇತ್ತೀಚೆಗೆ ಆಟೋಮೊಬೈಲ್ ಕ್ಷೇತ್ರದಿಂದ ಇತರೆ ಕ್ಷೇತ್ರಕ್ಕೂ ಜಿಗಿದಿದೆ. ಸಿಮನ್ಸ್ ಗೃಹೋಪಯೋಗಿ ಸಮೂಹದ ಜೊತೆ ಕೈ ಜೋಡಿಸಿ ತಮಿಳುನಾಡಿನಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದೆ. ಕಣ್ಣಿನ ಪರೀಕ್ಷೆ ಸಾಧನಗಳನ್ನು ತಯಾರಿಸಲು ಬಾಷ್ ಮುಂದಾಗಿದ್ದು, ಸೀಮನ್ಸ್, ಜಿಇ, ಫಿಲಿಫ್ಸ್ ಕಂಪನಿಗಳ ಸಾಲಿಗೆ ಸೇರುತ್ತಿದೆ.

ಬಾಷ್ ಕಂಪನಿಗೆ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದಿಂದ ಶೇ 84ರಷ್ಟು ಆದಾಯ ಬರುತ್ತಿದ್ದರೆ, ಉಳಿದ 16% ಪ್ಯಾಕೇಜಿಂಗ್, ಇಂಧನ, ಪವರ್ ಟೂಲ್ಸ್, ಇಲೆಕ್ಟ್ರಾನಿಕ್ ಸಾಧನ ಇನ್ನಿತರ ಕ್ಷೇತ್ರಗಳಿಂದ ಗಳಿಸುತ್ತಿದೆ.

English summary
Auto component manufacturer Bosch Ltd, in a filing to the Bombay Stock Exchange on Tuesday morning, said the employee union of its Bangalore plant has called for a strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X