ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ: ಷೇರು ಸೂಚ್ಯಂಕ ಗಡಗಡ

|
Google Oneindia Kannada News

ಮುಂಬೈ, ಡಿಸೆಂಬರ್ 20: ಒಂದು ವಾರದಿಂದ ಚೇತರಿಕೆಯ ಗತಿಯಲ್ಲಿದ್ದ ಷೇರುಪೇಟೆ, ಗುರುವಾರ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರದಲ್ಲಿನ ಹೆಚ್ಚಳದಿಂದಾಗಿ ತಲ್ಲಣಗೊಂಡಿದೆ.

ಬೆಳಗಿನ ವ್ಯಾಪಾರ ವಹಿವಾಟು ಆರಂಭವಾದಾಗಲೇ ಬಿಎಸ್ ಇ ಸೆನ್ಸೆಕ್ಸ್ 250ಕ್ಕೂ ಅಧಿಕ ಅಂಕಗಳನ್ನು ಕಳೆದುಕೊಂಡಿತು. ಕೊನೆಗೆ ಸಂಜೆ ವೇಳೆಗೆ ಚೇತರಿಕೆ ಕಂಡು 52.66 ಅಂಕಗಳೊಂದಿಗೆ (ಶೇ 0.14) 36,431.67ರಲ್ಲಿ ಅಂತ್ಯಗೊಂಡಿತು.

ಆರ್ ಬಿಐನ ಹಣ ಬೇಡ ಅಂತಾರೆ ಜೇಟ್ಲಿ, ಬೇಕು ಅಂತಿದ್ದಾರೆ ಗರ್ಗ್ಆರ್ ಬಿಐನ ಹಣ ಬೇಡ ಅಂತಾರೆ ಜೇಟ್ಲಿ, ಬೇಕು ಅಂತಿದ್ದಾರೆ ಗರ್ಗ್

ಎನ್‌ಎಸ್‌ಇ ನಿಫ್ಟಿ 15.60 ಅಂಕಗಳಷ್ಟು ಕುಸಿತ ಅನುಭವಿಸಿದೆ. 10,951.70 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.

stock market sensex nifty federal reserve interest rate

ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರವನ್ನು ಈ ವರ್ಷ ನಾಲ್ಕನೆಯ ಬಾರಿಗೆ ಹೆಚ್ಚಳ ಮಾಡಿದ್ದು ಜಾಗತಿಕ ಮಾರುಕಟ್ಟೆಯಲ್ಲಿನ ಷೇರು ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ. ಮುಂದಿನ ವರ್ಷವೂ ಬಡ್ಡಿದರವನ್ನು ಇನ್ನಷ್ಟು ಹೆಚ್ಚಿಸುವ ಸುಳಿವು ನೀಡಿದೆ.

ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ, ಗ್ರಾಹಕರಿಗೆ ನೆಮ್ಮದಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ, ಗ್ರಾಹಕರಿಗೆ ನೆಮ್ಮದಿ

ಫೆಡರಲ್ ರಿಸರ್ವ್ ತನ್ನ ಬಡ್ಡಿದರವನ್ನು ಶೇ 2.25ರಿಂದ 2.50ಗೆ ಹೆಚ್ಚಿಸಿದೆ. 2008ರಿಂದ ಇದುವರೆಗಿನ ಅವಧಿಯಲ್ಲಿ ಇದು ಅತ್ಯಧಿಕ ಬಡ್ಡಿದರವಾಗಿದೆ.

ಯೆಸ್ ಬ್ಯಾಂಕ್, ಹೀರೋ ಮೊಟೊಕಾರ್ಪ್, ಎಂ ಆಂಡ್ ಎಂ, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ, ಟಾಟಾ ಮೋಟಾರ್ಸ್, ಎಲ್ ಆಂಡ್ ಟಿ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಶೇ 3.93ರಷ್ಟು ಸೆನ್ಸೆಕ್ಸ್ ಗಳಿಕೆ ಕಂಡಿವೆ.

ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು: ಐಎಂಎಫ್ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು: ಐಎಂಎಫ್

ಆದರೆ, ಭಾರ್ತಿ ಏರ್ ಟೆಲ್, ಎಸ್ ಬಿಐ, ವಿಪ್ರೋ, ವೇದಾಂತ, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇ 2.18ರಷ್ಟು ಇಳಿಕೆ ಅನುಭವಿಸಿವೆ.

ಎರಡೂ ವಿನಿಮಯ ಕೇಂದ್ರಗಳಲ್ಲಿ ಪಿಎಸ್ ಯು ಬ್ಯಾಂಕುಗಳು ಅತ್ಯಧಿಕ ಹಿನ್ನಡೆ ಅನುಭವಿಸಿವೆ.

English summary
Global markets tumble on Thursday following the hike in Federal Reserve interest rate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X