ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಷ್ಟದ ಹಾದಿ ಹಿಡಿದ ಷೇರು ಮಾರುಕಟ್ಟೆ; ರು. 200ಕ್ಕೂ ಹೆಚ್ಚು ಕುಸಿದ ಮಾರುತಿ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 12: ಸತತ ಐದು ಸೆಷನ್ ನಿಂದ ಏರು ಗತಿಯಲ್ಲಿ ಇದ್ದ ನಿಫ್ಟಿ ಸೂಚ್ಯಂಕವು ಗುರುವಾರ ಇಳಿಕೆ ಕಂಡಿತು. ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ ಹಾಗೂ ಐಟಿಸಿ ಷೇರುಗಳು ಇಳಿಕೆ ಕಂಡವು. ಜುಲೈ ತಿಂಗಳ ಕೈಗಾರಿಕೆ ಉತ್ಪಾದನೆ ದತ್ತಾಂಶ, ಆಗಸ್ಟ್ ತಿಂಗಳ ಚಿಲ್ಲರೆ ಹಣದುಬ್ಬರ ಮಾಹಿತಿ ಇನ್ನೇನು ಹೊರಬರಬೇಕಿದ್ದು, ಹೂಡಿಕೆದಾರರು ಕಾದುನೋಡುವ ಲೆಕ್ಕಾಚಾರದಲ್ಲಿ ಇದ್ದಾರೆ.

ಆಟೋ ಇಂಡಸ್ಟ್ರಿ ಬಿಕ್ಕಟ್ಟು: 'ನಿರ್ಮಲಾ ತಾಯ್' ಹೇಳದೆ ಉಳಿಸಿದ ಅಸಲಿ ಕಾರಣಗಳು!ಆಟೋ ಇಂಡಸ್ಟ್ರಿ ಬಿಕ್ಕಟ್ಟು: 'ನಿರ್ಮಲಾ ತಾಯ್' ಹೇಳದೆ ಉಳಿಸಿದ ಅಸಲಿ ಕಾರಣಗಳು!

ದೇಶದ ಚಿಲ್ಲರೆ ಹಣದುಬ್ಬರ ದರವು ಆಗಸ್ಟ್ ನಲ್ಲಿ ಹತ್ತು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೋಗಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಬಿಎಸ್ ಇ ಸೂಚ್ಯಂಕ 167 ಅಂಶಗಳಷ್ಟು ಕುಸಿದು, 37,104 ಅಂಶಕ್ಕೆ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು 54 ಅಂಶಗಳ ಇಳಿಕೆಯಾಗಿ, 11 ಸಾವಿರಕ್ಕಿಂತ ಕಡಿಮೆ ಮಟ್ಟಕ್ಕೆ, ಅಂದರೆ 10,982 ಅಂಶಗಳಿಗೆ ನಿಫ್ಟಿ ದಿನದ ವಹಿವಾಟು ಕೊನೆ ಮಾಡಿದೆ.

Stock Market News: Nifty, Sensex In Red; Maruti Suzuki Share Lose More Than 200 Rupees

ಆದರೂ ಬಿಎಸ್ ಇಯಲ್ಲಿ 1,370 ಷೇರುಗಳು ಏರಿಕೆಯಾದರೆ, 1,109 ಷೇರುಗಳು ಇಳಿಕೆ ಕಂಡಿವೆ. ಯೆಸ್ ಬ್ಯಾಂಕ್ ಷೇರುಗಳು ಐದು ಪರ್ಸೆಂಟ್ ಗೂ ಹೆಚ್ಚು ನಷ್ಟ ಅನುಭವಿಸಿದೆ. ನಂತರ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಆಕ್ಸಿಸ್ ಬ್ಯಾಂಕ್, ಭಾರ್ತಿ ಏರ್ ಟೆಲ್, ಬಜಾಜ್ ಆಟೋ ಷೇರುಗಳು ಭಾರೀ ಪ್ರಮಾಣದಲ್ಲಿ ನಷ್ಟ ಕಂಡಿವೆ.

ಆದರೆ, ಐಸಿಐಸಿಐ ಬ್ಯಾಂಕ್ ಎರಡು ಪರ್ಸೆಂಟ್ ಗಿಂತ ಹೆಚ್ಚು ಏರಿಕೆ ಕಂಡಿದೆ. ಸನ್ ಫಾರ್ಮಾ, ಎಚ್ ಡಿಎಫ್ ಸಿ ಷೇರುಗಳು ಕೂಡ ಲಾಭ ಕಂಡಿವೆ.

English summary
Nifty and Sensex index in red on Thursday. Yes Bank big loser. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X